ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಮದ್ಯದಂಗಡಿ ಓಪನ್ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ

|
Google Oneindia Kannada News

ಬೆಂಗಳೂರು, ಮೇ 4: ದೇಶಾದ್ಯಂತ ಮದ್ಯದಂಗಡಿ ತೆರೆಯಲಾಗಿದೆ. ಸುಮಾರು 40 ದಿನದ ಲಾಕ್‌ಡೌನ್‌ ಬಳಿಕ ಮದ್ಯದ ಮಾರಾಟ ಮಾಡಲಾಗುತ್ತಿದ್ದು, ದೇಶದ ಹಲವು ಕಡೆ ಮದ್ಯ ಪ್ರಿಯರು ಸಂಭ್ರಮಿಸಿದ್ದಾರೆ.

ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಂತೆ ನಿರೀಕ್ಷೆಗೂ ಮೀರಿದ ಜನರು ಮದ್ಯ ಖರೀದಿ ಮಾಡಲು ಮುಗಿಬಿದ್ದಿದ್ದಾರೆ. ಬೆಳಿಗ್ಗೆಯಿಂದಲೇ ಕ್ಯೂನಲ್ಲಿ ನಿಂತು ಎಣ್ಣೆ ಖರೀದಿ ಮಾಡಿದ್ದಾರೆ. ಬಹುತೇಕ ಎಲ್ಲ ಮದ್ಯದಂಗಡಿಗಳ ಮುಂದೆ ನೂರಾರು ಜನರು ಸಾಲುಗಟ್ಟಿ ನಿಂತಿದ್ದರು.

ಮದ್ಯ ಮಾರಾಟಕ್ಕೆ ಅನುಮತಿ: ಒಬ್ಬರು ಎಷ್ಟು ತೆಗೆದುಕೊಳ್ಳಬಹುದು?ಮದ್ಯ ಮಾರಾಟಕ್ಕೆ ಅನುಮತಿ: ಒಬ್ಬರು ಎಷ್ಟು ತೆಗೆದುಕೊಳ್ಳಬಹುದು?

ಮದ್ಯದಂಗಡಿ ಓಪನ್ ಆಗಿದ್ದಕ್ಕೆ ಕರ್ನಾಟಕದ ಹಲವು ಕಡೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಕೋಲಾರದ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ಪಟಾಕಿ ಕೈಯಲ್ಲಿ ಹಿಡಿದು ಸಾಲಿನಲ್ಲಿ ನಿಂತಿದ್ದರು, ಮದ್ಯದಂಗಡಿ ತೆರೆಯುತ್ತಿದ್ದಂತೆ ಪಟಾಕಿ ಸಿಡಿಸಿ ಜೈಕಾರ ಹಾಕಿದ್ದಾನೆ.

Firecrackers Brust In Front Of Liquor Shops At Karanataka

ಕೋಲಾರದಲ್ಲಿ ಮಾತ್ರವಲ್ಲ, ಇನ್ನು ಹಲವು ಕಡೆ ಮದ್ಯಪ್ರಿಯರು ಅಂಗಡಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದ ಸಂದರ್ಭದಿಂದಲೂ ಮದ್ಯದಂಗಡಿ ಓಪನ್ ಮಾಡಲು ಮದ್ಯಪ್ರಿಯರು ಬೇಡಿಕೆಯಿಟ್ಟಿದ್ದರು. ಇನ್ನು ದೇಶದ ಆರ್ಥಿಕತೆ ಕುಸಿತ ಕಂಡಿದ್ದರಿಂದ ಮದ್ಯ ಮಾರಾಟ ಮಾಡುವುದು ಅನಿವಾರ್ಯ ಎಂದು ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು.

ಅಂತಿಮವಾಗಿ, ರಾಜ್ಯ ಸರ್ಕಾರಗಳ ಬೇಡಿಕೆ ಮಣಿದ ಕೇಂದ್ರ ಸರ್ಕಾರ, ಕೆಲವೊಂದು ಷರತ್ತು ವಿಧಿಸಿ, ಮಾರ್ಗಸೂಚಿಗಳನ್ನು ಹೊರಡಿಸಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ.

English summary
People celebrate the opening of liquor shops by bursting crackers in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X