ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Water shutdown: ನ.21ಕ್ಕೆ ಬೆಂಗಳೂರಿನ ಯಾವ ಬಡಾವಣೆಗಳಲ್ಲಿ ನೀರು ಬರಲ್ಲ ಎಂದು ತಿಳಿಯಿರಿ

|
Google Oneindia Kannada News

ಬೆಂಗಳೂರು, ನವೆಂಬರ್ 18: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ವ್ಯಾಪ್ತಿಯ ಕಾವೇರಿ 4ನೇ ಹಂತದ ಒಂದನೇ ಘಟ್ಟದಿಂದ ನೀರು ಸರಬರಾಜು ಆಗುವ ಪ್ರದೇಶಗಳಲ್ಲಿ ನವೆಂಬರ್ 21ರಂದು ಇಡಿ ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಕಂಡು ಬರಲಿದೆ.

ಕೆ.ಆರ್‌.ಪುರಂನಿಂದ ರೇಷ್ಮೆ ಸಂಸ್ಥೆಯ ಹೊರ ವರ್ತುಲ ರಸ್ತೆ (ರಿಂಗ್ ರಸ್ತೆ)ಯ ಮೆಟ್ರೋ ನಿಲ್ದಾಣ ಪ್ರದೇಶದಲ್ಲಿ ಕುಡಿಯುವ ಕಾವೇರಿ ನೀರು ಕೊಳವೆ ಮಾರ್ಗದ ಬದಲಾವಣೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ನವೆಂಬರ್ 21ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆ ವರೆಗೆ ಕಾಮಗಾರಿ ನಡೆಯಲಿದೆ. ಈ ಅವಧಿಯಲ್ಲಿ ಈ ಕಳೆಗಿನ ಹಲವು ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಪ್ರಕಟಣೆ ತಿಳಿಸಿದೆ.

Few parts of Bengaluru face water Supply, shutdown problem on November 21st

ಜಂಬೂಸವಾರಿ ದಿನ್ನೆ, ಪುಟ್ಟೇನಹಳ್ಳಿ, ಕೋಣನಕುಂಟೆ ಕ್ರಾಸ್, ಜರಗನಹಳ್ಳಿ, ಜೆಪಿ ನಗರ 4, 5, 6 ಹಾಗೂ 7ನೇ ಹಂತ, ಚುಂಚಕಟ್ಟೆ ಮುಖ್ಯರಸ್ತೆ, ಕೊತ್ತನೂರು ದಿಣ್ಣೆ ಮುಖ್ಯರಸ್ತೆ, ದೊರೆಸಾನಿ ಪಾಳ್ಯ, ಬನ್ನೇರುಘಟ್ಟ ಮುಖ್ಯರಸ್ತೆ, ಜಯದೇವ ಆಸ್ಪತ್ರೆ, 4ನೇ ಟಿ ಬ್ಲಾಕ್ ಪಾರ್ಟ್ ಎ, ತಿಲಕ್ ನಗರ, ವಿಜಯಾ ಬ್ಯಾಂಕ್ ಬಡಾವಣೆ, ಬಿಳೇಕಹಳ್ಳಿ, ರೋಲೆ ಕಾಲೋನಿ, ಕೋಡಿಚಿಕ್ಕನಹಳ್ಳಿ, ಬೊಮ್ಮನಹಳ್ಳಿ, 1 ರಿಂದ ಎಎಸ್ಆರ್ 7ವಲಯ, ಮಂಗಮ್ಮನಪಾಳ್ಯ.

ಬೆಂಗಳೂರು ನಗರದಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್ ಹುಡುಕುವುದು ಹೇಗೆ? ಬೆಂಗಳೂರು ನಗರದಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್ ಹುಡುಕುವುದು ಹೇಗೆ?

ಅದೇ ರೀತಿ ಹೊಸಪಾಳ್ಯ, ಎಲೆಕ್ಟ್ರಾನಿಕ್ಸ್ ಸಿಟಿ 1ನೇ ಮತ್ತು 2ನೇ ಹಂತ, ಕೋರಮಂಗಲ 3ಮತ್ತು 4ನೇ ಬ್ಲಾಕ್, ಕುದುರೆ ಮುಖ ಕಾಲೋನಿ, ಎಸ್‌ಟಿ ಬೆಡ್, ಶ್ರೀನಿವಾಗಿಲು, ಹೊಸ ಗುರಪ್ಪನಪಾಳ್ಯ, ಜಿಕೆ ಪಾಳ್ಯ, ಕೆಇಬಿ ಬಡಾವಣೆ, ಸುದರ್ಶನ ಕೊಳಚೆ ಪ್ರದೇಶ, ಬಿಸ್ಮಿಲ್ಲಾ ನಗರ, ಮಾರುತಿ ಲೇಔಟ್, ನಾರಾಯಣಪ್ಪ ಗಾರ್ಡನ್, ಬಾಲಾಜಿನಗರ, ಭವಾನಿ ನಗರ, ಭಾರತಿ ಬಡಾವಣೆ, ಎನ್‌ಎಸ್‌ ಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ಅಂದು ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

English summary
Few parts of Bengaluru face water Supply, shutdown problem on November 21st Bengaluru Water Supply and Sewerage Board (BWSSB) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X