ಕೊನೆಗೂ ಬೆಂಗಳೂರಿಗೆ ಸಿಕ್ಕಿತು ಎನ್ಎಸ್‌ಜಿ
ಬೆಂಗಳೂರು, ಡಿ. 30: ಕರ್ನಾಟಕದಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕೇಂದ್ರ ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಕೋರುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಸೊಪ್ಪು ಹಾಕಿರಲಿಲ್ಲ. ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ನಂತರ ಬೆಂಗಳೂರಿನಲ್ಲೂ ಎನ್‌ಎಸ್‌ಜಿ ಕೇಂದ್ರ ಸ್ಥಾಪಿಸಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನಿರ್ಧರಿಸಿದೆ.
ಅಷ್ಟಕ್ಕೂ ಈಗ ಮನವಿ ಕೊಟ್ಟಿದ್ದು ರಾಜ್ಯ ಸರ್ಕಾರವಲ್ಲ. ಕೇಂದ್ರ ಸಚಿವರಾದ ಅನಂತ್‌ಕುಮಾರ್ ಮತ್ತು ಡಿ.ವಿ. ಸದಾನಂದಗೌಡ. ಇಬ್ಬರೂ ಸೋಮವಾರ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಎನ್ಎಸ್ಜಿ ಕೇಂದ್ರ ಪ್ರಾರಂಭಿಸಬೇಕೆಂದು ಕೋರಿದ್ದರು. ಈ ಮನವಿಗೆ ಕೇಂದ್ರ ಗೃಹ ಸಚಿವರು ತಕ್ಷಣ ಸ್ಪಂದಿಸಿದ್ದಾರೆ. [ಎನ್ಎಸ್ ಜಿ ಘಟಕ ಸ್ಥಾಪಿಸಲು ಸಿಎಂ ಮೊರೆ]
ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಉಗ್ರರ ಸಂಭಾವ್ಯ ಆಕ್ರಮಣಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಪ್ರಸ್ತಾವನೆ ಕಳುಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆ ಕೊಟ್ಟಿದ್ದಾರೆ.

ಅನೇಕ ನಗರಗಳಲ್ಲಿ ಸ್ಥಾಪನೆ : ಹಿಂದಿನ ಯುಪಿಎ ಸರ್ಕಾರವೇ ಬೆಂಗಳೂರಿನಲ್ಲಿ ಎನ್ಎಸ್ಜಿ ಕೇಂದ್ರ ತೆರೆಯುವುದಾಗಿ ಭರವಸೆ ನೀಡಿದ್ದರೂ ಈಡೇರಿಸಿರಲಿಲ್ಲ. ಈಗ ಬೆಂಗಳೂರಿನ ಜೊತೆಗೆ ಜೋಧ್‌ಪುರ್, ಗುರ್ಗಾಂವ್, ಪುಣೆ, ಬೆಂಗಳೂರು, ಲಕ್ನೋ ಮುಂತಾದ ನಗರಗಳಲ್ಲೂ ಎನ್ಎಸ್‌ಜಿ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. [ಮೈಸೂರು ಅರಮನೆಗೆ ಎನ್ಎಸ್ ಜಿ ತಂಡ ಭೇಟಿ]
ಪ್ರಸ್ತುತ ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ಎನ್ಎಸ್‌ಜಿ ಕೇಂದ್ರಗಳಿವೆ. ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ಮೇಲೆ ಉಗ್ರರ ಕಾಕದೃಷ್ಟಿ ಬಿದ್ದಿರುವುದು ಎಂದೋ ದೃಢಪಟ್ಟಿದೆ. ಬೆಂಗಳೂರಿನಲ್ಲಿ ಹಲವು ಬಾರಿ ಬಾಂಬ್ ಸ್ಫೋಟಗಳು ಸಂಭವಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ಸಾಫ್ಟ್‌ವೇರ್ ಕಂಪನಿ ಉಗ್ರರ ಟಾರ್ಗೆಟ್ : ಐಟಿ ಹಬ್ ಎನ್ನಿಸಿಕೊಂಡಿರುವ ಬೆಂಗಳೂರಿನಲ್ಲಿ ದೇಶ ಹಾಗೂ ವಿದೇಶ ಮೂಲದ ಹಲವು ಸಾಫ್ಟ್‌ವೇರ್ ಕಂಪನಿಗಳು ಕೆಲಸ ಮಾಡುತ್ತಿವೆ. ಭಾರತ ಹಾಗೂ ಅಮೆರಿಕ ಉಗ್ರರ ಪ್ರಮುಖ ಗುರಿಯಲ್ಲಿರುವ ದೇಶಗಳು. ಬೆಂಗಳೂರಿನಲ್ಲಿರುವ ಅಮೆರಿಕ ಮೂಲದ ಸಾಫ್ಟ್‌ವೇರ್ ಕಂಪನಿಗಳ ಮೇಲೆ ಉಗ್ರರು ದಾಳಿ ನಡೆಸುವ ಸಂಭವನೀಯತೆ ದಟ್ಟವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತಳೆದಿದೆ.
ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ತಕ್ಷಣ ಸ್ಪಂದಿಸಿರುವ ಕರ್ನಾಟಕ ಸರ್ಕಾರ ಎನ್ಎಸ್‌ಜಿ ಕೇಂದ್ರ ತೆರೆಯಲು ಬೆಂಗಳೂರಿನ ಹೊರವಲಯದಲ್ಲಿ 100 ಎಕರೆ ಜಾಗವನ್ನು ಗುರುತಿಸಿದೆ ಎಂದು ಮೂಲಗಳು ತಿಳಿಸಿವೆ. [ಮೋದಿ ರಕ್ಷಣೆಗೆ ಪೊಸಿಷನ್ ತೆಗೆದುಕೊಂಡ ಎಸ್ ಪಿಜಿ]

ಎನ್‌ಎಸ್‌ಜಿ ಕಾರ್ಯವೇನು? : ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಎಂಟು ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಎನ್ಎಸ್‌ಜಿ (ರಾಷ್ಟ್ರೀಯ ಭದ್ರತಾ ಪಡೆ) ಕೂಡ ಒಂದು. 1984ರಲ್ಲಿ ಕೇಂದ್ರ ಸರ್ಕಾರ ಈ ಪಡೆಯನ್ನು ಸ್ಥಾಪಿಸಿತು. ವಿವಿಧ ರಾಜ್ಯಗಳಲ್ಲಿ ಉಗ್ರರ ಚಟುವಟಿಕೆ ಮಟ್ಟ ಹಾಕುವುದೇ ಎನ್ಎಸ್‌ಜಿ ಸ್ಥಾಪನೆಯ ಉದ್ದೇಶ.
ಇದರಲ್ಲಿ ಎರಡು ಘಟಕಗಳಿವೆ. ಒಂದು ಎಸ್ಎಜಿ (ಸ್ಪೆಷಲ್ ಆಕ್ಷನ್ ಗ್ರುಪ್) ಇದರಲ್ಲಿ ಸಂಪೂರ್ಣ ಸೈನಿಕ ಸಿಬ್ಬಂದಿ ಇರುತ್ತಾರೆ. ಮತ್ತೊಂದು ಎಸ್ಆರ್‌ಜಿ (ಸ್ಪೆಷಲ್ ರೇಂಜರ್ ಗ್ರುಪ್). ಇದರಲ್ಲಿ ಕೆಲವರು ರಾಜ್ಯ ಪೊಲೀಸ್‌ನಿಂದ ನೇಮಕಗೊಂಡವರು, ಇನ್ನು ಕೆಲವರು ವಿವಿಧ ಸಶಸ್ತ್ರ ಪೊಲೀಸ್ ಪಡೆಗಳಿಂದ ಆರಿಸಲ್ಪಟ್ಟವರು.
ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಇದರ ಮುಖ್ಯಸ್ಥರಾಗಿರುತ್ತಾರೆ. ಅವರಿಗೆ 'ಡೈರೆಕ್ಟರ್ ಜನರಲ್' ಎಂದು ಕರೆಯುತ್ತಾರೆ. ಇದು ಭಾರತೀಯ ಭೂ ಸೇನೆಯ ಲೆಫ್ಟಿನೆಂಟ್ ಜನರಲ್‌ಗೆ ಸಮಾನ ಹುದ್ದೆಯಾಗಿದೆ.
ಹೆಗ್ಗಳಿಕೆಗಳು : ಎನ್ಎಸ್‌ಜಿ ಈ ಹಿಂದೆ ನಡೆಸಿರುವ ವಿವಿಧ ಕಾರ್ಯನಿರ್ವಹಣೆಗಳು ಶ್ಲಾಘನೆಗೆ ಒಳಗಾಗಿವೆ. ಅಮೃತ ಸರದಲ್ಲಿರುವ ಸ್ವರ್ಣ ಮಂದಿರ, ರಾಜೀವ್ ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಮುಂಬಯಿ ಮೇಲೆ ನಡೆದ ಉಗ್ರರ ದಾಳಿ ಮುಂತಾದ ಸಂದರ್ಭದಲ್ಲಿ ಎನ್ಎಸ್‌ಜಿ ಪಡೆಗಳ ಕಾರ್ಯನಿರ್ವಹಣೆ ಸಾಕಷ್ಟು ಶ್ಲಾಘನೆಗೊಳಗಾಗಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications