ಉದ್ಯಮಿಯಿಂದ ₹1 ಕೋಟಿ ದರೋಡೆ: ಬೆಂಗಳೂರಿನಲ್ಲಿ ಎಂಟು ನಕಲಿ ಪೊಲೀಸರ ಬಂಧನ
ಎಚ್‌ಎಂಟಿ ಲೇಔಟ್‌ನಲ್ಲಿರುವ ಉದ್ಯಮಿಯೊಬ್ಬರ ನಿವಾಸವನ್ನು ಲೂಟಿ ಮಾಡಿದ್ದ ಎಂಟು ನಕಲಿ ಪೊಲೀಸರ ತಂಡವನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಡಿ.4ರಂದು ರಾತ್ರಿ 7.30ರ ಸುಮಾರಿಗೆ ಮನೋಹರ್ ಎಂಬುವವರ ಮನೆಗೆ ನುಗ್ಗಿದ್ದರು.
ಪಾಲಿ ಫಿಲಂ ಸಂಸ್ಥೆಯೊಂದರ ಮಾಲೀಕರಾಗಿರುವ ಮನೋಹರ್ ಘಟನೆ ವೇಳೆ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಉದ್ಯಮಿಯ ಪುತ್ರನ ಮೇಲೆ ದಾಳಿ ನಡೆಸಿ 60 ಲಕ್ಷ ನಗದು, 700 ಗ್ರಾಂ ಚಿನ್ನಾಭರಣ ಸೇರಿದಂತೆ ಒಂದು ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

ಉದ್ಯಮಿಯ ಪತ್ನಿ ಸುಜಾತಾ ಅವರು ಪೊಲೀಸ್ ಸಮವಸ್ತ್ರದಲ್ಲಿದ್ದ ಆರೋಪಿಗಳನ್ನು ತಮ್ಮ ಪತಿ ಮತ್ತು ಅತ್ತೆಯ ನಡುವಿನ ಕಾನೂನು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮನೆಗೆ ಬಂದಿದ್ದಾರೆ ಎಂದು ಭಾವಿಸಿ ಒಳಗೆ ಬರಲು ಬಿಟ್ಟಿದ್ದರು. ತಡೆಯಲು ಯತ್ನಿಸಿದ ಆಕೆಯ ಮಗ ರೂಪೇಶ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದರು.
ಹಲ್ಲೆಗೊಳಗಾದ ರೂಪೇಶ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಲ್ಲದೆ, ಆರೋಪಿಗಳು ಓಡಿಹೋಗುವಾಗ ತಮ್ಮ ಗುರುತನ್ನು ಮರೆಮಾಚಲು ಡಿಜಿಟಲ್ ವಿಡಿಯೋ ರೆಕಾರ್ಡರ್ ಅನ್ನು ಕಿತ್ತುಕೊಂಡಿದ್ದರು.
ಪೀಣ್ಯ ಪೊಲೀಸರು ಕಳವು ಮಾಡಿದ ವಸ್ತುಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆರೋಪಿಗಳನ್ನು ವಿವಿಧೆಡೆಯಿಂದ ಬಂಧಿಸಲಾಗಿದೆ. ಎಲ್ಲ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಆರೋಪಿಗಳ ಜನ್ಮ ಜಾಲಾಡುತ್ತಿದ್ದು. ಕದ್ದ ಮಾಲನ್ನು ವಶಕ್ಕೆ ಪಡೆಯಲು ಪ್ರಯತ್ನ ಮಾಡಲಾಗುತ್ತಿದೆ.












Click it and Unblock the Notifications