Fifa world cup 2022: ಬೆಂಗಳೂರಲ್ಲಿ ಹೋಟೆಲ್ ವ್ಯಾಪಾರ ಅವಧಿ ವಿಸ್ತರಿಸಿದ ಪೊಲೀಸ್ ಇಲಾಖೆ

ಬೆಂಗಳೂರು, ಡಿಸೆಂಬರ್ 13: ಫಿಫಾ ವಿಶ್ವ ಕಪ್ ಫುಟ್ಬಾಲ್ ಸೆಮಿ ಫೈನಲ್ ಪಂದ್ಯಾವಳಿ ಡಿ.14 ಮತ್ತು 15 ರಂದು ನಡೆಯುವ ಪ್ರಯುಕ್ತ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕ ತಿಂಡಿ ತಿನಿಸು ಒದಗಿಸುವ ಸ್ಥಳಗಳ ವ್ಯಾಪಾರದ ಅವಧಿ ವಿಸ್ತರಣೆ ಮಾಡಿ ಆದೇಶಿಸಲಾಗಿದೆ.

ಫಿಫಾ ವಿಶ್ವ ಕಪ್ ಫುಟ್ಬಾಲ್ ಸೆಮಿ ಫೈನಲ್ ಪಂದ್ಯಾವಳಿಯನ್ನು ಬೆಂಗಳೂರಿನ ಅನೇಕ ಕಡೆಗಳಲ್ಲಿ ಸ್ಕ್ರೀನ್‌ಗಳಲ್ಲಿ, ಹೋಟೆಲ್‌ ಸೇರಿದಂತೆ ಹಲವೆಡೆ ಪಂದ್ಯಾವಳಿಯನ್ನು ಕ್ರೀಡಾಭಿಮಾನಿಗಳು ವೀಕ್ಷಿಸುತ್ತಾರೆ. ಅವರಿಗೆ ತಿಂಡಿ ತಿನಿಸುವ ಒದಗಿಸುವ ದೃಷ್ಟಿಯಿಂದ ಹಾಲಿ ತಡರಾತ್ರಿ 1 ಗಂಟೆವರೆಗಿನ ವ್ಯಾಪಾರದ ಅವಧಿಯನ್ನು ಬೆಳಗ್ಗೆ 3.30ರವರೆಗೆ ವಿಸ್ತರಿಸಲಾಗಿದೆ.

Fifa world cup 2022 Police department extended hotel business period in Bengaluru

ಅಬಕಾರಿ ಕಾಯ್ದೆ ಮತ್ತು ಶಬ್ದ ಮಾಲಿನ್ಯದ ಬಗ್ಗೆ ಇರುವ ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತಿಗೆ ಒಳಪಟ್ಟು ಫಿಫಾ ಫುಟ್ಬಾಲ್ ಸೆಮಿ ಫೈನಲ್ ಪಂದ್ಯಾವಳಿ ನಡೆಯುವ ಎರಡು ದಿನದ ಮಟ್ಟಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಆದೇಶವು ಬೆಂಗಳೂರು ನಗರ ವ್ಯಾಪ್ತಿಯ ಸರಹದ್ದಿನಲ್ಲಿ ಬರುವ ಕಂದಾಯ ಜಿಲ್ಲೆಗಳು ಹಾಗೂ ತಾಲೂಕುಗಳನ್ನು ಪರಿಗಣಿಸದೇ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ತಿಂಡಿ ತಿನಿಸು ಒದಗಿಸುವ ಸ್ಥಳಗಳಿಗೆ ಅನ್ವಯಿಸುತ್ತದೆ.

ಆದರೆ ಬೆಂಗಳೂರು ಕಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲಿ ಈ ಆದೇಶ ಅನ್ವಯಿಸುದಿಲ್ಲ. ಅಲ್ಲದೇ ನಿಗದಿತ ಸ್ಥಳಗಳಲ್ಲಿ ಬೆಳಗ್ಗೆ 3.30ರ ನಂತರ ಅಂಗಡಿ ಮುಂಗಟ್ಟು ತೆರೆದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನೂ ಅಬಕಾರಿ ಇಲಾಖೆಯಿಂದ ಲೈಸನ್ಸ ಪಡೆದ ಮದ್ಯ ಮಾರಾಟ ಮಾಡುವ ಬಾರ್ ಆಂಡ್ ರೆಸ್ಟೋರೆಂಟ್, ಕ್ಲಬ್‌ಗಳು, ಹೋಟೆಲ್‌ ವಹೀವಾಟುಗಳಿಗೆ ಅಬಕಾರಿ ನಿಯಮದ ಷರತ್ತುಗಳು ಅನ್ವಯಿಸುತ್ತವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ತಿಂಡಿ ತಿನಿಸು ವ್ಯಾಪಾರದ ಅವಧಿ ವಿಸ್ತರಿಸುವಂತೆ ಬೆಂಗಳೂರು ಭೃಹತ್ ಹೋಟೆಲ್‌ಗಳ ಸಂಘ ಮನವಿ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+