ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲೆಗಳಲ್ಲಿ ಸುರಕ್ಷತಾ ಕ್ರಮ: ಸರ್ಕಾರಕ್ಕೆ ಆದೇಶಿಸಿದ ಹೈಕೋರ್ಟ್

By Vanitha
|
Google Oneindia Kannada News

ಬೆಂಗಳೂರು, ಆಗಸ್ಟ್, 06 : ಶಾಲೆಗಳಲ್ಲಿ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ, ಹಿಂಸಾತ್ಮಕ ಕೃತ್ಯಗಳನ್ನು ತಡೆಗಟ್ಟಲು ಮುಂದಾಗಿರುವ ರಾಜ್ಯ ಹೈಕೋರ್ಟ್ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕೆಲವು ನಿಯಮಾವಳಿಗಳನ್ನು ಶೀಘ್ರದಲ್ಲಿ ರೂಪಿಸಬೇಕೆಂದು ಸರ್ಕಾರಕ್ಕೆ ಆದೇಶಿಸಿದೆ.

ಶಾಲಾ ನಿಯಮಗಳನ್ನು ನಿಗದಿತ ಸಮಯದಲ್ಲಿ ಅಂತಿಮಗೊಳಿಸಲು ಆಗಿರುವ ವಿಳಂಬ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಸುಮಾರು ದಿನಗಳ ಹಿಂದೆಯೇ ನಿಯಮಾವಳಿಗಳ ರಚನೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ಇದೀಗ ತಕ್ಷಣವೇ ಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಹೇಳಿದರು.[ಒಲ್ಲದ ಗರ್ಭ ತೆಗೆಸಿದ ಅತ್ಯಾಚಾರ ಸಂತ್ರಸ್ತೆಗೆ ನವಜೀವ!]

Finalise policy on students safety in schools quickly, HC tells govt

ಸರ್ಕಾರಕ್ಕೆ ಎರಡು ವಾರದ ಒಳಗಾಗಿ ನಿಯಮಾವಳಿಗಳನ್ನು ಅಂತಿಮಗೊಳಿಸಿ, ಎಲ್ಲಾ ಖಾಸಗಿ ಶಾಲೆಗಳಿಗೆ ವಿತರಿಸಬೇಕೆಂದು ಅಧಿಸೂಚನೆ ಹೊರಡಿಸಿರುವ ಹೈಕೋರ್ಟ್ 'ಸರ್ಕಾರ ಅತಿಶೀಘ್ರದಲ್ಲಿ ನಿಯಮಗಳನ್ನು ರೂಪಿಸಿ ಖಾಸಗಿ ಶಾಲೆಗಳಿಗೆ ಕಳುಹಿಸಿಕೊಡುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದೆ.

ಶಾಲೆಗಳಲ್ಲಿ ಅಸುರಕ್ಷತಾ ಭಾವ ಕಾಡುತ್ತಿರುವ ಬೆನ್ನಲೇ ಪೊಲೀಸ್ ಆಯುಕ್ತರಿಗೆ ಪೋಷಕರಿಂದ ಹಲವಾರು ದೂರುಗಳು ಸಲ್ಲಿಕೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು ಶಾಲಾ ನಿಯಮಾವಳಿಗಳ ಜಾರಿಗೆ ಪ್ರಯತ್ನಶೀಲರಾಗಿದ್ದರು. ಆದರೆ ಇದೀಗ ಹೈಕೋರ್ಟ್ ಸರ್ಕಾರಕ್ಕೆ ನಿಯಮಾವಳಿಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆದೇಶಿಸಿ ಎಲ್ಲರ ಆತಂಕ ನಿವಾರಿಸಿದೆ ಎಂದು ಅಡ್ವೋಕೇಟ್ ಜನರಲ್ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಇಂದಿರಾ ನಗರ ಹಾಗೂ ವಿಬ್ ಗಯರ್ ಶಾಲೆಗಳ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತಾಗಿ ಸಾರ್ವಜನಿಕರಿಂದ, ಪೋಷಕರಿಂದ ಆಕ್ರೋಶ ಭರಿತ ಪ್ರತಿಭಟನೆ ನಡೆದಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಂಡ ಹೈಕೋರ್ಟ್ ಸರ್ಕಾರಕ್ಕೆ ಶಾಲಾ ನಿಯಮಾವಳಿಗಳ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿದೆ.

English summary
The Karnataka High Court have gave a responsibility to government the Finalise policy on students safety in schools.Justice A.S Bopanna expressed displare over the finalization of the policy. But they are told that within two weeks government send the school policy to all private schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X