ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಶಾಸಕರನ್ನು ಬಿಡದ ಭೂಗಳ್ಳರು, ಸೈಟ್‌ನ ನಕಲಿ ಖಾತೆ ಸೃಷ್ಟಿಸಿದ್ದ 8 ಮಂದಿ ವಿರುದ್ಧ ಎಫ್‌ಐಆರ್

|
Google Oneindia Kannada News

ಬೆಂಗಳೂರು, ಜನವರಿ 20: ರಾಜ್ಯ ರಾಜಧಾನಿ ಮತ್ತು ಮಹಾನಗರವಾದ ಬೆಂಗಳೂರಿನಲ್ಲಿ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಶ್ರೀಸಾಮಾನ್ಯರ ನಿವೇಶನಗಳ ಖಾತೆ ಬದಲಾವಣೆ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ಶಾಸಕರುಗಳ ನಿವೇಶನಗಳ ದಾಖಲೆಗಳನ್ನು ನಕಲು ಮಾಡಿ ಮೋಸಗೈದ ಘಟನೆ ಬೆಳಕಿಗೆ ಬಂದಿದೆ.

ಸಾಮಾನ್ಯ ಜನರನ್ನು ಕಾಡುವ ಭೂಗಳ್ಳತನದ ಭೂತ ಈಗ ಶಾಸಕರ ಬೆನ್ನಹತ್ತಿದೆ. ರಾಜ್ಯದ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಸೇರಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲದರ ನಕಲು ದಾಖಲೆ‌ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಂಡು ಶಾಸಕರಿಗೆ ಮೋಸ ಮಾಡಿದ್ದಾರೆ.

ಶಾಸಕಿಗೆ ಹಂಚಿಕೆಯಾದ ಸೈಟ್‌ ಅನ್ನು ರಾಮಮೂರ್ತಿ ಅಲಿಯಾಸ್ ಮಣಿವನನ್, ಅನುರಾಧಾ, ದೀಪಿಕಾ ಸೇರಿದಂತೆ 10 ಜನ ಡೆವಲಪರ್ಸ್ ಹಾಗೂ ಬಿಲ್ಡರ್ಸ್ ಹಾಗೂ ಇನ್ನಿತರು ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಬ್ಯಾಟರಾಯನಪುರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಆರೋಪದ ಮೇರೆಗೆ ಸದ್ಯ 8 ಜನರ ವಿರುದ್ಧ ಸಂಜಯನಗರದ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

Fake documents created of MLA Goolihatti Shekhar site, FIR registered against 8 people

ಬೆಂಗಳೂರಿನಲ್ಲಿ ಒಂದು ಅಡಿ ಜಾಗ ಬಂಗಾರದ ಬೆಲೆಗೆ ಮಾರಾಟವಾಗುತ್ತದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಭೂಗಳ್ಳರ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಚಿನ್ನದ ಬೆಲೆಯ ಭೂಮಿ, ಜಾಗ, ನಿವೇಶನ ಎಗರಿಸಲು ಭೂಗಳ್ಳರ ದಂಡೆ ಸದಾ ಸಜ್ಜಾಗಿರುತ್ತದೆ. ಇಂತಹ ಪ್ರಸಂಗಗಳಿಗೆ ಸಾಮಾನ್ಯರಂತೆ ಈಗ ಜನಪ್ರತಿನಿಧಿಗಳು ಸಾಕ್ಷಿಯಾಗುತ್ತಿದ್ದಾರೆ.

ಹೊಸದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಮಂಜೂರಾಗಿದ್ದ ಬಿಡಿಎ ಜಿ ವರ್ಗದ ನಿವೇಶನ ಸಂಬಂಧಿಸಿದಂತೆ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ನಕಲಿ ದಾಖಲೆಗಳ ಆಧಾರದ ಮೇಲೆ ಬ್ಯಾಟರಾಯನಪುರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ನಡೆದಿದೆ.

Fake documents created of MLA Goolihatti Shekhar site, FIR registered against 8 people

8 ಕೋಟಿ ಬೆಲೆ ಬಾಳುವ ಸೈಟ್

ನಗರದ ಲೊಟ್ಟೆಗೊಲ್ಲಹಳ್ಳಿ ಅಂದ್ರೆ ಸಂಜಯನಗರದ ಆರ್ ಎಂವಿ 2 ಸ್ಟೇ ಪ್ರದೇಶದಲ್ಲಿ ಶಾಸಕರಿಗೆ 50X80 ವಿಸ್ತೀರ್ಣದ ಬಿಡಿಎ ನಿವೇಶನ ಸಂಖ್ಯೆ 3 ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿದ್ದ ಎಲ್ಲ ದಾಖಲೆಗಳು ಶಾಸಕರ ಬಳಿ ಇದ್ದವು. ಈ ನಿವೇಶನದ ಪ್ರಸಕ್ತದ ಬೆಲೆ ಸುಮಾರು 8 ಕೋಟಿ ಎನ್ನಲಾಗುತ್ತಿದೆ. ತಮ್ಮ ಜಾಗಕ್ಕೆ ಶಾಸಕರು ಬೇಲಿ ಹಾಕಿಸಿದ್ದರು.

ನಕಲಿ ದಾಖಲೆಯ ಮಾಹಿತಿ ಬರುತ್ತಿದ್ದಂತೆ ಶಾಸಕರು ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಹಿತಿ ಆಧಾರದಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತಿ (ಐಪಿಸಿ) 420,465,468,471 ಸೆಕ್ಷನ್‌ಗಳಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಶಾಸಕರ ಜಾಗವನ್ನೇ ಲಪಟಾಯಿಸಲು, ನಕಲಿ ದಾಖಲೆ ಸೃಷ್ಟಿಸಲು ಹೇಗೆ ಸಾಧ್ಯವಾಯಿತು ಎಂಬ ಹಲವು ಅಂಶಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

English summary
Fake documents created of MLA Goolihatti Shekhar site worth of 08 crore, FIR registered against eight people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X