ಬೆಂಗಳೂರಿನಿಂದ ಈ ದೇಶಕ್ಕೆ ಮೊದಲ ನೇರ ವಿಮಾನ, ಎಲ್ಲಿಗೆ ಗೊತ್ತಾ

ಬೆಂಗಳೂರು, ಸೆಪ್ಟೆಂಬರ್‌ 15: ಆಸ್ಟ್ರೇಲಿಯಾದ ಕ್ಯಾರಿಯರ್ ಕ್ವಾಂಟಾಸ್ ವಿಮಾನ ಸಂಸ್ಥೆಯು ತನ್ನ ಮೊದಲ ನೇರ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಸಿಡ್ನಿಗೆ ಆರಂಭಿಸಿದೆ.

ಕ್ಯಾರಿಯರ್ ಕ್ವಾಂಟಾಸ್ ಕಂಪೆನಿಯ ಕ್ಯೂಎಫ್ 68 ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಹಾರಾಟ ಪ್ರಾರಂಭಿಸಿದೆ. ಇದು ಕರ್ನಾಟಕದಿಂದ ಆಸ್ಟ್ರೇಲಿಯಾದ ಸಿಡ್ನಿ ನಗರಕ್ಕೆ ಹಾರುತ್ತಿರುವ ಮೊದಲ ನೇರ ವಿಮಾನ ಎಂದು ವರದಿಗಳು ಹೇಳಿವೆ.

ಬೆಂಗಳೂರಿನಿಂದ ಸಿಡ್ನಿಯ ಕಿಂಗ್ಸ್‌ಫೋರ್ಡ್ ಸ್ಮಿತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನವು ಸುಮಾರು 11 ಗಂಟೆಗಳ ಅವಧಿಯಲ್ಲಿ ಸಂಚಾರ ಮಾಡಲಿದೆ. ಕ್ವಾಂಟಾಸ್ ತನ್ನ ಏರ್‌ಬಸ್ ಎ330 ಅನ್ನು ಸಿಡ್ನಿಗೆ ಪ್ರಯಾಣಕ್ಕಾಗಿ ಹಾರಿಸಲಿದೆ. ಇದು ಭಾರತೀಯ ಪ್ರಯಾಣಿಕರಿಗೆ ಬಹುನಿರೀಕ್ಷಿತ ಸೇವೆಯಾಗಿದೆ. ಮೊದಲ ದಿನವೇ ಸೀಟುಗಳು ಸಂಪೂರ್ಣವಾಗಿ ಬುಕ್‌ ಆಗಿದ್ದವು. ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳು ಸಹ ಸಂಪೂರ್ಣವಾಗಿ ಬುಕ್‌ ಆಗಿದ್ದವು ಎಂದು ವರದಿಗಳು ಹೇಳಿವೆ.

First direct flight from Bangalore to Australias Sydney begins

ಏತನ್ಮಧ್ಯೆ ಮತ್ತೊಂದು ಕ್ವಾಂಟಾಸ್ ವಿಮಾನವು ಬುಧವಾರದಂದು ಸಿಡ್ನಿಯಿಂದ ಬೆಂಗಳೂರಿಗೆ ಆ ಕಡೆಯಿಂದ ಹೊರಟಿತ್ತು. ಕ್ಯೂಎಫ್ 67 ವಿಮಾನವು ಸಂಪೂರ್ಣವಾಗಿ ಬುಕ್ ಆಗಿದ್ದು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆಗೆ ಸಂಜೆ 4.55 ರ ಸುಮಾರಿಗೆ ಇಳಿದಿತ್ತು. ಆಸ್ಟ್ರೇಲಿಯಾದ ವಿಮಾನಯಾನ ಸಂಸ್ಥೆಯು ಭಾರತದ ಇಂಡಿಗೋದೊಂದಿಗೆ ಕೋಡ್‌ಶೇರ್ ಒಪ್ಪಂದವನ್ನು ಮಾಡಿಕೊಂಡಿದೆ. ಅದರ ಅಡಿಯಲ್ಲಿ ಅದು ಸಿಡ್ನಿ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರು ನಡುವೆ ವಾರಕ್ಕೆ ನಾಲ್ಕು ರಿಟರ್ನ್ ಫ್ಲೈಟ್‌ಗಳನ್ನು ತಲಾ ಒಂದು ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಪ್ರಯಾಣಿಸುತ್ತದೆ.

First direct flight from Bangalore to Australias Sydney begins

ಕೋಡ್‌ಶೇರ್ ಒಪ್ಪಂದವು ಒಂದು ಏರ್‌ಲೈನ್‌ಗೆ ಮತ್ತೊಂದು ಏರ್‌ಲೈನ್‌ನಲ್ಲಿ ಆಸನಗಳನ್ನು ಮಾರಾಟ ಮಾಡಲು ಅನುಮತಿಸುತ್ತದೆ. ಅದು ವಾಯುಪ್ರದೇಶದಲ್ಲಿ ನಿಯಮಿತ ಕಾರ್ಯಾಚರಣೆಗಳನ್ನು ಹೊಂದಿದೆ. ಹೊಸ ಮಾರ್ಗಗಳಲ್ಲಿ ತೊಡಗಿರುವ ವಿಮಾನಯಾನ ಕಂಪನಿಗಳಿಗೆ ಇದು ಅನುಕೂಲಕರವಾಗಿದೆ. ಕಳೆದ ತಿಂಗಳಿನಿಂದ ಎಮಿರೇಟ್ಸ್‌ನ ಕೂಡ ಅಕ್ಟೋಬರ್ 30 ರಂದು ಮೊದಲ ಬಾರಿಗೆ ಏರ್‌ಬಸ್ ಎ 380 ವಿಶ್ವದ ಅತಿದೊಡ್ಡ ವಾಣಿಜ್ಯ ವಿಮಾನವನ್ನು ಬೆಂಗಳೂರಿಗೆ ಹಾರಿಸಲು ಸಿದ್ಧವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+