ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಹೋಂ ಐಸೋಲೇಶನ್ ರೋಗಿಗಳ ಸಾವಿನ ಸಂಖ್ಯೆ 11 ದಿನಗಳಲ್ಲಿ ದ್ವಿಗುಣ

|
Google Oneindia Kannada News

ಬೆಂಗಳೂರು, ಜೂನ್ 7: ಕೊರೊನಾವೈರಸ್‌ ರಾಜ್ಯದಲ್ಲಿ ಈಗ ಇಳಿಕೆಯಾಗುತ್ತಿದೆ. ನಿತ್ಯ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆ ಈಗ 10,000ರ ಸನಿಹಕ್ಕೆ ಬಂದು ತಲುಪಿದೆ. ಈ ಮಧ್ಯೆ ಮತ್ತೊಂದು ಆತಂಕವನ್ನು ಹುಟ್ಟಿಸುವಂತಾ ಅಂಕಿಅಂಶಗಳು ಬಯಲಾಗಿದೆ. ಬೆಂಗಳೂರಿನಲ್ಲಿ ಹೋಮ್‌ಐಸೋಲೇಶನ್‌ನಲ್ಲಿರುವ ರೋಗಿಗಳ ಸಾವಿನ ಸಂಖ್ಯೆ 11 ದಿನಗಳಲ್ಲಿ ದ್ವಿಗುಣವಾಗಿದೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿದೆ.

ಬೆಂಗಳೂರು ಕೊರೊನಾ ವೈರಸ್‌ ಪ್ರಕರಣಗಳ ಅಂಕಿಅಂಶಗಳ ವಿಚಾರವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇ ತಿಂಗಳಿನ ಆರಂಭದಿಂದ 21ನೇ ತಾರೀಕಿನವರೆಗೆ 778 ಕೊರೊನಾವೈರಸ್‌ಗೆ ತುತ್ತಾಗಿದ್ದ ರೋಗಿಗಳು ಮೃತಪಟ್ಟಿದ್ದಾರೆ ಎಂದು ಅಂಕಿಅಂಶಗಳು ಮಾಹಿತಿ ನೀಡಿತ್ತು. ಆದರೆ ಅದಾದ ನಂತರದ 11 ದಿನಗಳಲ್ಲಿ ಈ ಸಂಖ್ಯೆ ದ್ವಿಗುಣವಾಗಿದೆ. ಮೇ 21ರಿಂದ ಜೂನ್ 2ರ ಅವಧಿಯಲ್ಲಿ ಕೊರೊನಾವೈರಸ್‌ಗೆ ಮೃತಪಟ್ಟ ಹೋಮ್‌ ಐಸೋಲೇಶನ್ ರೋಗಿಗಳ ಸಂಖ್ಯೆ 1,599ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಬಹಿರಂಗಪಡಿಸುತ್ತಿದೆ. ಇದರಲ್ಲಿ ಕೊರೊನಾವೈರಸ್‌ನ ಕಾರಣದಿಂದ ಮನೆಯಲ್ಲಿಯೇ ಮೃತಪಟ್ಟವರು ಹಾಗೂ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಕೂಡ ಒಳಗೊಂಡಿದೆ.

ಸರ್ಕಾರದ ಮಾರ್ಗಸೂಚಿ: ಕೊರೊನಾ ರೋಗಿಗಳು ಈ ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲ ಸರ್ಕಾರದ ಮಾರ್ಗಸೂಚಿ: ಕೊರೊನಾ ರೋಗಿಗಳು ಈ ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲ

ಜೂನ್ 2ರ ನಂತರ ಇಳಿಕೆ?

ಜೂನ್ 2ರ ನಂತರ ಇಳಿಕೆ?

ಈ ಮಧ್ಯೆ ಜೂನ್ 2ರ ನಂತರ ಹೋಮ್‌ ಐಸೋಲೇಶನ್‌ನಲ್ಲಿದ್ದ ರೋಗಿಗಳು ಮೃತಪಟ್ಟಿಲ್ಲ ಎಂದು ಅಧಿಕೃತ ಅಂಕಿಅಂಶಗಳು ಹೇಳುತ್ತಿವೆ. ಆದರೆ ಬಿಬಿಎಂಪಿ ಮೂಲಗಳ ಪ್ರಕಾರ ಸಾವಿನ ಸಂಖ್ಯೆಗಳನ್ನು ಶೀಘ್ರದಲ್ಲಿಯೇ ಸೇರ್ಪಡೆಗೊಳಿಸಬಹುದು ಎನ್ನುತ್ತಿವೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿಯಂತೆ ಭಾನುವಾರ ಕೊರೊನಾವೈರಸ್‌ನಿಂತ ಮೃತಪಟ್ಟವರ ಅಂಕಿಅಂಶಗಳ ಪಟ್ಟಿಗೆ 37 ಹೆಚ್ಚುವರಿ ಪ್ರಕರಣಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ ಎರಡು ಪ್ರಕರಣಗಳು ಜೂನ್ 2ರಂದು ಹೋಮ್‌ ಐಸೋಲೇಶನ್‌ನಲ್ಲಿದ್ದ ಕೊರೊನಾ ರೋಗಿಗಳು ಎಂದು ವರದಿಯಾಗಿದೆ.

ಬಹುತೇಕರಿಗೆ ಹೋಮ್‌ ಐಸೋಲೇಶನ್‌ನಲ್ಲಿ ಚಿಕಿತ್ಸೆ

ಬಹುತೇಕರಿಗೆ ಹೋಮ್‌ ಐಸೋಲೇಶನ್‌ನಲ್ಲಿ ಚಿಕಿತ್ಸೆ

ಭಾನುವಾರದವರೆಗಿನ ಅಂಕಿಅಂಶಗಳ ಪ್ರಕಾರ 1,17,340 ಕೊರೊನಾವೈರಸ್ ಪ್ರಕರಣಗಳು ಬೆಂಗಳೂರಿನಲ್ಲಿ ಸಕ್ರಿಯವಾಗಿದೆ. ಇದರಲ್ಲಿ 1.09 ಲಕ್ಷದಷ್ಟು ಕೊರೊನಾ ರೋಗಿಗಳು ಹೋಮ್‌ಐಸೋಲೇಶನ್‌ಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹೋಮ್‌ ಐಸೋಲೇಶನ್‌ನಲ್ಲಿದ್ದ ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗಿರುವುದಕ್ಕೆ ರೋಗಿಗಳನ್ನು ಸೂಕ್ತ ರೀತಿಯಲ್ಲಿ ತಪಾಸಣೆ ಮಾಡದಿರುವುದು ಹಾಗೂ ಪರಿಣಾಮಕಾರಿಯಾಗಿ ನಿಗಾವಹಿಸದಿರುವುದು ಕಾರಣ ಎಂದು ಆರೋಪಿಸಲಾಗಿದೆ.

ಸರಿಯಾಗಿ ನಡೆಯುತ್ತಿಲ್ಲ ಫಾಲೋಅಪ್

ಸರಿಯಾಗಿ ನಡೆಯುತ್ತಿಲ್ಲ ಫಾಲೋಅಪ್

ಇನ್ನು ಬಿಬಿಎಂಪಿ ಮೂಲಗಳ ಪ್ರಕಾರ ಸಮರ್ಪಕ ರೀತಿಯಲ್ಲಿ ರೋಗಿಗಳ ಫಾಲೋಅಪ್ ಮಾಡದ ಕಾರಣ ಹೆಚ್ಚಿನ ಕೊರೊನಾವೈರಸ್ ಪ್ರಕರಣಗಳು 14 ದಿನಗಳಿಗೂ ಹೆಚ್ಚಿನ ಕಾಲ ರೋಗಿಗಳಿಗೆ ಕಾಡುತ್ತಿದೆ. ಆದರೆ ಈ ಆರೋಪವನ್ನು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ, ಹೋಮ್‌ ಐಸೋಲೇಶ್‌ನ ಮುಖ್ಯಸ್ಥರಾಗಿರುವ ಡಾ. ವಿಜೇಂದ್ರ ಬೆಳಗುಳಿ ನಿರಾಕರಿಸಿದ್ದಾರೆ.

ರೋಗಲಕ್ಷಣಗಳು ಇಲ್ಲದಿದ್ದರೆ 'ಡಿಶ್ಚಾರ್ಜ್'

ರೋಗಲಕ್ಷಣಗಳು ಇಲ್ಲದಿದ್ದರೆ 'ಡಿಶ್ಚಾರ್ಜ್'

"ನನ್ನ ಮಾಹಿತಿಯ ಪ್ರಕಾರ ಹೋಮ್‌ ಐಸೋಲೇಶನ್‌ನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ರೋಗಿಗಳನ್ನು 10-14 ದಿನಗಳ ಚಿಕಿತ್ಸೆಯ ನಂತರ "ಡಿಶ್ಚಾರ್ಜ್ ಮಾಡಲಾಗಿದೆ" ಎಂದು ಪರಿಗಣಿಸಲಾಗುತ್ತದೆ" ಎಂದು ಡಾ. ಬೆಳಗುಳಿ ಹೇಳಿದ್ದಾರೆ. ಈ ಪ್ರಕ್ರಿಯೆಯನ್ನು ರೋಗಿಗಳ ಆರೋಗ್ಯದ ಪರಿಸ್ಥಿತಿಯನ್ನು ತಿಳಿದುಕೊಂಡು ನಿರ್ಧಾರಿಸಲಾಗುತ್ತದೆ. ಮೂರು ದಿನಗಳ ಕಾಲ ಯಾವುದೇ ರೋಗಲಕ್ಷಣಗಳು ಇಲ್ಲದಿದ್ದಾಗ ರೋಗಿಗಳನ್ನು "ಡಿಶ್ಚಾರ್ಜ್ ಮಾಡಲಾಗಿದೆ" ಎಂದು ಪರಿಗಣಿಸಲಾಗುತ್ತದೆ" ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

Recommended Video

ಯಾವ Vaccine ಬೆಸ್ಟ್ ಅನ್ನೋದು ಗೊತ್ತಾಗಿದೆ! | Oneindia Kannada
ಚೇತರಿಕೆಯ ನಂತರದ ಪ್ರಕರಣಗಳಾ?

ಚೇತರಿಕೆಯ ನಂತರದ ಪ್ರಕರಣಗಳಾ?

ಕೊರೊನಾವೈರಸ್‌ನಿಂದ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಿ ಮನೆಗೆ ಮರಳಿದ ಬಳಿಕ ಆರೋಗ್ಯದ ಸಮಸ್ಯೆಯ ಕಾರಣದಿಂದಾಗಿ ರೋಗಿಗಳು ಸಾವನ್ನಪ್ಪುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಡಾ. ಬೆಳಗುಳಿ ಡೆಕ್ಕನ್ ಹೆರಾಲ್ಡ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

English summary
Bengaluru's fatality rate from home isolation has doubled in 11 days, according to new data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X