ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂಗೆ ಆರ್ಥಿಕ ಮುಗ್ಗಟ್ಟಿನ ಚಿಂತೆ, ಅಧಿಕಾರಿಗಳಿಗೆ ಲಕ್ಸುರಿ ಕಾರ್‌ ಬೇಕಂತೆ!

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 14: ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ, ರೈತರ ಸಾಲಮನ್ನಾಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಕೆಲವೊಂದು ದುಂದುವೆಚ್ಚಕ್ಕೆ ಅನಿವಾರ್ಯವಾಗಿ ಬ್ರೇಕ್‌ ಹಾಕಬೇಕಿದೆ.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಆದರೆ ಮತ್ತೆ 8 ದುಬಾರಿ ಕಾರುಗಳ ಖರೀದಿಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಆಡಳಿತದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುತ್ತೇವೆ ಎಂದು ಹೇಳಿದ್ದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಸೂತ್ರಕ್ಕೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಏಕೆಂದರೆ ಅಬಕಾರಿ ಇಲಾಖೆಗಾಗಿ ಅಧಿಕಾರಿಗಳಿಂದ ದುಬಾರಿ ಕಾರುಗಳ ಖರೀದಿ ಭರಾಟೆ ಜೋರಾಗಿದೆ.

ಬಿಬಿಎಂಪಿಗೆ ಬೇಕಂತೆ 12 ಐಷಾರಾಮಿ ಹೊಚ್ಚ ಹೊಸ ಕಾರುಗಳು ಬಿಬಿಎಂಪಿಗೆ ಬೇಕಂತೆ 12 ಐಷಾರಾಮಿ ಹೊಚ್ಚ ಹೊಸ ಕಾರುಗಳು

ಅಬಕಾರಿ ಇಲಾಖೆಯ ಎಂಟು ಮಂದಿ ಜಂಟಿ ಆಯುಕ್ತರಿಗೆ ತಲಾ 10.64 ಲಕ್ಷ ಮೌಲ್ಯದ ಎಂಟು ಕಾರು ಖರೀದಿಗೆ ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಅರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಮಹೀಂದ್ರ ಎಕ್ಸ್‌ಯುವಿ ಡಬ್ಲ್ಯೂ4 ಎಫ್‌ಡಬ್ಲ್ಯೂಡಿ ಮಾದರಿಯ ವಾಹನಗಳ ಖರೀದಿಗೆ 85.13 ಲಕ್ಷ ಮೊತ್ತದ ಪ್ರಸ್ತಾವನೆಗೆ ಸಂಗೀಕಾರ ನೀಡಲಾಗಿದೆ. ಆದರೆ, ಪ್ರತಿ ಕಾರಿಗೆ 6.50 ಲಕ್ಷ ರೂ. ಮಿತಿ ಹಾಗೂ ಹಳೆಯ ವಾಹನ ಬದಲಿಸುವ ಮಾರ್ಗಸೂಚಿ ಪಾಲಿಸುವ ಮೂಲಕ ಖರೀದಿ ಮಾಡುವಂತೆ ಸೂಚಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

Excise officials in luxury mood: Purchasing 8 new cars

ಎಚ್‌ಡಿ ಕುಮಾರಸ್ವಾಮಿಯವರು ದುಂದುವೆಚ್ಚಕ್ಕೆ ಎಷ್ಟೇ ಕಡಿವಾಣ ಹಾಕಲು ಪ್ರಯತ್ನಿಸಿದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ, ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ, ಆರ್ಥಿಕ ಪರಿಸ್ಥಿತಿ ಹೀಗಿರುವಾಗ ಇಂತಹ ಲಕ್ಸುರಿ ಕಾರುಗಳ ಶೋಕಿ ಬೇಕಿತ್ತಾ ಎನ್ನುವುದುಸಾರ್ವಜನಿಕರಲ್ಲಿ ಮೂಡಿರುವ ದೊಡ್ಡ ಪ್ರಶ್ನೆಯಾಗಿದೆ.

English summary
Despite financial ban on luxury expenditure impose by chief minister H.D.Kumaraswamy, department of excise purchasing eight new luxury cars for officials. Sources claimed that each car cost is around Rs.11 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X