ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಗ್ನಿ-5 ಮಿಸೈಲ್ ಮೂರನೇ ಲಾಂಚ್‌ಗೆ ಡಿಆರ್‌ಡಿಓ ಸಜ್ಜು

By Dr Anantha Krishnan M
|
Google Oneindia Kannada News

ಬೆಂಗಳೂರು, ಜ. 17: ಡಿಆರ್‌ಡಿಓ ಮುಖ್ಯಸ್ಥ ಸ್ಥಾನದಿಂದ ಡಾ. ಅವಿನಾಶ್ ಚಂದರ್ ವಜಾಗೊಂಡಿರಬಹುದು. ಆದರೆ, ಅವರ 40 ವರ್ಷಗಳ ಸ್ವಾರ್ಥರಹಿತ ಶ್ರಮ ಫಲಕೊಟ್ಟಿದೆ.

ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ಅಗ್ನಿ-5 ಜನವರಿ 31ರಂದು ಓಡಿಶಾ ರಾಜ್ಯದ ವ್ಹೀಲರ್ ದ್ವೀಪದಿಂದ ಉಡಾವಣೆಗೊಳ್ಳಲಿದೆ ಎಂದು ಡಿಆರ್‌ಡಿಓ ಮೂಲಗಳು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿವೆ. ಅಂದೇ ಡಾ. ಅವಿನಾಶ ಅವರು ಡಿಆರ್‌ಡಿಓ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಅವರಿಗೆ ಇದಕ್ಕಿಂತ ಉತ್ತಮ ಬೀಳ್ಕೊಡುಗೆ ಸಿಗಲು ಸಾಧ್ಯವೇ? [ಮೋದಿ ಸಲಹೆಗೆ ಡಿಆರ್ ಡಿಓ ನಡೆ ಏನು?]

ಮಿಸೈಲ್ ಉಡಾವಣೆಗೆ ಸಿದ್ಧತೆ : ಡಿಆರ್‌ಡಿಓ ಸಂಸ್ಥೆಯ ಉನ್ನತ ವಿಜ್ಞಾನಿಗಳು 5,000 ಕಿ.ಮೀ. ದೂರ ಚಲಿಸಬಲ್ಲ ಈ ಮಿಸೈಲ್ ಉಡಾವಣೆಗೆ ಸಿದ್ಧತೆ ನಡೆಸಿದ್ದಾರೆ. ಮಿಸೈಲ್ ಲಾಂಚ್ ತಂಡವೊಂದು ಈಗಾಗಲೇ ಓಡಿಶಾಕ್ಕೆ ತೆರಳುತ್ತಿದೆ. ಈ ಮೂಲಕ ಭಾರತವು ಇದೇ ಮೊದಲ ಬಾರಿಗೆ ಪರಮಾಣು ಸಿಡಿತಲೆ ಹೊತ್ತೊಯ್ಯಬಲ್ಲ ಮಿಸೈಲ್ ಅನ್ನು ಪರೀಕ್ಷೆಗೊಳಪಡಿಸುತ್ತಿದೆ. [ಡಿಆರ್ ಡಿಓ ಮುಖ್ಯಸ್ಥ ಅವಿನಾಶ್ ವಜಾ]

missile

ಇದು ಅಗ್ನಿ-5 ಮಿಸೈಲ್‌ನ ಮೂರನೇ ಲಾಂಚ್. ಮೊದಲ ಲಾಂಚ್ 2012ರ ಏಪ್ರಿಲ್ 19ರಂದು ಹಾಗೂ ಎರಡನೇ ಲಾಂಚ್ 2013ರ ಸೆಪ್ಟೆಂಬರ್ 15ರಂದು ಆಗಿತ್ತು. ಇವೆರಡೂ ಅದ್ಭುತ ಯಶಸ್ಸು ಕಂಡಿತ್ತು. [ಬೆಂಗಳೂರಿಗೆ ರಕ್ಷಣಾ ಸಚಿವ ಪರಿಕ್ಕರ್]

avi

"ಸುಮಾರು 5,000 ಕಿ.ಮೀ. ದೂರದವರೆಗೆ ಒಂದು ಟನ್ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಇದಕ್ಕಿದೆ. ಇದರ ಯಶಸ್ಸಿನ ಹಿಂದಿರುವ ಮುಖ್ಯ ವ್ಯಕ್ತಿ ಡಾ. ಅವಿನಾಶ್. ಆದರೆ, ಅವರನ್ನು ವಜಾಗೊಳಿಸುವ ಮೂಲಕ ಕೇಂದ್ರ ಸರ್ಕಾರ ನಮ್ಮ ತ್ಯಾಗ ಹಾಗೂ ಕೊಡುಗೆಯನ್ನು ನಿರ್ಲಕ್ಷಿಸಿದೆ" ಎಂದು ಡಿಆರ್‌ಡಿಓ ಸಂಸ್ಥೆಯ ಓರ್ವ ನಿರ್ದೇಶಕರು ಒನ್ಇಂಡಿಯಾದೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. [ಡಾ. ಅವಿನಾಶ್ ವಜಾ ಎಷ್ಟು ಸರಿ?]

English summary
The much-talked about canisterized version (cold launch) of the surface-to-surface Inter-Continental Ballistic Missile (ICBM) Agni-5 will now in all likelihood be held on January 31 from Wheeler Island, off the Odisha coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X