ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ 2ನೇ ಹಂತ: ಯುರೋಪಿಯನ್ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್ 4000 ಕೋಟಿ ಹೂಡಿಕೆ

|
Google Oneindia Kannada News

ಬೆಂಗಳೂರು, ಜನವರಿ 11: ಮೆಟ್ರೋ 2ನೆ ಹಂತದ ಯೋಜನೆಯಲ್ಲಿ ಯುರೋಪಿಯನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ 500 ಮಿಲಿಯನ್ ಯುರೋ ಹೂಡಿಕೆ ಮಾಡಲು ಮುಂದೆ ಬಂದಿದ್ದು, ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಸಮ್ಮುಖದಲ್ಲಿ 200 ಮಿಲಿಯನ್ ಯುರೋ ಯೋಜನಾ ಒಪ್ಪಂದಕ್ಕೆ ಸಹಿ ಮಾಡಲಾಯಿತು.

ಯೂರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ನೀಡುತ್ತಿರುವ ನೆರವಿಗೆ ಸರ್ಕಾರ ಆಭಾರಿಯಾಗಿದೆ. ಬೆಂಗಳೂರು ನಗರದಲ್ಲಿ 11 ಮಿಲಿಯನ್ ಜನಸಂಖ್ಯೆ ಇದ್ದು, ಪರಿಸರ ಮಾಲಿನ್ಯಕ್ಕೆ ನೀಡುತ್ತಿರುವ ಕೊಡುಗೆಯನ್ನು ಹಾಗೂ ವಾಹನ ದಟ್ಟಣೆ ಕಡಿಮೆ ಮಾಡುವ, ಹಾಗೂ ಜನ ಸಾಮಾನ್ಯರ ಜೀವನ ಮಟ್ಟ ಉತ್ತಮ ಪಡಿಸುವ ನಿಟ್ಟಿನಲ್ಲಿ ಮೆಟ್ರೋ ಯೋಜನೆ ಸಹಕಾರಿಯಾಗಿದೆ ಎಂದು ಸಿಎಂ ಹೇಳಿದರು.

2ನೇ ಹಂತದ ಮೆಟ್ರೋ: ನಗರಾಭಿವೃದ್ಧಿ ಇಲಾಖೆ ಎಚ್ಚರಿಕೆ ಏನು?
ಮೊಟ್ರೋ 2ನೇ ಹಂತದ ಯೋಜನೆಯ ಅಂದಾಜು ಮೊತ್ತ 26,405 ಕೋಟಿ ರೂ. ಗಳಾಗಿದ್ದು, ಈ ಪೈಕಿ 12,141 ಕೋಟಿ ರು.ಗಳು ಸಾಲದ ಅಗತ್ಯ ವಿದೆ.ಇ ಐ ಬಿ 500 ಮಿಲಿಯನ್ ಯೂರೋಗಳನ್ನು ಅಂದರೆ ಸುಮಾರು 4000 ಕೋಟಿ ರೂ. ಗಳ ನೆರವನ್ನು ಒದಗಿಸುತ್ತಿರುವುದು ಅಭಿನಂದನೀಯ ಎಂದು ಮುಖ್ಯಮಂತ್ರಿ ಗಳು ತಿಳಿಸಿದರು. ಈ ಸಾಲದ ನೆರವನ್ನು ಇ.ಐ.ಬಿ ತಮ್ಮ ಪರಿಸರ ಸೌಲಭ್ಯ ಯೋಜನೆಯಡಿ ಕೈಗೊಂಡಿರುವುದಾಗಿ ಅವರು ತಿಳಿಸಿದರು.

European Investment Bank investing 4000 crore in Metro 2nd stage construction

ಮೆಟ್ರೊ ಎರಡನೇ ಬಿ ಹಂತದ ನಿರ್ಮಾಣಕ್ಕೆ ನಿನ್ನೆಯಷ್ಟೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಅದರ ಬೆನ್ನಲ್ಲೆ ಇಂದು ಹೂಡಿಕೆಗೆ ಮೊದಲ ಹಂತದ ಒಪ್ಪಂದ ಮಾಡಿಕೊಳ್ಳಲಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಬದಲಾವಣೆ,ಕಾರಣಗಳೇನು? ಕೆಂಪೇಗೌಡ ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಬದಲಾವಣೆ,ಕಾರಣಗಳೇನು?

ಈ ಸಂದರ್ಭದಲ್ಲಿ ಯುರೋಪಿಯನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ನ ನಿರ್ದೇಶಕಿ ಮರಿಯಾ, ಉಪನಿರ್ದೇಶಕಿ ಸುನೀತಾ ,ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

English summary
European Investment Bank investing 4000 crore rupees in Metro 2nd stage construction. European Investment Bank CEO Mariya today met CM Kumaraswamy and discussed about investment process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X