• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಾರಕಿಹೋಳಿ ರಾಸಲೀಲೆ ಪ್ರಕರಣ: ತನಿಖೆ ಆರಂಭವಾದರೆ ಉರುಳು ಯಾರಿಗೆ?

|

ಬೆಂಗಳೂರು, ಮಾರ್ಚ್ 05: ಮಾಜಿ ಸಚಿವ ಜಾರಕಿಹೊಳಿ ರಾಸಲೀಲೆ ಪ್ರಕರಣದ ತನಿಖೆ ಹೊಸ ಆಯಾಮ ಪಡೆದುಕೊಂಡಿದೆ. ಸುಪ್ರೀಂಕೋರ್ಟ್ ತೀರ್ಪು ಪ್ರಕಾರ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಒಂದು ವಾರ ಕಾಲಾವಕಾಶವಿದೆ. ದೂರುದಾರ ದಿನೇಶ್ ಕಲ್ಲಹಳ್ಳಿ ವಿಚಾರಣೆಗೆ ಮಾರ್ಚ್ 09 ರಂದು ಬರುವುದಾಗಿ ಪೊಲೀಸರಿಗೆ ಸ್ಪಷ್ಟಪಡಿಸಿದ್ದಾರೆ. ದೂರುದಾರನ ಹೇಳಿಕೆ ಆಧರಿಸಿ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಕಾಲವಕಾಶವಿಲ್ಲ. ಅಷ್ಟರೊಳಗೆ ಎಫ್‌ಐಆರ್ ದಾಖಲಿಸದಿದ್ದರೆ ದೂರನ್ನು ರದ್ದು ಮಾಡಬೇಕಾದ ಅನಿವಾರ್ಯತೆ. ಇಂತಹ ಸಂಕಷ್ಟ ಎದುರಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಸಲಹೆ ಮೊರೆ ಹೋಗಿದ್ದಾರೆ. ಕಾನೂನು ತಜ್ಞರ ಸಲಹೆ ಮೇರೆಗೆ ಎರಡು ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ.

ತಾಂತ್ರಿಕ ತೊಡಕು ಏನು : ಯಾವುದೇ ಒಂದು ಅಪರಾಧಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಿದ ಒಂದು ವಾರದೊಳಗೆ ಎಫ್ಐಆರ್ ದಾಖಲಿಸಬೇಕು ಎಂದು ಸುಪ್ರೀಂಕೋರ್ಟ್ ಲಲಿತಕುಮಾರಿ ಮತ್ತು ಕೇಂದ್ರ ಸರ್ಕಾರ ಪ್ರಕರಣದಲ್ಲಿ ಸ್ಪಷ್ಟ ತೀರ್ಪು ನೀಡಿದೆ. ಮಾರ್ಚ್‌ 3 ರಂದು ದೂರು ನೀಡಿರುವ ದಿನೇಶ್ ಪೊಲೀಸರ ವಿಚಾರಣೆಗೆ ಬರುತ್ತಿಲ್ಲ. ಭದ್ರತೆ ನೆಪ ನೀಡಿ ಸುಮ್ಮನಾಗಿದ್ದಾರೆ. ಹೀಗಾಗಿ ಪೊಲೀಸರು ಎಫ್ ಐಆರ್ ದಾಖಲಿಸಲು ತಾಂತ್ರಿಕವಾಗಿ ಹೆಣಗಾಡುತ್ತಿದ್ದಾರೆ. ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕಾ ? ಅಥವಾ ವಿಚಾರಣೆ ನಡೆಸಿ ನ್ಯಾಯಾಧೀಶರ ಅನುಮತಿ ಮೇರೆಗೆ ಎಫ್ಐಆರ್ ದಾಖಲಿಸಬೇಕಾ ಎಂಬುದರ ಬಗ್ಗೆ ಸಲಹೆ ಪಡೆದುಕೊಂಡಿದ್ದಾರೆ.

ರಮೇಶ್ ಜಾರಕಿಹೊಳಿಗೆ ಅಂದು ರಾತ್ರಿ ಸಿಎಂ ಯಡಿಯೂರಪ್ಪ ಕೊಟ್ಟಿರುವ ಭರವಸೆ ಏನು?ರಮೇಶ್ ಜಾರಕಿಹೊಳಿಗೆ ಅಂದು ರಾತ್ರಿ ಸಿಎಂ ಯಡಿಯೂರಪ್ಪ ಕೊಟ್ಟಿರುವ ಭರವಸೆ ಏನು?

ವಿಡಿಯೋ ಹುಡುಗಿಗಾಗಿ ಹುಡುಕಾಟ : ಸಂತ್ರಸ್ತ ಯುವತಿಗಾಗಿ ಪೊಲೀಸರು ಕಳೆದ ಎರಡು ದಿನದಿಂದ ತೀವ್ರ ಶೋಧ ನಡೆಸುತ್ತಿದ್ದಾರೆ. ಆರ್‌.ಟಿ.ನಗರ ಪಿಜಿಗಳಲ್ಲಿ ಜಾಲಾಡಿದ್ದಾರೆ. ಇದರ ಬೆನ್ನಲ್ಲೇ ವಿಡಿಯೋದಲ್ಲಿ ಇರುವ ಹುಡುಗಿಗೆ ಹೋಲಿಕೆಯಾಗುವ ಪೋಟೊಗಳ ಗುಚ್ಛ ಸಾಮಾಜಿಕ ಜಾಲ ತಾಣಗಳಲ್ಲಿ ಹೊರ ಬಿದ್ದಿವೆ. ಈ ಪೋಟೋದಲ್ಲಿರುವಳೇ ಜಾರಕಿಹೊಳಿ ಜತೆ ಸಂಭಾಷಣೆ ನಡೆಸಿರುವ ಯುವತಿ ಎಂದು ಹೇಳಲಾಗುತ್ತಿದೆ. ಆದರೆ, ಆ ಯುವತಿ ಎಲ್ಲಿದ್ದಾಳೆ, ಪೂರ್ಣ ವಿವರಗಳು ಲಭ್ಯವಾಗಿಲ್ಲ. ಆಕೆಯ ಸಾಮಾಜಿಕ ಜಾಲ ತಾಣದ ಖಾತೆಗಳು ಸ್ಥಗಿತಗೊಂಡಿರುವ ಕಾರಣ ವಿವರಗಳು ಲಭ್ಯವಾಗಿಲ್ಲ. ಹೀಗಾಗಿ ಪೊಲೀಸರು ಗೊಂದಲಕ್ಕೆ ಒಳಗಾಗಿದ್ದಾರೆ. ಸಂತ್ರಸ್ತ ಯುವತಿ ಸಿಕ್ಕಿ ಸಹಮತದ ಲೈಂಗಿಕ ಕ್ರಿಯೆ ಎಂದು ಹೇಳಿಕೆ ನೀಡಿದರೆ ಪ್ರಕರಣ ದಾಖಲಾಗುವುದಿಲ್ಲ. ಒಂದು ವೇಳೆ ಕೆಲಸದ ಅಮಿಷೆ ಒಡ್ಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು ಎಂದು ಹೇಳಿಕೆ ನೀಡಿದಲ್ಲಿ ಮಾಜಿ ಸಚಿವರ ಮೇಲೆ ಕೇಸು ದಾಖಲಾಗುವ ಸಾಧ್ಯತೆಯಿದೆ.

ಮೂಲ ವಿಡಿಯೋ ಮುಖ್ಯ: ರಮೇಶ್ ಜಾರಕಿಹೊಳಿ ಬಗ್ಗೆ ಈವರೆಗೆ ಬಿಡುಗಡೆಯಾಗಿರುವ ವಿಡಿಯೋಗಳು ಎಡಿಟ್ ಆಗಿವೆ. ಪೊಲೀಸರ ತನಿಖೆಗೆ ಮೂಲ ಸಿಡಿ ಅಗತ್ಯ ವಿದೆ. ಇನ್ನು ದಿನೇಶ್ ನೀಡಿರುವ ವಿಡಿಯೋದಲ್ಲಿ ಸಣ್ಣ ಸುಳಿವೂ ಸಿಕ್ಕಿಲ್ಲ. ಆದರೆ ವಿಚಾರಣೆ ವೇಳೆ, ವಿಡಿಯೋ ಕೊಟ್ಟವರು ಯಾರು ? ಸಂತ್ರಸ್ತ ಯುವತಿಗೂ ಅವರಿಗೂ ಏನು ಸಂಬಂಧ ? ಅವರು ಯಾಕೆ ನೇರ ದೂರು ನೀಡದೇ ನಿಮಗೆ ನೀಡಿದರು ? ಅನ್ ಎಡಿಟೆಡ್ ವಿಡಿಯೋ ಯಾರ ಬಳಿ ಇದೆ ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯಲಿದ್ದಾರೆ. ಇದಕ್ಕೂ ಯಾವುದೇ ಉತ್ತರ ಸಿಗದಿದ್ದರೆ ಪ್ರಕರಣವನ್ನು ತಾರ್ಕಿಕ ಅಂತ್ಯಗೊಳಿಸಲು ಪೊಲೀಸರಿಗೆ ಕಷ್ಟವಾಗಲಿದೆ.

   10 ದಿನ ಸದನದಿಂದ ಬ್ಯಾನ್ ಮಾಡಿದ್ದು ಯಾಕೆ ?? | Bhadravati | Oneinda Kannada

   ಯುವತಿಗೆ ಸಂಬಂಧಿಸಿದ ಸಾಮಾಜಿಕ ಜಾಲ ತಾಣದ ಪೋಟೋಗಳು ಹೊರ ಬೀಳುತ್ತಿದ್ದಂತೆ ಆ ಖಾತೆಯ ವಿವರ ಪಡೆಯಲು ಪೊಲೀಸರು ಸೈಬರ್ ತಜ್ಞರ ಮೊರೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕು.

   English summary
   former minister Ramesh Jarkiholi CD row; Cubbon Park police have begun an investigation with help of the legal advisers know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X