ಬನ್ನೇರುಘಟ್ಟ : ಮಹಿಳೆಯ ಕೊಲೆ- 3 ನೇಪಾಳಿಗಳು ಅರೆಸ್ಟ್
ಬೆಂಗಳೂರು, ಮೇ.17: ನಗರದ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದ ಮಹಿಳೆಯ ನಿಗೂಢ ಕೊಲೆ ಪ್ರಕರಣವನ್ನು ಆಡುಗೋಡಿ ಪೊಲೀಸರು ಭೇದಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ನೇಪಾಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುರೇಶ್ (24), ಧನರಾಜ್(36), ಲೋಕೇಶ್ ಬಹದ್ದೂರ್(27) ಬಂಧಿತ ಆರೋಪಿಗಳು.
ಬನ್ನೇರುಘಟ್ಟ ರಸ್ತೆಯಲ್ಲಿರುವ ಎರ್‍ಶೈನ್ ಮಾರ್ಬಲ್ಸ್ ಅಂಡ್ ಗ್ರಾನೈಟ್ಸ್ ಎಂಬ ಸಂಸ್ಥೆಗೆ ಸೇರಿರುವ ಖಾಲಿ ಜಾಗದಲ್ಲಿ ಮೇ 7ರಂದು ಅರೆನಗ್ನ ಕೊಳೆತ ಸ್ಥಿತಿಯಲ್ಲಿ ಬಿದ್ದಿದ್ದ ಓರ್ವ ಮಹಿಳೆಯ ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆಯ ಬಳಿಕ ಪೊಲೀಸರು ಇದು ಬಿಳೇಕಹಳ್ಳಿಯ ನಿವಾಸಿ ನಯೀಮುನ್ನೀಸ(48) ಶವ ಎಂದು ಪೊಲೀಸರು ಪತ್ತೆ ಹಚ್ಚಿದ್ದರು.

ಈ ಆರೋಪಿಗಳು ಕೊಲೆಯಾದ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಹಣಕಾಸಿನ ವಿಚಾರದಲ್ಲಿ ಮನಸ್ತಾಪವುಂಟಾಗಿ ಮೇ.1ರಂದು ರಾತ್ರಿ ಜಗಳ ಮಾಡಿ, ಮೂವರು ಸೇರಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾರೆ.
ದಕ್ಷಿಣ ವಿಭಾಗದ ಡಿ.ಸಿ.ಪಿ ರಹೆಚ್.ಎಸ್.ರೇವಣ್ಣ ಹಾಗೂ ಜಯನಗರ ಉಪ ವಿಭಾಗ ಎಸಿಪಿ ಯಶವಂತ್ ಸಾವರ್ಕರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.












Click it and Unblock the Notifications