ಮಗನ ಕಾಯಿಲೆ ಪರಿಹರಿಸುವುದಾಗಿ ನಕಲಿ ಜ್ಯೋತಿಷಿಯಿಂದ ಮಹಿಳೆಯ ಅತ್ಯಾಚಾರ
ಮಗನ ಕಾಯಿಲೆ ಪರಿಹರಿಸುತ್ತೇನೆ ಎಂದು ನಂಬಿಸಿದ ನಕಲಿ ಜ್ಯೋತಿಷಿಯೊಬ್ಬ ಬೆಂಗಳೂರಿನ ಆರ್ ಪಿಎಸ್ ಲೇಔಟ್ ನ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಜತೆಗೆ ಇಪ್ಪತ್ತೊಂದು ಲಕ್ಷ ರುಪಾಯಿ ವಂಚಿಸಿದ್ದಾನೆ
ಬೆಂಗಳೂರು, ಮೇ 22 : ಅಸಹಾಯಕ ತಾಯಿಯೊಬ್ಬಳು ತನ್ನ ಮಗನ ಕಾಯಿಲೆ ವಾಸಿಯಾಗುತ್ತದೆಂದು ವ್ಯಕ್ತಿಯೊಬ್ಬನನ್ನು ನಂಬಿ, ಮೋಸ ಹೋದ ಘಟನೆಯ ವರದಿಯಿದು. ಜ್ಯೋತಿಷಿಯ ಸೋಗಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ ನದೆಸಿದ ವ್ಯಕ್ತಿ, ಇಪ್ಪತ್ತು ಲಕ್ಷ ರುಪಾಯಿ ನಗದು ಜತೆಗೆ ಮುನ್ನೂರು ಗ್ರಾಮ್ ಚಿನ್ನಾಭರಣವನ್ನು ದೋಚಿದ್ದಾನೆ.
ಆರ್ ಪಿಎಸ್ ಲೇಔಟ್ ನ ಮೂವತ್ತೈದು ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದಲ್ಲಿ ನಕಲಿ ಜ್ಯೋತಿಷಿ ಪ್ರಸನ್ನಕುಮಾರ ಅಲಿಯಾಸ್ ಕಾರ್ತೀಕ್ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಆತ ಮೂಲತಃ ಅಗರಬತ್ತಿ ಮಾರುವವನು. ಅದೇ ಕೆಲಸದಲ್ಲಿ ತೊಡಗಿದ್ದಾಗ ಮಹಿಳೆಯ ಪರಿಚಯ ಮಾಡಿಕೊಂಡಿದ್ದಾನೆ.[ರೇಪ್ ಮಾಡಿ, ಬಾಲಕಿಯನ್ನು ಹೂತಿಟ್ಟಿದ್ದ ಅಪ್ಪ, ಅಜ್ಜಿ ಬಂಧನ!]

ತನ್ನನ್ನು ಜ್ಯೋತಿಷಿ ಎಂದು ಹೇಳಿಕೊಂಡು, ಮಹಿಳೆಯ ಮಗನಿಗೆ ಇರುವ ಅನಾರೋಗ್ಯ ಸಮಸ್ಯೆ ನಿವಾರಣೆ ಆಗಬೇಕು ಅಂದರೆ ತನ್ನೊಂದಿಗೆ ಸಂಭೋಗ ನಡೆಸಬೇಕು ಎಂದು ಏಳು ಬಾರಿ ಆಕೆ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಪ್ರತಿ ಬಾರಿ ನಾನಾ ನೆಪಗಳನ್ನು ಹೇಳಿ, ಆಕೆಯನ್ನು ಬೆದರಿಸಿದ್ದಾನೆ.
ಕೊನೆಗೆ ಪೂಜೆ ಕೊನೆ ಹಂತ. ಇಪ್ಪತ್ತೊಂದು ಲಕ್ಷ ಹೊಂದಿಸಿದರೆ ನಿಮ್ಮ ಮಗನ ಅನಾರೋಗ್ಯ ಶಾಶ್ವತವಾಗಿ ನಿವಾರಣೆ ಆಗುತ್ತದೆ ಎಂದು ಕಾರ್ತೀಕ್ ಹೇಳಿದ ಮಾತು ನಂಬಿ, ಆಕೆ ಹಣ ಹೊಂದಿಸಿಕೊಟ್ಟಿದ್ದರು. ಆ ನತರ ಆತ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಆ ನಂತರ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.[ಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಅತ್ಯಾಚಾರ ಬರ್ಬರ ಕೊಲೆ]
ಮೊಬೈಲ್ ಕರೆಗಳ ಆಧಾರ ಹಾಗೂ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳ ಸಹಾಯದಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
{promotion-urls}












Click it and Unblock the Notifications