• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೂ ಆರಂಭವಾಗಿಲ್ಲ ಬೆಂಗಳೂರು ಉಪನಗರ ರೈಲು ಯೋಜನೆ

|
Google Oneindia Kannada News

ಬೆಂಗಳೂರು ನವೆಂಬರ್ 23: ವಿವಿಧ ಕಾರಣಗಳಿಂದಾಗಿ ಬೆಂಗಳೂರು ಉಪನಗರ ರೈಲು ಯೋಜನೆಯ ಭಾಗವಾದ ಬೈಯಪ್ಪನಹಳ್ಳಿ- ಚಿಕ್ಕಬಾಣಾವರ 859.67 ಕೋಟಿ ರೂ. ಕಾರಿಡಾರ್ ಕಾಮಗಾರಿ ನಿರ್ಮಾಣ ಮೂರು ತಿಂಗಳು ಕಳೆದರು ಆರಂಭವಾಗಿಲ್ಲ.

ಬೈಯಪ್ಪನಹಳ್ಳಿ -ಚಿಕ್ಕಬಾಣಾವರವರೆಗಿನ ಕಾರಿಡಾರ್‌ಗೆ ಲಾರ್ಸನ್ ಆಂಡ್ ಟೂಬ್ರೊ ಸಂಸ್ಥೆಗೆ ಕಾಮಗಾರಿ ಆರಂಭಕ್ಕೆ ಅನುಮತಿ ನೀಡಿ ಮೂರು ತಿಂಗಳಾಗಿದೆ. ಕಾಮಗಾರಿ ಸಂಬಂಧ ರೈಲ್ವೆ ಇಲಾಖೆ 91 ಎಕರೆ ಭೂಮಿಯನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಬೇಕಿದೆ, ಈ ಕೆಲಸ ಆಗಿಲ್ಲ.

ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಸುಂದರ ರೈಲ್ವೆ ನಿಲ್ದಾಣಗಳು ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನ ಪಡೆದಿರುವ ಸುಂದರ ರೈಲ್ವೆ ನಿಲ್ದಾಣಗಳು

ಮುಖ್ಯವಾಗಿ ಬೃಹತ್ ಸಿಗ್ನಲಿಂಗ್ ಮತ್ತು ಟೆಲಿಕಾಂ ಕೇಬಲ್‌ಗಳನ್ನು ಸ್ಥಳಾಂತರಿಸಬೇಕಿದೆ. ಅಲ್ಲದೇ ನಿರ್ಮಾಣ ಕಾಮಗಾರಿಯಲ್ಲಿ ಬರುವ ಸುಮಾರು 2,400 ಮರಗಳು ತೆಗೆದು ಹಾಕಬೇಕಿದೆ. ಇಷ್ಟು ಕೆಲಸಗಳು ಆಗದ ಪರಿಣಾಮ ಉಪನಗರ ರೈಲು ಯೋಜನೆ ಅಭಿವೃದ್ಧಿ ಹಿನ್ನಡೆ ಅನುಭವಿಸುತ್ತಿದೆ.

ಉಪನಗರ ರೈಲು ಯೋಜನೆ 148.17 ಕಿ.ಮೀ. ಪೈಕಿ ನಾಲ್ಕು 25.57 ಕಿ.ಮೀ. ಉದ್ದದ ನಾಲ್ಕು ಕಾರಿಡಾರ್ ನಿರ್ಮಿಸಲಾಗುತ್ತಿದೆ. ಸದ್ಯ ಕಾರಿಡಾರ್2 ರಲ್ಲಿ ಕಾಮಗಾರಿ ಆರಂಭವಾಗಿಲ್ಲ. ಈ ಯೋಜನೆಗೆ ಅಂದಾಜು 15,767 ಕೋಟಿ ರೂ. ನಡಿ ಕಾಮಗಾರಿ ಪ್ರಾರಂಭಿಸಲು ಆದೇಶ ಪತ್ರ ಜೊತೆಗೆ ಈ ಕಾರಿಡಾರ್‌ ಅನ್ನು 27 ತಿಂಗಳ ಅವಧಿಯಲ್ಲಿ ನಿರ್ಮಿಸುವಂತೆ ಸೂಚಿಸಲಾಗಿದೆ.

ಮಣ್ಣು ಪರೀಕ್ಷೆ ಮಾತ್ರ ನಡೆದಿದೆ; ಆದರೆ ಆದೇಶ ಪತ್ರ ನೀಡಿ ಮೂರು ತಿಂಗಳು ಕಳೆದರೂ ಕಾಮಗಾರಿ ಕೈಗೆತ್ತಿಕೊಳ್ಳಲಾಗಿಲ್ಲ. ಕಾಮಗಾರಿ ಸಂಬಂಧ ಮಣ್ಣು ಪರೀಕ್ಷೆ ಕಾರ್ಯ ಮಾತ್ರವೇ ನಡೆದಿದೆ. ಸಿವಿಲ್ ಕೆಲಸಗಳು ಆರಂಭವಾಗದಬೇಕಾದರೆ ಮೊದಲು ಭೂಮಿಯನ್ನು ನೋಡಲ್ ಏಜೆನ್ಸಿಯಾದ ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ (ಕೆ-ರೈಡ್) ಗೆ ವರ್ಗಾಯಿಸಬೇಕು. ನಂತರ ಅದು ಎಲ್ ಆಂಡ್ ಟಿಗೆ ಹಸ್ತಾಂತರವಾಗಬೇಕು. ಈ ಸಂಬಂಧ ಕಡತಗಳು ಇಲಖೆ ವ್ಯಾಪ್ತಿಯಲ್ಲೇ ಇವೆ ಎನ್ನಲಾಗಿದೆ. ಮುಖ್ಯವಾಗಿ ಕಾಮಗಾರಿಗೆ ಅಗತ್ಯವಾದ ಖಾಸಗಿ ಮಾಲೀಕತ್ವದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಮೂಲಗಳು ತಿಳಿಸಿವೆ.

2,300 ಮರಗಳಿಗೆ ಕೊಡಲಿ; ಉಪನಗರ ರೈಲು ಕಾರ್ಯಾಚರಣೆ ನಿಯಂತ್ರಿಸಬೇಕಾದರೆ ಭೂಗತ ಕೇಬಲ್‌ಗಳನ್ನು ಸ್ಥಳಾಂತರಿಸಬೇಕು. ಉದ್ದೇಶಿತ 25 ಕಿ.ಮೀ. ನಲ್ಲಿರುವ ಕೇಬಲ್‌ ಸ್ಥಳಾಂತರ ಪೈಕಿ ಈಗ ಕೇವಲ 4 ಕಿ.ಮೀ. ಕಾರ್ಯಚರಣೆ ನಡದಿದೆ. ಇನ್ನೂ 2,400 ಮರಗಳು ಯೋಜನೆಯ ಕೆಲಸಕ್ಕೆ ಅಡ್ಡಿಯಾಗುತ್ತಿದ್ದು, ಒಟ್ಟು 2,300 ಮರಗಳಿಗೆ ಕೊಡಲಿ ಬೀಳಲಿದೆ. ಹಲವು ಮರಗಳ ಸ್ಥಳಾಂತರ ಕಾರ್ಯಕ್ಕೆ ಅರಣ್ಯ ಇಲಾಖೆ ಅನುಮತಿ ಪಡೆಯುವ ಕಾರ್ಯ ನಡೆಯುತ್ತದೆ.

Even after 3 Months no Start Bengaluru Suburban Rail Project Corridor 2

ಬೆಂಗಳೂರು ಉಪನಗರ ರೈಲು ಯೋಜನೆಗೆ ಒಟ್ಟು 2026ರ ವರೆಗೆ ಗಡುವು ನೀಡಲಾಗಿದೆ. ಸದ್ಯ ಯೋಜನೆಯ ಪ್ರಗತಿ ನೋಡಿದರೆ 2030 ಕಳೆದರೂ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಎಂಬ ಅನುಮಾನಗಳು ಮೂಡಿವೆ.

English summary
Even after 3 Months no start bengaluru suburban rail progect corridor-2 for few reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X