Get Updates
Get notified of breaking news, exclusive insights, and must-see stories!

BBMP: ಅನಧಿಕೃತ ಬೊರ್‌ವೆಲ್ ಕೊರೆತ, ಇತರರ ಆಸ್ತಿಗೆ ಹಾನಿ ಪ್ರಕರಣ: ಎರಡು ಪ್ರತ್ಯೇಕ FIR ದಾಖಲು

ಬೆಂಗಳೂರು, ಅಕ್ಟೋಬರ್ 07: ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿ ಬೇಕು. ಅನುಮತಿ ಸಿಕ್ಕು ಕೊಳವೆ ಬಾವಿಯಲ್ಲಿ ನೀರು ಸಿಗದಿದ್ದರೆ, ಯಾವುದೇ ಅನಾಹುತ ಸಂಭವಿಸಿದಂತೆ ಅದನ್ನು ಮುಚ್ಚಬೇಕು. ಕೊಳವೆ ಬಾವಿ ಕೊರೆಸಲು ಹಲವು ನಿಯಮಗಳಿವೆ. ಹೀಗಿದ್ದರೂ ಬೆಂಗಳೂರಿನ ಆರ್‌ಆರ್ ನಗರದಲ್ಲಿ ಅನಧಿಕೃತವಾಗಿ ಬೋರ್‌ವೆಲ್ ಕೊರೆಸುತ್ತಿದ್ದವನ ವಿರುದ್ಧ ಹಾಗೂ ಕಟ್ಟಡ ನಿರ್ಮಾಣ ವೇಳೆ ಆಸ್ತಿಗೆ ಹಾನಿ ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೊಳವೆ ಬಾವಿ ಕೊರೆಸಲಾಗುತ್ತಿತ್ತು. ಬಿಬಿಎಂಪಿಯಿಂದ ಅನುಮತಿ ಪಡೆಯದೇ ಆರ್.ಆರ್ ನಗರ ವಲಯ ಹೇರೋಹಳ್ಳಿ ವಾರ್ಡ್‌ನ ವೀರಭದ್ರೇಶ್ವರ ನಗರ ಓಂ ಸಾಯಿ ಪಬ್ಲಿಕ್ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿ ಕೊಳವೆ ಬಾವಿ ಕೊರೆಸಲಾಗುತ್ತಿತ್ತು.

FIR Against Those Who Were Illegally Drilling Bore Well in RR Nagar Under BBMP

ಈ ವಿಷಯ ತಿಳಿಯುತ್ತಿದ್ದಂತೆ ವೀರಭದ್ರೇಶ್ವರ ನಗರ ಓಂ ಸಾಯಿ ಪಬ್ಲಿಕ್ ಮುಖ್ಯ ರಸ್ತೆಯ ಈ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳಿಗೆ, ಪಾಲಿಕೆ ಅನುಮತಿ ಇಲ್ಲದೇ ಅಕ್ಟೋಬರ್ 3ರಿಂದ 4ರ ಸಂಜೆ ವರೆಗೆ ಕೊಳವೆ ಬಾವಿ ಕೊರೆಸಿದ ಮಾಹಿತಿ ಲಭ್ಯವಾಗಿದೆ.

ರಸ್ತೆ ಹಾಳು ಮಾಡಿದ್ದಕ್ಕೆ ಬಿಬಿಎಂಪಿ ಗರಂ

ಸ್ಥಳಕ್ಕೆ ಬಂದ ಅಧಿಕಾರಿಗಳು, ಸಾರ್ವಜನಿಕ ರಸ್ತೆಯನ್ನು ಅಗೆದು ಹಾಳು ಮಾಡಿ ಕೊಳವೆ ಬಾವಿಯನ್ನು ಪಾಲಿಕೆಯ ರಸ್ತೆಯಲ್ಲಿ ಕೊರೆಸುತ್ತಿದ್ದವರಿಗೆ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗಾಗಿ ನಿರ್ಮಾಣ ಮಾಡಿದ ಡಾಂಬರು ರಸ್ತೆಯನ್ನು ಹಾಳು ಮಾಡಿದ್ದಕ್ಕೆ ಬಿಬಿಎಂಪಿ ಅಧಿಕಾರಿಗಳು ಗರಂ ಆದರು.

ಈ ಪ್ರಕರಣ ಸಂಬಂಧ ಅಕ್ಟೋಬರ್ 4ರಂದು ಪಾಲಿಕೆ ಅಧಿಕಾರಿಯು ಮಾಗಡಿ ಮುಖ್ಯ ರಸ್ತೆಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಳವೆ ಬಾವಿ ಕೊರೆಸಿದವರ ಹಾಗೂ ಬೋರ್‌ವೆಲ್ ಕೊರೆಯುವ ವಾಹನದ ಮೇಲೆ ಕಾನೂನು ಕ್ರಮ ಕೈಗೊಳ್ಳಲು ದೂರು ನೀಡಿದ್ದಾರೆ.

FIR Against Those Who Were Illegally Drilling Bore Well in RR Nagar Under BBMP

ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಥಮ ವರ್ತಮಾನ ವರದಿ(ಎಫ್.ಐ.ಆರ್) ದಾಖಲಿಸಿಕೊಳ್ಳಲಾಗಿದೆ. ಕೂಡಲೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಲು ಪೊಲೀಸ್ ಠಾಣೆಯಲ್ಲಿ ಕೋರಲಾಗಿದೆ. ಅಲ್ಲದೆ ಅನಧಿಕೃತವಾಗಿ ರಸ್ತೆಯಲ್ಲಿ ಕೊಳವೆ ಬಾವಿ ಕೊರೆದವರಿಗೆ ದಂಡ ವಿಧಿಸಲು ಕೂಡಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕಟ್ಟಡ ನಿರ್ಮಾಣ: ಆಸ್ತಿಗೆ ಹಾನಿ ಮಾಡಿದವರ ಮೇಲೆ ಎಫ್‌ಐಆರ್

ಇದೇ ರಾಜರಾಜೇಶ್ವರಿ ನಗರ ವಲಯದ ಕೆಂಚೇನಹಲ್ಲಿಯ ಐಡಿಯಲ್ ಹೋಮ್ಸ್ ಪೆಟ್ರೋಲ್ ಬ್ಯಾಂಕ್ ಬಳಿ ಮಂಜೇಗೌಡ ಎಂಬುವವರು ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿ ಪಡೆಯದೆ ಸುಮಾರು 6-8 ಅಡಿ ಆಳ ತಳಪಾಯದ(Earth Work Excavation) ಕಾಮಗಾರಿ ಮಾಡಲಾಗುತ್ತಿತ್ತು. ಇದರಿಂದ ಸುಮಾರು 70 ಅಡಿ ಉದ್ದದಷ್ಟು ಪಾದಚಾರಿ ರಸ್ತೆ ಹಾಗೂ ಒಳಚರಂಡಿಯು ಕುಸಿದು ಬಿದ್ದಿದೆ. ಪರಿಣಾಮ ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗುತ್ತಿದೆ.

ಅಲ್ಲದೇ ಒಳಚರಂಡಿ ಮುಂಭಾಗದಲ್ಲಿರುವ ಬಿ.ಎಂ.ಟಿ.ಸಿ ಬಸ್ ನಿಲ್ದಾಣವು ಸಹ ಕುಸಿಯುವ ಆತಂಕ ಎದುರಾಗಿದೆ. ಇಲಾಖೆಗೆ ಸರಿ ಸುಮಾರು 20 ಲಕ್ಷ ರೂ.ಗಳವರೆಗೂ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಕಟ್ಟಡ ಕಾಮಗಾರಿ ವೇಳೆಯಲ್ಲಿ ಯಾವುದೇ ಮುಂಜಾಗೃತ ಕ್ರಮ ಅನುಸರಿಸದೆ ಕಾಮಗಾರಿ ಮಾಡುತ್ತಿರುವುದರಿಂದ ಅಕ್ಕ-ಪಕ್ಕದ ಮನೆಗಳಿಗೂ ಸಹ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದಲೇ ಕಟ್ಟಡ ಮಾಲೀಕರ ಮೇಲೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+