Methanol Run Buses: ಬೆಂಗಳೂರಿನ ಮೊದಲ ಮೆಥೆನಾಲ್ ಬಸ್‌ಗಳಿಗೆ ಚಾಲನೆ ನೀಡಲಿರುವ ಸಚಿವ ನಿತಿನ್ ಗಡ್ಕರಿ
ಬೆಂಗಳೂರು, ಮಾರ್ಚ್ 12: ಸಿಲಿಕಾನ್ ಸಿಟಿ ಜನರು ಎಲೆಕ್ಟ್ರಿಕ್ ಬಸ್, ಡಬಲ್ ಡೆಕ್ಕರ್ ಬಸ್‌ಗಳಲ್ಲಿ ಓಡಾಡುವ ಜೊತೆಗೆ ಇನ್ನು ಮುಂದೆ ಮೆಥೆನಾಲ್ ಬಸ್‌ಗಳಲ್ಲಿಯೂ ಓಡಾಡಬಹದು. ಮಾರ್ಚ್ 12 ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರಿನ ಮೊದಲ ಮೆಥೆನಾಲ್ ಬಸ್‌ಗಳನ್ನು ಅನಾವರಣಗೊಳಿಸಲಿದ್ದಾರೆ.
ಎಂಡಿ15 (15 ಪ್ರತಿಶತ ಮೆಥೆನಾಲ್ ಹೊಂದಿರುವ ಡೀಸೆಲ್) ಬಸ್‌ಗಳ ಪ್ರಾಯೋಗಿಕ ಸಂಚಾರವನ್ನು ಸಂಜೆ 6 ಗಂಟೆಗೆ ವಿಧಾನಸೌಧದಿಂದ ಪ್ರಾರಂಭಿಸಲಾಗುವುದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಿರ್ದೇಶಕ (ಮಾಹಿತಿ ತಂತ್ರಜ್ಞಾನ) ಎ.ವಿ.ಸೂರ್ಯ ಸೇನ ತಿಳಿಸಿದ್ದಾರೆ.

ನೀತಿ ಆಯೋಗ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ಅಶೋಕ್ ಲೇಲ್ಯಾಂಡ್ ಜೊತೆಗೆ ಬಿಎಂಟಿಸಿ ಈ ಯೋಜನೆಯನ್ನು ನಡೆಸುತ್ತಿದೆ. ಬಸ್‌ಗಳು ಹೊರ ಉಗುಳುವ ಮಾಲಿನ್ಯ ಮಟ್ಟದಲ್ಲಿ ಗಣನೀಯ ಇಳಿಕೆಗೆ ಈ ಬಸ್‌ಗಳು ಕಾರಣವಾಗುವೆ. ಪ್ರಾಯೋಗಿಕ ಯೋಜನೆಗಾಗಿ ಒಟ್ಟು 80 ಮೆಥೆನಾಲ್ ಚಾಲಿತ ಬಸ್‌ಗಳನ್ನು ಸೇರಿಸಲು ಬಿಎಂಟಿಸಿ ಯೋಜಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ 80 ಮೆಥೆನಾಲ್ ಚಾಲಿತ ಬಸ್‌ಗಳಲ್ಲಿ, 20 ಅಶೋಕ್ ಲೇಲ್ಯಾಂಡ್ ಬಸ್‌ಗಳನ್ನು ಮೊದಲ ಹಂತದಲ್ಲಿ ಸೇರ್ಪಡೆ ಮಾಡಲಾಗುತ್ತದೆ. ನೀತಿ ಆಯೋಗ್‌ನೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಇತರ ಬಸ್ ತಯಾರಕರು ಮತ್ತಷ್ಟು ಬಸ್‌ಗಳನ್ನು ತಯಾರಿಸಿ ನೀಡುತ್ತಾರೆ. ಪ್ರಾಯೋಗಿಕ ಯೋಜನೆಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮೂರು ತಿಂಗಳ ಕಾಲ ಉಚಿತ ಡೀಸೆಲ್ ಮತ್ತು ಮೆಥೆನಾಲ್ ಅನ್ನು ನೀಡಲಿದೆ.
"ಮೆಥೆನಾಲ್ ಎಕಾನಮಿ' ಪರಿಕಲ್ಪನೆಯನ್ನು ಚೀನಾ, ಇಟಲಿ, ಸ್ವೀಡನ್, ಇಸ್ರೇಲ್, ಯುಎಸ್, ಆಸ್ಟ್ರೇಲಿಯಾ, ಜಪಾನ್ ಮತ್ತು ಇತರ ಹಲವು ಯುರೋಪಿಯನ್ ರಾಷ್ಟ್ರಗಳು ಸಕ್ರಿಯವಾಗಿ ಅನುಸರಿಸುತ್ತಿವೆ. ಸಾರಿಗೆ ವಲಯದಲ್ಲಿ ಚೀನಾದಲ್ಲಿ ಶೇಕಡಾ 10 ರಷ್ಟು ಇಂಧನ ಮೆಥನಾಲ್ ಆಗಿದೆ" ಎಂದು ನೀತಿ ಆಯೋಗದ ದಾಖಲೆ ತಿಳಿಸುತ್ತವೆ. ನೈಸರ್ಗಿಕ ಅನಿಲ, ಕಲ್ಲಿದ್ದಲು ಹಾಗೂ ಪುರಸಭೆಯ ತ್ಯಾಜ್ಯ ಮತ್ತು ಜೀವರಾಶಿಯಿಂದ ಮೆಥನಾಲ್ ಅನ್ನು ಉತ್ಪಾದಿಸಬಹುದು.

ಎಂ100 (100 ಪ್ರತಿಶತ ಮೆಥನಾಲ್) ಟ್ರಕ್‌ನ ಮೂಲಮಾದರಿಯನ್ನು ಸಹ ಈವೆಂಟ್‌ನಲ್ಲಿ ಅನಾವರಣಗೊಳಿಸಲಾಗುತ್ತದೆ. 2010 ರಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) 7.7 ಪ್ರತಿಶತ ಎಥೆನಾಲ್ ಅನ್ನು ಡೀಸೆಲ್‌ನೊಂದಿಗೆ ಬೆರೆಸುವ ಪ್ರಯೋಗವನ್ನು ನಡೆಸಿತು. ಆದರೆ, ಅದನ್ನು ಹೆಚ್ಚಿಸಲು ಪಾಲಿಕೆ ವಿಫಲವಾಗಿದೆ. ಬಿಎಂಟಿಸಿ ತನ್ನ ವ್ಯಾಪ್ತಿಯಲ್ಲಿ 6,000 ಕ್ಕೂ ಹೆಚ್ಚು ಬಸ್‌ಗಳನ್ನು ಹೊಂದಿದೆ, ದಿನಕ್ಕೆ 2.4 ಲಕ್ಷ ಲೀಟರ್ ಡೀಸೆಲ್ ಖರೀದಿಸುತ್ತದೆ.












Click it and Unblock the Notifications