• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

By Nayana
|
   ಬೆಂಗಳೂರಿನ ಫ್ಲೈ ಓವರ್ ಗಳು ಎಷ್ಟು ಸುರಕ್ಷಿತವಾಗಿದೆ? ಇಲ್ಲಿದೆ ಮಾಹಿತಿ | Oneindia Kannada

   ಬೆಂಗಳೂರು, ಸೆಪ್ಟೆಂಬರ್ 7 : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಪಡೆಯುವುದು ಇನ್ನುಮುಂದೆ ಸುಲಭವಾಗಲಿದೆ. 2019ರ ಮೊದಲ ಮೂರು ತಿಂಗಳ ಅವಧಿಯಲ್ಲಿ ಏರ್‌ಪೋರ್ಟ್ ನಲ್ಲಿ ಫೇಸ್ ರೆಕಗ್ನಿಷನ್ ಬೋರ್ಡಿಂಗ್ ಪಾಸ್ ವ್ಯವಸ್ಥೆ ಜಾರಿಯಾಗಲಿದೆ.

   ಪೇಪರ್ ಲೆಸ್ ಬೋರ್ಡಿಂಗ್ ಪಾಸ್ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಬೆಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. 2019ರ ಆರಂಭದಲ್ಲಿ ಡಿಜಿಟಲ್ ವಿಮಾನಯಾನ ಶುರುವಾದರೆ, ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಮಾಡುವ ಪ್ರಯಾಣಿಸಕರು ಅಅಲ್ಲಿರುವ ಯಂತ್ರಕ್ಕೆ ಮುಖ ತೋರಿಸಿ ನೇರವಾಗಿ ಬೋರ್ಡಿಂಗ್ ಪಾಸ್ ಪಡೆದುಕೊಳ್ಳಬಹುದಾಗಿದೆ.

   ಐಎಎಲ್: ಎರಡನೇ ಟರ್ಮಿನಲ್ ವಿಶಾಲ ಸ್ಥಳಾವಕಾಶ

   ಇದು ಸ್ಮಾರ್ಟ್ ಫೋನ್‌ನಲ್ಲಿ ಇರುವ ಫೇಸ್ ರೆಕಗ್ನಿಷನ್ ಮಾದರಿಯ ವ್ಯವಸ್ಥೆಯಾಗಿದ್ದು, ಪ್ರಯಾಣಿಕರು ಮುಖ ತೋರಿಸಿದ ತಕ್ಷಣ ವಿಮಾನ ನಿಲ್ದಾಣದೊಳಗೆ ನೇರ ಪ್ರವೇಶ ಸಿಗುತ್ತದೆ. ಆನ್‌ಲೈನ್ ನಲ್ಲಿ ಟಿಕೆಟ್ ಖರೀದಿಸುವ ವೇಳೆ ಫೇಸ್ ರೆಕಗ್ನಿಷನ್ ಆಯ್ಕೆಯನ್ನು ಪಡೆಯಬೇಕು.

   ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕೆಲಸ ಖಾಲಿ ಇದೆ: ಸಂದರ್ಶನಕ್ಕೆ ಹಾಜರಾಗಿ

   ಪ್ರಯಾಣ ಮಾಡುವ ದಿನ ಬಂದಾಗ ಟಿಕೆಟ್ ನಂಬರ್ ನಮೂದಿಸಿ, ಯಂತ್ರದ ಬಳಿ ಮುಖ ಹಿಡಿದರೆ ಬೋರ್ಡಿಂಗ್ ಅವಕಾಶ ಸಿಗುತ್ತದೆ. ಇದೇ ವೇಳೆ ಮುಖದ ಮಾಹಿತಿಯನ್ನು ಅಲ್ಲಿನ ಯಂತ್ರದಲ್ಲಿ ಅಳವಡಿಸಿರುವ ಸಾಫ್ಟ್‌ ವೇರ್ ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ.

   ಜಗತ್ತಿನ ವೇಗದ ಅಭಿವೃದ್ಧಿಯ ಏರ್‌ಪೋರ್ಟ್‌ಗಳಲ್ಲಿ ಕೆಐಎಗೆ ದ್ವಿತೀಯ ಸ್ಥಾನ

   ನಂತರ ವಿಮಾನ ನಿಲ್ದಾಣ ಮೂಲಕ ಪ್ರಯಾಣ ಮಾಡುವುದಾದರೆ ಮುಖ ತೋರಿಸಿದರೆ ಬೋರ್ಡಿಂಗ್ ಪಾಸ್ ಸಿಗುತ್ತದೆ. ಇದು ಉತ್ತಮ ವ್ಯವಸ್ಥೆಯಾಗಿದ್ದು ಮುಂಬರುವ ದಿನಗಳಲ್ಲಿ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

   English summary
   Face recognition boarding pass technology will be adopted in Kempegowda international airport by January, 2019, which will be able to check in process would become more faster.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X