ಬೆಂಗಳೂರಿನಲ್ಲಿ ಭೂಗಳ್ಳರಿಗೆ ಶಾಕ್; ಕೋಟ್ಯಂತರ ಬೆಲೆಯ ಭೂಮಿ ಮರು ವಶ!
ಬೆಂಗಳೂರು, ಸೆ. 12: ಬೆಂಗಳೂರು ಹಾಗೂ ಬೆಂ. ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮಾಡಿದ್ದ ಭೂಗಳ್ಳರಿಗೆ ಜಿಲ್ಲಾಡಳಿತ ಶಾಕ್ ಕೊಟ್ಟಿದೆ. ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸರ್ಕಾರಿ ಜಮೀನುಗಳಾದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ.
ಬೆಂಗಳೂರು ಸೇರಿದಂತೆ ನಾಲ್ಕು ತಾಲ್ಲೂಕಗಳಲ್ಲಿ 20 ಕೆರೆಗಳಲ್ಲಿ ಒತ್ತುವರಿಯಾಗಿದ್ದ 32.10.04 ಎಕರೆ ವಿಸ್ತೀರ್ಣದ ಭೂಮಿಯನ್ನು ಹಾಗೂ ಯಲಹಂಕ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕಿನಗಳಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಖರಾಬು 0.07.01 ಎಕರೆ ವಿಸ್ತೀರ್ಣದ ಭೂಮಿಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಜೊತೆಗೆ ಬೆಂಗಳೂರು ಉತ್ತರ, ಯಲಹಂಕ ಮತ್ತು ಆನೇಕಲ್ ತಾಲ್ಲೂಕುಗಳಲ್ಲಿ ಸರ್ಕಾರಿ ಗೋಮಾಳ 9.15 ಎಕರೆ ಮತ್ತು ಬೆಂಗಳೂರು ಉತ್ತರ ಮತ್ತು ಪೂರ್ವ ತಾಲ್ಲೂಕಿಗಳಲ್ಲಿ ಸರ್ಕಾರಿ ಗುಂಡು ತೋಪು 3-36 ಎಕರೆ ಭೂಮಿ ಸೇರಿದಂತೆ ಒಟ್ಟು ಕೋಟ್ಯಂತರ ಬೆಲೆ ಬಾಳುವ ಒಟ್ಟು 13.11 ಎಕರೆ ವಿಸ್ತೀರ್ಣದ ಭೂಮಿಯನ್ನು ಸರ್ಕಾರದ ವಶಕ್ಕೆ ಮರಳಿ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಯಾವ್ಯಾವ ಹೋಬಳಿಯಲ್ಲಿ ಎಷ್ಟೆಷ್ಟು ಭೂಮಿಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಮುಂದಿದೆ.

ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿ!
ಅದರೊಂದಿಗೆ ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಕುಕ್ಕನಹಳ್ಳಿ ಗ್ರಾಮದ ಸ. ನಂ.117, 106 ರಲ್ಲಿ ಸರ್ಕಾರಿ 3.16 ಎಕರೆ, ತೋಟದ ಗುಡ್ಡದಹಳ್ಳಿ ಗ್ರಾಮದ ಸ.ನಂ 87 ರಲ್ಲಿ ಗುಂಡು ತೋಪು 0.10 ಎಕರೆ, ಅವ್ವೇರಹಳ್ಳಿ ಗ್ರಾಮದ ಸ.ನಂ 77 ರಲ್ಲಿ ಗೋಮಾಳ 6.2 ಎಕರೆ ಸೇರಿದಂತೆ ಒಟ್ಟು 10.06 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ.
ಯಲಹಂಕ ತಾಲ್ಲೂಕಿನ ಸಿಂಗನಾಯಕನಹಳ್ಳಿ ಗ್ರಾಮದ ಸ.ನಂ 64 ರಲ್ಲಿ ಸರ್ಕಾರಿ ಆವಲಹಳ್ಳಿ ಕೆರೆ 0.16 ಎಕರೆ, ಜಾಲ ಹೋಬಳಿಯ ಬಿ.ಕೆ.ಪಾಳ್ಯದಲ್ಲಿ ಸ.ನಂ 7 ರಲ್ಲಿ 2.2 ಎಕರೆ ಗೋಮಾಳ, ಹುಣಸಮಾರನಹಳ್ಳಿ ಗ್ರಾಮದ ಸ.ನಂ 103ರಲ್ಲಿ 01.01 ಗುಂಟೆ ಕಲ್ಲು ಬಂಡೆ ಖರಾಬು ಸೇರಿದಂತೆ ಒಟ್ಟು 2.37 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ.

ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿ
ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ರಘುವನಹಳ್ಳಿ ಮತ್ತು ಬೊಮ್ಮೇನಹಳ್ಳಿ ಸ.ನಂ. 13,55ರಲ್ಲಿ 10.39 ಎಕರೆ ಸರ್ಕಾರಿ ಕೆರೆ, ಹಂಚರಹಳ್ಲಿ ಗ್ರಾಮದ ಸ.ನಂ 71, 20 ರಲ್ಲಿ 3.23 ಎಕರೆ ಗುಂಡುತೋಪು ಮತ್ತು ಕೆರೆ, ನಾಡಗೌಡಗಿಲ್ಲಹಳ್ಳಿ ಗ್ರಾಮದ ಸ.ನಂ 12 ರಲ್ಲಿ ಗುಂಡುತೋಪು 0-29 ಗು, ಗುಂಡೂರು ಗ್ರಾಮದ ಸ.ನಂ 9 ರಲ್ಲಿ ಕೆರೆ ಅಂಗಳ 0-22 ಗು, ಮಂಡೂರು ಗ್ರಾಮದ ಸ.ನಂ 151 ಸರ್ಕಾರಿ ಕೆರೆ 0-30 ಗು, ಕನ್ನಮಂಗಳ ಗ್ರಾಮದ 42 ಕುಂಟೆ 0-24 ಕುಂಟೆ 0.24 ಗು, ಕೆ.ಆರಂ ಹೋಬಳಿಯ ನಲ್ಲೂರುಹಳ್ಳಿ ಗ್ರಾಮದ ಸ.ನಂ 12,14 ರಲ್ಲಿ ಗುಂಡು ತೋಪು 0-18 ಗುಂಟೆ, ವರ್ತೂರು ಹೋಬಳಿಯ ಸೂಲಿಗುಂಟೆ ಗ್ರಾಮದ ಸ.ನಂ 52, 71 ರಲ್ಲಿ ಕೆರೆ ಗುಂಡು ತೋಪು ಸೇರಿ 3-12 ಎಕರೆ, ಸಿದ್ದಾಪುರ ಗ್ರಾಮದ ಸ.ನಂ 65 ರಲ್ಲಿ ಗುಂಡು ತೋಪು 1-01 ಎಕರೆ ಒಟ್ಟು 20.20 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ದಕ್ಷಣ ತಾಲ್ಲೂಕು ಕೆಂಗೇರಿ ಹೋಬಳಿ
ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿಯ ವರಹಾಸಂದ್ರ ಗ್ರಾಮದ ಸ.ನಂ 24 ರಲ್ಲಿ ಕರೆ 0-02 ಗು, ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದ ಸ.ನಂ 70 ರಲ್ಲಿ ಕೆರೆ 0-06.08 ಗುಂಟೆ, ತಾವರೆಕೆರೆ ಹೋಬಳಿಯ ಜೋಗೇರಹಳ್ಳಿ ಸ.ನಂ 12/1 ಹಿಡುವಳಿ ಜಮೀನಿನ ಬಿ. ಖರಾಬು, 0.06 ಮತ್ತು ಕುರುಬರಹಳ್ಳಿ ಹೋಬಳಿಯ ಸ.ನಂ 66 ರಲ್ಲಿ ಸರ್ಕಾರಿ ಕೆರೆ 0-32 ಗುಂಟೆ ಹಾಗು ಉತ್ತರಹಳ್ಳಿ ಹೋಬಳಿಯ ವಡ್ಡರಪಾಳ್ಯ ಸ.ನಂ 143, ಕೆರೆ 0-08.12 ಗುಂಟೆ ಒಟ್ಟು 1-15.04 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ.
Recommended Video

ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿ
ಆನೇಕಲ್ ತಾಲ್ಲೂಕಿನ ಕಸಬಾ ಹೋಬಳಿಯ ಆದೂರು ಗ್ರಾಮದ ಸ.ನಂ 62 ರಲ್ಲಿ ಕೆರೆ 2.20 ಎಕರೆ, ತಟ್ನಹಳ್ಳಿ ಸ.ನಂ 58 ಕೆರೆ 0-22 ಗುಂಟೆ, ಅತ್ತಿಬೆಲೆ ಹೋಬಳಿಯ ಇಗ್ಗಲೂರು ಗ್ರಾಮದ ಸ.ನಂ 63 ರಲ್ಲಿ ಕೆರೆ 0-38 ಗು, ಬಿದರಗುಪ್ಪೆ ಗ್ರಾಮದ ಸ.ನಂ 274 ರಲ್ಲಿ ಕೆರೆ 0-10.08 ಗುಂಟೆ, ಜಿಗಣಿ ಹೋಬಳಿಯ, ಕಾಡುಜಕ್ಕನಹಳ್ಳಿ ಗ್ರಾಮದ ಸನಂ. 18 ಸರ್ಕಾರಿ ಕೆರೆ 0-02 ಹೆನ್ನಾಗರ ಗ್ರಾಮದ ಸ.ನಂ 5 ರಲ್ಲಿ ಸರ್ಕಾರಿ ಗೋಮಾಳ 0-15 ಗುಂಟೆ, ಬೇಗಿಹಳ್ಳಿ ಗ್ರಾಮದ ಸ.ನಂ 52 ರಲ್ಲಿ ಸರ್ಕಾರಿ ಕೆರೆ 1-10 ಎಕರೆ, ಸರ್ಜಾಪುರು ಹೋಬಳಿಯ ವಿ.ಕಲ್ಲಿಹಳ್ಳಿ 101,133,156 ರಲ್ಲಿ ಸರ್ಕಾರಿ ಕೆರೆ 3-32.08 ಎಕರೆ, ಸಿಂಗೇನಅಗ್ರಹಾರ ಸ.ನಂ 94 ಸರ್ಕಾರಿ ಕೆರೆ 1 ಎಕರೆ, ಒಟ್ಟು 10.30 ಎಕರೆ ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ವಶಪಡಿಸಿಕೊಳ್ಳಲಾಯಿತು ಎಂದು ಜಿಲ್ಲಾಧಿಕಾರಿಗಳು ಮಂಜುನಾಥ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ತಾಲ್ಲೂಕಿನ ತಹಶೀಲ್ದಾರರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications