ವರದಕ್ಷಿಣೆ ಕೊಟ್ಟ ಸೇನಾಧಿಕಾರಿ ಮೇಲೆ ಕೇಸ್

ಬೆಂಗಳೂರು, ನ.8 : ಸಾಮಾನ್ಯವಾಗಿ ವರದಕ್ಷಿಣೆ ಪಡೆದುಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧ ಎಂಬುದು ಎಲ್ಲರಿಗೂ ತಿಳಿದಿದೆ. ಅದರೆ, ವರದಕ್ಷಿಣೆ ನೀದಿದವರಿಗೂ ಅಪಾಯ ತಪ್ಪಿದ್ದಲ್ಲ ಎಂಬುದು ಕೋರ್ಟಿನಿಂದ ಹೊರಬಂದಿರುವ ಮಾಹಿತಿ.

ಮಾಜಿ ಐಟಿ ಸೇಲ್ಸ್ ಮನಪ್ರೀತ್ ಸಿಂಗ್ ಭಂಡಾರಿ(37) ಅವರ ವಿರುದ್ಧ ಪತ್ನಿ ಅಶೀಮಾ ಗುಪ್ತಾ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು.ಇದರ ಬೆನ್ನಲ್ಲೇ ಭಂಡಾರಿ ಅವರು ತಮ್ಮ ಮಾವ ಭಾರತೀಯ ವಾಯುಸೇನೆಯ ಮಾಜಿ ಯೋಧ (ಆಶೀಮಾ ತಂದೆ) ಹಾಗೂ ಇತರೆ ಕುಟುಂಬ ಸದಸ್ಯರ ಮೇಲೆ ವರದಕ್ಷಿಣೆ ನೀಡಿದ್ದಕ್ಕೆ ದೂರು ದಾಖಲಿಸಿದ್ದಾರೆ.

ಇದು ಅಪರೂಪದ ಪ್ರಕರಣವಾಗಿದ್ದು, ವರದಕ್ಷಿಣೆ ಕಾಯ್ದೆ ಸೆಕ್ಷನ್ 3 ಪ್ರಕಾರ ಈ ರೀತಿ ಪ್ರಕರಣ ದಾಖಲಾಗುತ್ತದೆ. ಆದರೆ, ಕೋರ್ಟ್ ಯಾವತ್ತಿಗೂ ವರದಕ್ಷಿಣೆ ನೀಡುವವರ ಬಗ್ಗೆ ಕನಿಕರ ಭಾವ ಹೊಂದಿತುತ್ತದೆ ವರದಕ್ಷಿಣೆ ತೆಗೆದುಕೊಳ್ಳುವವರ ಮೇಲಲ್ಲ.

Ex-IAF Officer faces case for giving dowry

ಸುಪ್ರೀಂಕೋರ್ಟಿನ ಈ ಹಿಂದಿನ ಬಹುತೇಕ ಪ್ರಕರಣಗಳಲ್ಲಿ ವರದಕ್ಷಿಣೆಯನ್ನು ಕಷ್ಟಪಟ್ಟು ನೀಡಲಾಗುತ್ತದೆ ಯಾರೂ ಮನಸೋ ಇಚ್ಛೆ ವರದಕ್ಷಿಣೆ ನೀಡುವುದಿಲ್ಲ ಹೀಗಾಗಿ ವರದಕ್ಷಿಣೆ ಸ್ವೀಕರಿಸುವವರ ದುರಾಸೆಗೆ ನೀಡುವವರ ಕಷ್ಟವನ್ನು ಸಮೀಕರಿಸಲು ಬರುವುದಿಲ್ಲ ಎನ್ನಲಾಗಿದೆ.

ಅಚ್ಚರಿಯೆಂದರೆ ವರದಕ್ಷಿಣೆ ನೀಡುವವರ ವಿರುದ್ಧ ಯಾವುದೇ ತೀರ್ಪು ಹೊರಬಿದ್ದಿಲ್ಲ. ವರದಕ್ಷಿಣೆ ಉಡುಗೊರೆ ರೂಪ ನೀಡುವುದರಿಂದ ಪ್ರಕರಣದ ಸತ್ಯಾಸತ್ಯತೆ ಹೊರ ಬರುವುದೇ ಇಲ್ಲ. ಆದರೂ, ಪ್ರಕರಣವನ್ನು ನೋಡಿಕೊಂಡು ವರದಕ್ಷಿಣೆ ಕೊಡುವವರು ಹಾಗೂ ಪಡೆಯುವವರು ಇಬ್ಬರಿಗು ಶಿಕ್ಷೆ ವಿಧಿಸಬಹುದಾಗಿದೆ ಎಂದು ವಕೀಲ ಜಿಆರ್ ಮೋಹನ್ ಹೇಳಿದ್ದಾರೆ.

ವರದಕ್ಷಿಣೆ ಕಿರುಕುಳ ಕಾಯ್ದೆಯನ್ನು ಬಹುತೇಕ ಮಂದಿ ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ. ಪತ್ನಿ ದೂರು ನೀಡಿದ ತಕ್ಷಣ ಪತಿಯನ್ನು ಜೈಲಿಗೆ ತಳ್ಳುವುದು ಸರಿಯಿಲ್ಲ. ಸೆಕ್ಷನ್ 3ಗೆ ತಿದ್ದುಪಡಿ ಅಗತ್ಯವಿದೆ ಎಂದು CRISP ಸಂಸ್ಥೆಯ ಕುಮಾರ್ ಜಾಗಿರ್ ದಾರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+