ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Fake marks card: ನಕಲಿ ಅಂಕಪಟ್ಟಿ ಮಾರಾಟ ಜಾಲ; 15 ವಿಶ್ವವಿದ್ಯಾಲಯಗಳ ಸಾವಿರಾರು ಅಂಕಪಟ್ಟಿಗಳು!

|
Google Oneindia Kannada News

ಬೆಂಗಳೂರು, ಜನವರಿ. 27: ಕಳೆದ ಹಲವು ವರ್ಷಗಳಿಂದ ವಿಶ್ವವಿದ್ಯಾನಿಲಯಗಳ ನಕಲಿ ಪದವಿ ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ತಿಳಿಸಿದೆ.

ಬಂಧಿತ ವ್ಯಕ್ತಿಯಿಂದ 15 ವಿಶ್ವವಿದ್ಯಾಲಯಗಳ 6,800 ನಕಲಿ ಪ್ರಮಾಣಪತ್ರಗಳು, 22 ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು ಮತ್ತು 13 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಶುಕ್ರವಾರ ಹೇಳಿಕೆ ನೀಡಿದೆ.

ಮೊದಲ ಬಾರಿಗೆ ಬ್ರೈನ್ ಮ್ಯಾಪಿಂಗ್ ಯಶಸ್ವಿ: ಹಂತಕ ವಕೀಲನ ವಿರುದ್ಧ ಸಾಕ್ಷಿ ಲಭ್ಯಮೊದಲ ಬಾರಿಗೆ ಬ್ರೈನ್ ಮ್ಯಾಪಿಂಗ್ ಯಶಸ್ವಿ: ಹಂತಕ ವಕೀಲನ ವಿರುದ್ಧ ಸಾಕ್ಷಿ ಲಭ್ಯ

ದೇಶದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ, ಪದವಿ ಪ್ರಮಾಣಪತ್ರಗಳು ಮತ್ತು ಇತರ ಸಂಬಂಧಿತ ಪ್ರಮಾಣಪತ್ರಗಳನ್ನು ವಿತರಿಸುವ ನಕಲಿ ಅಂಕಪಟ್ಟಿ, ಪದವಿ ಪ್ರಮಾಣಪತ್ರಗಳನ್ನು ವಿತರಿಸುವ ಐದು ಸಂಸ್ಥೆಗಳ ಮೇಲೆ ದಾಳಿ ನಡೆಸಿತು. ಪ್ರಕರಣದ ತನಿಖೆಯ ಭಾಗವಾಗಿನ್ಯೂ ಕ್ವೆಸ್ಟ್ ಟೆಕ್ನಾಲಜೀಸ್ (ರಾಜಾಜಿನಗರ), ಸಿಸ್ಟಂ ಕ್ವೆಸ್ಟ್ (ಜೆಪಿ ನಗರ), ಅರುಹಿ ಇನ್‌ಸ್ಟಿಟ್ಯೂಟ್ (ಭದ್ರಪ್ಪ ಲೇಔಟ್), ವಿಶ್ವ ಜ್ಯೋತಿ ಕಾಲೇಜು (ದಾಸರಹಳ್ಳಿ) ಮತ್ತು ಬೆನಕ ಕರೆಸ್ಪಾಂಡೆನ್ಸ್ (ವಿಜಯನಗರ) ಕಾಲೇಜಿನ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

Fake marks card: CCB Arrested A Man Who Selling More Than 6,800 Fake Degrees

ಅಣ್ಣಾಮಲೈ ವಿಶ್ವವಿದ್ಯಾಲಯ, ಸಿಕ್ಕಿಂ ವಿಶ್ವವಿದ್ಯಾಲಯ, ಗೀತಮ್ ವಿಶ್ವವಿದ್ಯಾಲಯ, ಬಿಐಎಸ್‌ಸಿ ವಿಶ್ವವಿದ್ಯಾಲಯ, ಜನಾರ್ದನ್ ರಾಯ್ ನಗರ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಜೈನ್ ವಿಹಾರ್ ವಿಶ್ವವಿದ್ಯಾಲಯ ಜೈಪುರ, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಇತರ ಏಳು ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳು ಮತ್ತು ಇತರ ಕೋರ್ಸ್ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ.

ಈ ಐದು ಸಂಸ್ಥೆಗಳು ವಿಶ್ವವಿದ್ಯಾನಿಲಯಗಳೊಂದಿಗೆ ಸಂಬಂಧ ಹೊಂದಿರಬಹುದು ಅಥವಾ ಯಾವುದೇ ಪರೀಕ್ಷೆ ನಡೆಸದೆ ನಕಲಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರಗಳನ್ನು ನೀಡಿ ನಕಲಿ ಅಂಕಪಟ್ಟಿಗಳಿಗಾಗಿ ಸುಮಾರು 25,000 ರಿಂದ 30,000 ರೂಪಾಯಿವರೆಗೆ ಹಣ ವಸೂಲಿ ಮಾಡಿರಬಹುದು ಎಂದು ಸಿಸಿಬಿಗೆ ದುರು ಬಂದಿತ್ತು. ಈ ಹಿನ್ನೆಲೆ ದಾಳಿ ನಡೆಸಲಾಗಿದೆ.

ಬಂಧಿತ ಆರೋಪಿ ವಿಕಾಸ್ ಭಗತ್ ವಿರುದ್ಧ ಐಪಿಸಿ ಸೆಕ್ಷನ್ 465, 468 ಮತ್ತು 471 ರ ಅಡಿಯಲ್ಲಿ ಸೈಬರ್ ಕ್ರೈಮ್ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಸಿಬಿ ಪ್ರಕಾರ, ವಿಕಾಸ್ ಭಗತ್ ಕಂಪನಿಯು ಕಂಪ್ಯೂಟರ್ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತದೆ. ಆದರೆ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಕಂಪನಿಯು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡಿಲ್ಲ.

Fake marks card: CCB Arrested A Man Who Selling More Than 6,800 Fake Degrees

ಇನ್ನು, ವಿವಿಧ ರಾಜ್ಯಗಳ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳೊಂದಿಗೆ ತಾನು ಟೈ-ಅಪ್ ಹೊಂದಿದ್ದು, ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರಮಾಣಪತ್ರಗಳು ಮತ್ತು ಅಂಕಪಟ್ಟಿಗಳನ್ನು ನೀಡುವುದಾಗಿ ಭಗತ್ ಸುಳ್ಳು ಹೇಳಿ ವಿದ್ಯಾರ್ಥಿಗಳಿಗೆ ವಂಚನೆ ಮಾಡಿರುವುದು ಸಾಕ್ಷ್ಯಗಳ ಮೂಲಕ ಕಂಡುಬಂದಿದೆ ಎಂದು ಸಿಸಿಬಿ ಹೇಳಿದೆ. ಸರಿಯಾದ ಪರೀಕ್ಷೆ ನಡೆಸದೆ ಭಗತ್ ವಿದ್ಯಾರ್ಥಿಗಳಿಗೆ ಅವರು ಆಯ್ಕೆ ಮಾಡಿದ ಪದವಿ ಕೋರ್ಸ್‌ಗಳಿಗೆ ಅನುಗುಣವಾಗಿ ಹಣ ಪಡೆದು ನಕಲಿ ಪದವಿ ಪ್ರಮಾಣಪತ್ರ ಮತ್ತು ಅಂಕಪಟ್ಟಿಗಳನ್ನು ಒದಗಿಸಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ, ಆರೋಪಿಯು ವಿಶ್ವವಿದ್ಯಾನಿಲಯಗಳ ಹೆಸರಿನಲ್ಲಿ ಅಂಕಪಟ್ಟಿಗಳನ್ನು ನೀಡಲು ಯಾವುದೇ ಅನುಮೋದನೆ ಅಥವಾ ಪರವಾನಗಿ ಹೊಂದಿಲ್ಲ. ಇನ್ನು ಅಪರಾಧಕ್ಕೆ ಸಂಬಂಧಿಸಿದಂತೆ ನಕಲಿ ಅಂಕಪಟ್ಟಿ ಜಾಲ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಸಹಚರರನ್ನು ಹುಡುಕುತ್ತಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಲಾಗುವುದು ಎಂದು ಸಿಸಿಬಿ ತಿಳಿಸಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಸಿಬಿ ಬೆಂಗಳೂರಿನಲ್ಲಿ ಸುಮಾರು 18 ವಿಶ್ವವಿದ್ಯಾನಿಲಯಗಳ ನಕಲಿ ಅಂಕಪಟ್ಟಿಗಳನ್ನು ವಾಟ್ಸಾಪ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡುತ್ತಿದ್ದ ತಂಡವೊಂದನ್ನು ಬಂಧಿಸಿತ್ತು. ಆರೋಪಿಗಳು ದೇಶಾದ್ಯಂತ 18 ವಿಶ್ವವಿದ್ಯಾಲಯಗಳ ಬಿಎ, ಬಿ ಕಾಂ, ಬಿಎಸ್ಸಿ, ಬಿಬಿಎ, ಎಂಜಿನಿಯರಿಂಗ್ ಮತ್ತು ಎಂಬಿಎ ಪದವಿಗಳ ಅಂಕಪಟ್ಟಿಗಳನ್ನು ಮಾರಾಟ ಮಾಡಿದ್ದರು. ವಿದ್ಯಾರ್ಥಿಗಳಿಂದ 50,000 ರಿಂದ 1,00,000 ರೂಪಾಯಿಗಳವರೆಗೆ ಹಣವನ್ನು ಸಂಗ್ರಹಿಸಿದ್ದರು. ಇದಲ್ಲದೆ, 10 ರಿಂದ 20 ಲಕ್ಷ ರೂಪಾಯಿಗಳಿಗೆ ಪಿಎಚ್‌ಡಿ ಪ್ರಮಾಣಪತ್ರಗಳನ್ನು ಸಹ ಮಾರಾಟ ಮಾಡಿದ್ದರು.

English summary
Fake marks card: Bengaluru Central Crime Branch arrested a man for selling fake university degree certificates from 15 Universities. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X