• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆಪ್ಟೆಂಬರ್‌ನಲ್ಲಿ ಬೆಂಗಳೂರಲ್ಲಿ ಎಲೆಕ್ಟ್ರಾನಿಕಾ ಇಂಡಿಯಾ ಮೇಳ

By Gururaj
|

ಬೆಂಗಳೂರು, ಸೆಪ್ಟೆಂಬರ್ 04 : ಎಲೆಕ್ಟ್ರಾನಿಕಾ ಇಂಡಿಯಾ ಮತ್ತು ಪ್ರೊಡೆಕ್ಟ್ರಾನಿಕಾ ಇಂಡಿಯಾದ ಮೂರು ದಿನಗಳ ಅವಳಿ ಮೇಳ ಸೆಪ್ಟೆಂಬರ್ 26 ರಿಂದ 28 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಮೇಳದಲ್ಲಿ ಬೃಹತ್ ಮಾರುಕಟ್ಟೆಯ ಅವಕಾಶಗಳು ಲಭ್ಯವಾಗಲಿವೆ.

ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮೇಳ ನಡೆಯಲಿದ್ದು, ಮೆಸ್ಸೆ ಮೆನ್ಚನ್ ಸಂಸ್ಥೆಯು ಮೇಳವನ್ನು ಆಯೋಜಿಸಿದೆ. ಈ ಮೇಳದಲ್ಲಿ ವಸ್ತು ಪ್ರದರ್ಶನಗಳು, ಸಮಾವೇಶಗಳು ಮತ್ತು ಸಿಇಒ ವೇದಿಕೆಯಂತಹ ಬೃಹತ್ ಮಾರುಕಟ್ಟೆಯ ಅವಕಾಶಗಳಿವೆ.

ವಿದ್ಯುತ್ ಉತ್ಪಾದನೆಗೆ ಬಲ ತುಂಬಿದ ಜುಲೈ ತಿಂಗಳ ಮಳೆ!

ಸೆಪ್ಟೆಂಬರ್ 26 ರಿಂದ 28ರವರೆಗೆ ನಡೆಯಲಿರುವ ಅತಿದೊಡ್ಡ ವಸ್ತು ಪ್ರದರ್ಶನವಿದಾಗಿದೆ. ಎರಡು ವರ್ಷಗಳ ಹಿಂದೆ ಏರ್ಪಡಿಸಿದ್ದ ಮೇಳಕ್ಕಿಂತ ಶೇಕಡಾ 40ರಷ್ಟು ಬೃಹತ್ ಮೇಳ ಇದಾಗಲಿದೆ. ಈ ಆವೃತ್ತಿಯಲ್ಲಿ ಐಪಿಸಿಎ ಎಕ್ಸ್‌ಪೋ ಮತ್ತು ಭಾರತದಲ್ಲಿ ಮೊಬೈಲ್ ಉತ್ಪಾದನೆಗೆ ಆದ್ಯತೆ ನೀಡುವ ಮೂರನೇ ಆವೃತ್ತಿಯ ಅಡ್ವಾಂಟೇಜ್ ಇಂಡಿಯಾ ಸಮ್ಮಿಟ್ ಅನ್ನು ಕೂಡಾ ಇದೇ ಜಾಗದಲ್ಲಿ ಆಯೋಜಿಸಲಾಗುತ್ತದೆ.

Electronica India 2018 in Bengaluru from September 2018

ಎಲೆಕ್ಟ್ರಾನಿಕ್ಸ್ ಕೈಗಾರಿಕೆ, ಎಲೆಕ್ಟ್ರಾನಿಕಾ ಇಂಡಿಯಾ ಮತ್ತು ಪ್ರೊಡೆಕ್ಟ್ರಾನಿಕಾ ಇಂಡಿಯಾದಂತಹ ಪ್ರಮುಖ ವ್ಯಾಪಾರ ಮೇಳಕ್ಕೆ ಬೆಂಗಳೂರು ಹೆಸರುವಾಸಿಯಾಗಿದ್ದು, ಭಾರತದಲ್ಲಿ ಈ ಕ್ಷೇತ್ರ ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಲಾಭಗಳಿಸಿ ಕೊಡುವ ಕ್ಷೇತ್ರವಾಗಿದೆ.

ತೋಳ ಬಂತು ತೋಳ ಅಲ್ಲ: ಪಾವಗಡಕ್ಕೆ ಸೋಲಾರ್ ಪವರ್ ಬಂದ ಯಶೋಗಾಥೆ

ಇದೇ ಜಾಗದಲ್ಲಿ ನಡೆಯುವ ಐಪಿಸಿಎ ಎಕ್ಸ್‌ಪೋ ಪ್ರಿಂಟೆಂಡ್ ಸರ್ಕ್ಯೂಟ್ ಬೋರ್ಡ್ ತಯಾರಿಕಾ ವಲಯಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಈ ಎಕ್ಸ್‌ಪೋವನ್ನು ಭಾರತೀಯ ಪ್ರಿಂಟೆಂಡ್ ಸರ್ಕ್ಯೂಟ್ ಸಂಘ (ಇಎಲ್‌ಸಿಐಎನ್‌ಎ) ಅವರು ಏರ್ಪಡಿಸಿದ್ದಾರೆ.

ಮೆಸ್ಸೆ ಮೆನ್ಚನ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೂಪಿಂದರ್ ಸಿಂಗ್ ವಿವರ ನೀಡಿದ್ದು, ' ನಮ್ಮ ವ್ಯಾಪಾರ ಮೇಳ ಸಕಾರಾತ್ಮಕ ಮಾರುಕಟ್ಟೆ ಭಾವನೆಗಳ ನಿಜವಾದ ಪ್ರತಿಫಲನವಾಗಿದೆ ಮತ್ತು ಇದು ಇದುವರೆಗಿನ ಅತಿದೊಡ್ಡ ಮೇಳವೂ ಆಗಿದೆ. ಉನ್ನತ ಮಟ್ಟದ ಪೂರಕ ಕಾರ್ಯಕ್ರಮಗಳೊಂದಿಗೆ ಸಿದ್ಧ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನದ ವ್ಯವಸ್ಥೆ ಇರುತ್ತದೆ' ಎಂದು ಹೇಳಿದ್ದಾರೆ.

ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿರುವ ಹಿನ್ನಲೆಯಲ್ಲಿ ಎಲೆಕ್ಟ್ರಾನಿಕ್ಸ್ ಕೈಗಾರಿಕೆ ಅತ್ಯಾಕರ್ಷಕ ಹಂತಕ್ಕೆ ಚಲಿಸುತ್ತಿದೆ. ಹೊಸ ಅನ್ವೇಷಣಾ ಉತ್ಪನ್ನಗಳ ಬಿಡುಗಡೆ ಮತ್ತು ಜಾಗತಿಕ ಸ್ಪರ್ಧೆಯ ಸವಾಲುಗಳಿಂದಾಗಿ ಈ ಕ್ಷೇತ್ರ ಹೆಚ್ಚು ಆಕರ್ಷಣೆಗೆ ಒಳಗಾಗಿದೆ. ಇದರಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ಅವುಗಳಿಗೆ ಪೂರಕವಾದ ಉತ್ಪನ್ನಗಳು ಇನ್ನಷ್ಟು ಪ್ರಗತಿ ಹೊಂದುವುದು ಭಾರತದ ಮಾರುಕಟ್ಟೆಯಲ್ಲಿ ಅನಿವಾರ್ಯವಾಗಿದೆ.

ತ್ಯಾಜ್ಯದಿಂದ ವಿದ್ಯುತ್ ತಯಾರಿ ಘಟಕ: ಅನಂತ ಕುಮಾರ್ ಚಾಲನೆ

ಬಿಐಇಸಿಯಲ್ಲಿ 27 ದೇಶಗಳ 500ಕ್ಕೂ ಅಧಿಕ ಕಂಪನಿಗಳ ಪ್ರತಿನಿಧಿಗಳು ಮೇಳದಲ್ಲಿ ಭಾಗವಹಿಸುವುದನ್ನು ದೃಢಿಕರಿಸಿದ್ದಾರೆ. ಅಟೋಮೋಟೊವ್ ಎಲೆಕ್ಟ್ರಾನಿಕ್ಸ್, ಮೊಬೈಲ್ ತಯಾರಿಕೆ, ಪಿಸಿಬಿ ಉತ್ಪಾದನೆಯ ತಂತ್ರಜ್ಞಾನ ಮತ್ತು ಪಿಸಿಬಿ ತಂತ್ರಜ್ಞಾನದಲ್ಲಿನ ಇತ್ತೀಚಿನ ಮಾಹಿತಿ ಬಗ್ಗೆ ಮೇಳದಲ್ಲಿ ಬೆಳಕು ಚೆಲ್ಲಲಾಗುತ್ತದೆ.

ಇಂಡಿಯಾ ಪಿಸಿಬಿ ಟೆಕ್ ಸಮಾವೇಶದ ಮೂರನೇ ಆವೃತ್ತಿಯು "ಭಾರತದಲ್ಲಿ ಪಿಸಿಬಿ ವಲಯದ ಬಲವರ್ಧನೆಗೆ ಮೌಲ್ಯವರ್ಧನೆಗೆ ಮತ್ತು ಪೂರೈಕೆ ಜಾಲ ವೃದ್ಧಿಯ ಮಹತ್ವಕ್ಕೆ ಆದ್ಯತೆ ನೀಡಲಿದೆ". ಈ ಮೇಳವನ್ನು ಇಎಲ್‌ಸಿಐಎನ್‌ಎ ಆಯೋಜಿಸುತ್ತಿದ್ದು, ಇದಕ್ಕೆ ಐಪಿಸಿಎ ಬೆಂಬಲ ನೀಡಿದೆ.

ಇನ್ನಷ್ಟು ಬೆಂಗಳೂರು ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
International trade fair for electronic components, systems and applications. The electronica India will take place on 3 days from September 26 to 28 in Bangalore International Exhibition Center (BIEC).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more