ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ ನೌಕರರ ಬೇಡಿಕೆ ಈಡೇರಿಸಿದ ನಿಗಮ: ಬೇಡಿಕೆಗಳೇನೇನು?

By Nayana
|
Google Oneindia Kannada News

Recommended Video

ಮೆಟ್ರೋ ನೌಕರರ ಬೇಡಿಕೆಗಳನ್ನ ಈಡೇರಿಸಿದ ಬಿ ಎಂ ಆರ್ ಸಿ ಎಲ್ | ಆ ಬೇಡಿಕಗಳೇನು? | Oneindia Kannada

ಬೆಂಗಳೂರು, ಜೂನ್‌ 28: ನಮ್ಮ ಮೆಟ್ರೋ ನೌಕರರ ಸಾಕಷ್ಟು ಬೇಡಿಕೆಗಳ ಈಡೇರಿಕೆಗೆ ಸಮ್ಮತಿ ಸೂಚಿಸಲಾಗಿದ್ದು, ಆ ಕುರಿತು ಜೂನ್‌ 22ರಂದು ಆದೇಶವನ್ನೂ ಹೊರಡಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಹೈಕೋರ್ಟ್‌ಗೆ ತಿಳಿಸಿದೆ.

ನೌಕರರ ವಿರುದ್ಧ ಎಸ್ಮಾ ಜಾರಿಗೊಳಿಸಿರುವ ಆದೇಶಕ್ಕೆ ನೀಡಿರುವ ತಡೆಯಾಜ್ಞೆ ತೆರವು ಕೋರಿ ಬಿಎಂಆರ್‌ಸಿಎಲ್‌ ಸಲ್ಲಿಸಿರುವ ಅರ್ಜಿಯ ಕುರಿತು ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್ ಅವರಿದ್ದ ಪೀಠ ವಿಚಾರಣೆ ನಡೆಸಿದೆ.

ಬೆಂಗಳೂರಿನ ಅಷ್ಟದಿಕ್ಕುಗಳಿಗೂ 4 ಹಂತದಲ್ಲಿ ನಮ್ಮ ಮೆಟ್ರೋ: ಎಚ್ಡಿಕೆಬೆಂಗಳೂರಿನ ಅಷ್ಟದಿಕ್ಕುಗಳಿಗೂ 4 ಹಂತದಲ್ಲಿ ನಮ್ಮ ಮೆಟ್ರೋ: ಎಚ್ಡಿಕೆ

ಹಿಂದಿನ ತ್ರಿಪಕ್ಷೀಯ ಸಭೆಯಲ್ಲಿ ನಡೆದಿದ್ದ ಚರ್ಚೆಯಂತೆ ಆರ್ಥಿಕ ಹೊರೆ ಬೀಳುವಂತಹ ಬಹುತೇಕ ಬೇಡಿಕೆಗಳನ್ನು ಈಡೇರಿಸಿ ಈಗಾಗಲೇ ಆದೇಶಗಳನ್ನು ಹೊರಡಿಸಲಾಗಿದೆ. ಆದರೆ ಸಿಎಸ್‌ ನಡೆಸಿದ ಸಭಾ ನಡಾವಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

Employees demands fulfilled: BMRCL before HC

ಹೈಕೋರ್ಟ್ ಈಗಾಗಲೇ ನೌಕರರ ಮುಷ್ಕರ ನಡೆಸುವಂತಿಲ್ಲ ಎಂದು ಆದೇಶ ನೀಡಿದೆ. ವೇತನ ಪರಿಷ್ಕರಣೆ, ನೌಕರರ ಸಂಘಕ್ಕೆ ಮಾನ್ಯತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೆಟ್ರೋ ನೌಕರರು ಆಗ್ರಹಿಸುತ್ತಿದ್ದಾರೆ. ನೌಕರರನ್ನು ಸಮಾಧಾನ ಮಾಡಲುಪ್ರಯತ್ನಿಸಿರುವ ನಿಗಮ ಕೆಲ ಬೇಡಿಕೆಗಳನ್ನು ಈಡೇರಿಸಿದೆ.

ವಿಭಾಗದ ಸಿಬ್ಬಂದಿಗೆ ರಾತ್ರಿ ಪಾಳಿ ಭತ್ಯೆ, ಹಾರ್ಡ್ ಡ್ಯೂಟಿ ಭತ್ಯೆ, ವಾಷಿಂಗ್ ಭತ್ಯೆ, ಸಾರಿಗೆ ಭತ್ಯೆ ನೀಡಲು ನಿಗಮ ಆದೇಶ ಹೊರಡಿಸಿದೆ. ಸರ್ಕಾರಿ ರಜಾ ದಿನಗಳಂದು ವಾರದ ರಜೆ ಇದ್ದರೆ, ಅದಕ್ಕೆ ಜನರಲ್‌ ಹಾಲಿಡೇ ಭತ್ಯೆ ನೀಡಲಾಗುತ್ತದೆ. ಮೆಟ್ರೋ ಡಿಪೊಗಳಲ್ಲಿರುವ ಕ್ಯಾಂಟೀನ್‌ಗಳಲ್ಲಿ ರಿಯಾಯಿತಿ ದರದಲ್ಲಿ ಆಹಾರ, ನೌಕರರು ರಚಿಸಿರುವ ಕನ್ನಡ ಸಂಘಕ್ಕೆ ಮಾನ್ಯತೆ ಈಡೇರಿಕೆಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ.

English summary
BMRCL has filed affidavit before high court saying that the employees demands were fulfilled and issued notification too. Earlier the corporation had sought stay for strike called by association of metro employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X