Nandi Hills: ರಜೆ ಇದೆ ಅಂತ ಹುಡುಗಿ ಜೊತೆ ನಂದಿ ಬೆಟ್ಟಕ್ಕೆ ಹೋಗಿಬಿಟ್ಟಿರಾ.. ಹುಡುಗರೇ ಪ್ರವೇಶ ಇಲ್ಲ....

ಬೆಂಗಳೂರು ಡಿಸೆಂಬರ್ 26: ಹೊಸ ವರ್ಷ ಬಂತು, ವೀಕೆಂಡ್ ಬಂತು ಅಷ್ಟೇ ಯಾಕೆ ಸಾಲು ಸಾಲು ರಜೆ ಕೂಡ ಇದೆ. ಇಷ್ಟು ಸಾಕು ಅಲ್ವಾ ಸುತ್ತಾಡೋಕೆ, ಮಜಾ ಮಾಡೋಕೆ? ಈ ಬಾರಿ ಹೊಸ ವರ್ಷ ವಾರಾಂತ್ಯ ಕಳೆದು ಸೋಮವಾರಕ್ಕೆ (ಜನವರಿ 1) ಬಂದಿದೆ. ಶನಿವಾರದಿಂದ ಸೋಮವಾರದವರೆಗೂ ಪ್ರವಾಸದಿಂದ ಹಿಡಿದು ನಾನಾ ಕಾರ್ಯಕ್ರಮಗಳನ್ನು ಮಾಡಬಹುದು. ಹೀಗೆ ಹೊಸ ವರ್ಷಕ್ಕೆ ಮೋಜು ಮಸ್ತಿ ಮಾಡುವ ಬೆಂಗಳೂರಿಗರು ನಂದಿ ಬೆಟ್ಟಕ್ಕೂ ಹೋಗುವ ಪ್ಲ್ಯಾನ್ ಮಾಡಿರಬಹುದು.

ನೀವೇನಾದರೂ ಹೀಗೆ ಪ್ಲ್ಯಾನ್ ಮಾಡಿದ್ದರೆ, ಅದಕ್ಕೂ ಮುಂಚೆ ಸ್ವಲ್ಪ ತಡಿರಿ. ಯಾಕೆಂದರೆ ಪ್ರತೀ ಬಾರಿಯಂತೆ ಈ ಬಾರಿಯೂ ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕೆ ಹೋಗುವುದಕ್ಕೆ ನಿಷೇಧ ಹೇರಲಾಗಿದೆ. ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ ನಂದಿ ಬೆಟ್ಟ ವಾರಾಂತ್ಯದಲ್ಲಿ ಸಿಲಿಕಾನ್‌ ಸಿಟಿ ಮಂದಿಗೆ ಹಾಟ್‌ ಫೇವರಿಟ್‌ ತಾಣವಾಗಿದೆ. ಆದರೆ ಈ ಭಾನುವಾರ ಸಂಜೆಯಿಂದ ಸೋಮವಾರ ಸಂಜೆವರೆಗೆ ಗಿರಿಧಾಮಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

Entry Ban on Nandi Hill for New Year 2024

ಡಿಸೆಂಬರ್ 31ರ ಸಂಜೆ 6ರಿಂದ ಜನವರಿ 1ರ ಬೆಳಗ್ಗೆ 6 ಗಂಟೆವರೆಗೆ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಡಿಸಿ ರವೀಂದ್ರ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷಾಚರಣೆ ವೇಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾವಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಇದರಿಂದ ನಂದಿ ಬೆಟ್ಟದಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇಚ್ಚಿಸುವವರಿಗೆ ಡಿಸಿ ಆದೇಶ ನಿರಾಸೆ ಮೂಡಿಸಿದೆ. ಕಳೆದ ವರ್ಷವೂ ನಂದಿ ಬೆಟ್ಟ ಹಾಗೂ ಸ್ಕಂದಗಿರಿಯಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಹೀಗಾಗಿ ನೀವೇನಾದ್ರೂ ಈ ವಾರಾಂತ್ಯಕ್ಕೆ ನಂದಿ ಬೆಟ್ಟಕ್ಕೆ ಹೋಗುವ ಪ್ಲ್ಯಾನ್ ಮಾಡಿದ್ದರೆ ನಿಮ್ಮ ಪ್ರಯಾಣದ ಮಾರ್ಗವನ್ನು ಬದಲಾಯಿಸುವುದು ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+