11.30ವರೆಗೆ ಬಸ್‌ ಓಡಿಸಲು ಜನಾಗ್ರಹ

ವಿಶ್ವದಲ್ಲೇ ಐಟಿ ಸಿಟಿ ಎಂದು ಹೆಸರುವಾಸಿಯಾದ ಬೆಂಗಳೂರಿನಲ್ಲಿ ರಾತ್ರಿ 10 ಗಂಟೆಯ ನಂತರ ಬಿಎಂಟಿಸಿ ಬಸ್‌ ಸಂಚಾರ ಇಲ್ಲ. ಬೆಂಗಳೂರಿನ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಬಿಎಂಟಿಸಿ ಮಾತ್ರ ತನಗೆ ಇದಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ತೆಪ್ಪಗೆ ಕುಳಿತುಕೊಂಡಿದೆ.

ಜುಲೈ 2013ರಲ್ಲಿ ರಾತ್ರಿ 11.30ವರೆಗೆ ರಸ್ತೆಯಲ್ಲಿ ಬಸ್‌ ಸಂಚಾರವನ್ನು ಆರಂಭಿಸುತ್ತೇವೆ ಎಂದು ಬಿಎಂಟಿಸಿ ಹೇಳಿತ್ತು. ಬಿಎಂಟಿಸಿ ಈ ಸಂಚಾರವನ್ನು ಆರಂಭಿಸಿದ್ದರೂ,ಜನದಟ್ಟನೆ ಇರುವ ಹೆಚ್ಚಿನ ಭಾಗದಲ್ಲಿ ರಾತ್ರಿ 10 ಗಂಟೆಗೆ ಸಂಚಾರವನ್ನು ನಿಲ್ಲಿಸುತ್ತಿದ್ದು,ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ದುಬಾರಿ ಬೆಲೆ ತೆತ್ತು ಆಟೋದಲ್ಲಿ ಮನೆಗೆ ಬರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

Extend BMTC Bus Service Till Midnight In Bangalore

ಈ ಮಧ್ಯೆ ಬೆಂಗಳೂರು ಪೊಲೀಸರು ನೈಟ್‌ ಲೈಫ್‌ ಅವಧಿಯನ್ನು ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಿದ್ದಾರೆ.ರಾತ್ರಿಯ ಬಿಎಂಟಿಸಿ ಬಸ್‌ ಸಂಚಾರದ ಸಮಸ್ಯೆಯನ್ನು ಬಿಎಂಟಿಸಿ ಅಧಿಕಾರಿಗಳಿಗೆ ತಿಳಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಈ ಸಮಸ್ಯೆಗೆ ಪರಿಹಾರವಾಗಿ ಯಾವೆಲ್ಲಾ ರಸ್ತೆಯಲ್ಲಿ ರಾತ್ರಿ ಹೆಚ್ಚಿನ ಜನದಟ್ಟಣೆ ಇದೆಯೋ ಆ ರಸ್ತೆಯಲ್ಲಿ ಮಾತ್ರ ಬಸ್‌ ಓಡಿಸುತ್ತೇವೆ ಎಂದು ಹೇಳಿದ್ದಾರೆ.[ಬೆಂಗಳೂರು-ಮೈಸೂರು ಹಾದಿಯಲ್ಲಿ 93 ಅತ್ಯಾಧುನಿಕ ಬಸ್]

ರಾತ್ರಿಯ ಬಿಎಂಟಿಸಿ ಬಸ್‌ ಸಂಚಾರದ ಸಮಸ್ಯೆಯನ್ನು ಎಲ್ಲಾ ಜನರಿಗೆ ತಿಳಿಸಲು ಶಶಾಂಕ್‌ ಕುಮಾರ್‌ ಎಂಬವರು ಆನ್‌ಲೈನ್‌ನಲ್ಲಿ ಪಿಟಿಷನ್‌ ಸಲ್ಲಿಸಿದ್ದಾರೆ.ಯಾವೆಲ್ಲಾ ರಸ್ತೆಯಲ್ಲಿ ರಾತ್ರಿ ಬಸ್‌ ಸಂಚಾರ ಬೇಕು ಎಂಬುದನ್ನು ಜನರು ಇಲ್ಲಿ ನಮೂದಿಸಿ ತಮ್ಮ ಭಾಗದಲ್ಲಿ ಬಸ್‌ ಓಡುವಂತೆ ಮಾಡಬಹುದು ಎಂದು ವಿನಂತಿಸಿಕೊಂಡಿದ್ದಾರೆ.

ಆನ್‌ಲೈನಲ್ಲಿ ಪಿಟಿಷನ್‌ಗೆ ಇಲ್ಲಿ ಸಹಿ ಹಾಕಿ:www.change.org

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+