ಎಲಿವೇಟೆಡ್ ಕಾರಿಡಾರ್‌ನಿಂದ ಮರಗಳಿಗಷ್ಟೇ ಅಲ್ಲ ಬಫರ್ ವಲಯಕ್ಕೂ ಅಪಾಯ
ಬೆಂಗಳೂರು, ಮಾರ್ಚ್ 15: ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಸರ್ಕಾರ ತುದಿಗಾಲಿನಲ್ಲಿ ನಿಂತಿದೆ. ಇನ್ನೊಂದೆಡೆ ಎಲಿವೇಟೆಡ್ ಕಾರಿಡಾರ್ ಬೇಡ ಎನ್ನುವ ಕೂಗು ಮೊಳಗುತ್ತಿದೆ.
ಈ ಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಕುತೂಹಲದ ವಿಷಯವಾಗಿದ್ದರೂ ಕೂಡ ಕಾರಿಡಾರ್ ನಿರ್ಮಾಣವಾದರೆ 3 ಸಾವಿರಕ್ಕೂ ಹೆಚ್ಚು ಮರಗಳು ನಾಶವಾಗಿ 10ಕ್ಕೂ ಹೆಚ್ಚು ಕೆರೆಗಳಿಗೆ ಹಾನಿಯಾಗುವುದಂತೂ ಸತ್ಯ. ಅಷ್ಟೇ ಅಲ್ಲದೆ ಬಫರ್ ವಲಯಕ್ಕೂ ಕೂಡ ತೊಂದರೆಯಾಗಲಿದೆ.
ಮೌಲ್ಯಾಂಕನ ಪ್ರಾಧಿಕಾರ ವರದಿ ಪ್ರಕಾರ ಕಾರಿಡಾರ್ ಹಾದು ಹೋಗುವ ಮಾರ್ಗದಲ್ಲಿನ ಜಲ ತಾಣವು 1 ಮೀ.ನಿಂದ 30 ಮೀ ಬಫರ್ ವ್ಯಾಪ್ತಿಯೊಳಗೆ ಬರುತ್ತದೆ ಇದರಿಂದ ಪರಿಸರದ ಮೇಲೆ ಅಡ್ಡ ಪರಿಣಾಮ ಬೀರಲಿದೆ. ಕಾರಿಡಾರ್ ಕಾಮಗಾರಿ ವೇಳೆ, ಕೆರೆ, ರಾಜಕಾಲುವೆಯಲ್ಲಿ ತ್ಯಾಜ್ಯ ಸೃಷ್ಟಿಯಾಗುವ ಆತಂಕವೂ ಇದೆ.

ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶದ ಅನ್ವಯ ಕೆರೆಗಳ ಬಫರ್ ವಲಯದ ನಿಗದಿ ವಿಚಾರವಾಗಿ ಎನ್‌ಜಿಟಿ ನಿಗದಿ ಮಾಡಿದ್ದ 75 ಮೀ ಬಫರ್ ಮಿತಿಯನ್ನು ರದ್ದುಪಡಿಸಿದೆ. ಹೀಗಾಗಿ ಹಿಂದೆ ಜಾರಿಯಲ್ಲಿದ್ದ 30 ಮೀ ಮಿತಿಯು ಮುಂದುವರೆದಿದೆ. ಅಷ್ಟ ಮಟ್ಟಿಗೆ ಕಾರಿಡಾರ್ ಕಾಮಗಾರಿಯಿಂದ ಸಂಭವಿಸಬಹುದಾದ ಅನಾಹುತ ತಪ್ಪಿದ್ದರೂ ಕೆರೆ-ರಾಜಕಾಲಿವೆ ಮೇಲಾಗುವ ಆತಂಕ ಇನ್ನೂ ಹಸಿಯಾಗಿಯೇ ಇದೆ.












Click it and Unblock the Notifications