• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Breaking News: ಬೆಂಗಳೂರು ಫುಡ್ ಫ್ಯಾಕ್ಟರಿಯಲ್ಲಿ ಸ್ಫೋಟ ಇಬ್ಬರು ಸಜೀವ ದಹನ

|
Google Oneindia Kannada News

ಬೆಂಗಳೂರು, ಆಗಸ್ಟ್ 23: ಬೆಂಗಳೂರಿನ ಆಹಾರ ಉತ್ಪಾದನೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟದಿಂದ ಇಬ್ಬರು ಸಜೀವದಹನವಾಗಿರುವ ಘಟನೆ ಸೋಮವಾರ ನಡೆದಿದೆ. ನಗರದ ಮಾಗಡಿ ರಸ್ತೆಯ 5ನೇ ಕ್ರಾಸ್ ನಲ್ಲಿ ಇರುವ ಎಂ ಎಂ ಫುಡ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ.

ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆಗೆ ನಡೆದಿರುವ ಘಟನೆಯಲ್ಲಿ ಬಿಹಾರ ಮೂಲದ ಮನೀಷ್ ಮತ್ತು ಸೌರಭ್ ಸಜೀವದಹನವಾಗಿದ್ದಾರೆ. ಬಾಯ್ಲರ್ ಸ್ಫೋಟದ ಸಂದರ್ಭ ಕಾರ್ಖಾನೆಯಲ್ಲಿ ಐದು ಮಂದಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಮೂವರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಅಕ್ಕಪಕ್ಕದ ಮನೆಯವರಿಗೂ ಗಾಯಗೊಂಡಿದ್ದಾರೆ ಎಂದು ಗೊತ್ತಾಗಿದೆ.

ಬೆಂಗಳೂರಿನ ಮನೆಯಲ್ಲಿ ನಿಗೂಢ ಸ್ಫೋಟದಿಂದ ವೃದ್ದ ದಂಪತಿಗೆ ಗಾಯ ಬೆಂಗಳೂರಿನ ಮನೆಯಲ್ಲಿ ನಿಗೂಢ ಸ್ಫೋಟದಿಂದ ವೃದ್ದ ದಂಪತಿಗೆ ಗಾಯ

ಫುಡ್ ಫ್ಯಾಕ್ಟರಿ ಅಕ್ಕಪಕ್ಕದ ಮನೆಯ ಶಾಂತಿ ಮತ್ತು ಧನಲಕ್ಷಿ ಎಂಬುವವರಿಗೂ ಸುಟ್ಟ ಗಾಯವಾಗಿದ್ದು, ಗಾಯಾಳುಗಳನ್ನು ವಿಕ್ಚೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಚಿನ್ ಇದೇ ಫುಡ್ ಫ್ಯಾಕ್ಟರಿಯ ಮಾಲೀಕರೊಂದಿಗೆ ಪಾರ್ಟನರ್ ಆಗಿದ್ದರು ಎಂದು ತಿಳಿದು ಬಂದಿದೆ.

ಬೆಂಗಳೂರಿನ ಎಂ ಎಂ ಫುಡ್ ಫ್ಯಾಕ್ಟರಿ ಸ್ಫೋಟ:

   RCB ಆಟಗಾರರು ಈಗ ಎಲ್ಲಿದ್ದಾರೆ , ಸಿದ್ದತೆ ಹೇಗಿದೆ ? | Oneindia Kannada

   "ಮಾಗಡಿ ರಸ್ತೆ ಎಂ ಎಂ ಫುಡ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಐವರು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು. ಬಿಹಾರ ಮೂಲದ ಇಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ತನಿಖೆ ನಂತರದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದು," ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

   English summary
   Bengaluru : Explosion in Food Factory in Magadi Road; 2 died, several injured.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X