ಗೆದ್ದ ಶಾಸಕರಲ್ಲಿ ಲಿಂಗಾಯತರು ಎಷ್ಟು? ಒಕ್ಕಲಿಗರು ಎಷ್ಟು?

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು, ಕಾಂಗ್ರೆಸ್ ಪಕ್ಷ ಭರ್ಜರಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಹೊಸ ಇತಿಹಾಸ ಬರೆದಿದೆ. ಬಿಜೆಪಿ 66 ಸ್ಥಾನ, ಜೆಡಿಎಸ್ 19 ಸ್ಥಾನ ಪಡೆದರೆ ಇತರರು 4 ಸ್ಥಾನಗಳಲ್ಲಿ ಗೆಲ್ಲುವ ಮೂಲಕ 2023ರ ವಿಧಾಸಭೆ ಚುನಾವಣೆ ಮುಗಿಸಿದ್ದಾರೆ. ಹಾಗಾದರೆ ಕಾಂಗ್ರೆಸ್‌ನ 135 ಸ್ಥಾನಗಳಲ್ಲಿ ಜಾತಿವಾರು ಲೆಕ್ಕಾಚಾರ ಏನು? ಯಾವ ಯಾವ ಜಾತಿಯ ಶಾಸಕರು ಎಷ್ಟು ಜನ ಆಯ್ಕೆಯಾಗಿದ್ದಾರೆ? ಬನ್ನಿ ತಿಳಿಯೋಣ.

ಹೌದು, ಕಾಂಗ್ರೆಸ್ ಮತ್ತೊಮ್ಮೆ ಇತಿಹಾಸ ಬರೆದಿದೆ. ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಸರಿಯಾಗಿಯೇ ಬಳಸಿಕೊಂಡ ಕಾಂಗ್ರೆಸ್ ನಾಯಕರು, ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಬೆಲೆ ಏರಿಕೆ ಸೇರಿ ಹಲವು ಸಂಕಷ್ಟಗಳನ್ನ ಅಸ್ತ್ರವಾಗಿ ಪ್ರಯೋಗಿಸಿ, ಬರೋಬ್ಬರಿ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಇತಿಹಾಸವನ್ನೇ ಸೃಷ್ಟಿಸಿದೆ. ಹಾಗಾದರೆ ಹೀಗೆ ಕಾಂಗ್ರೆಸ್ ಪಕ್ಷದಿಂದ ಗೆದ್ದ 135 ಶಾಸಕರಲ್ಲಿ ಲಿಂಗಾಯತರು ಎಷ್ಟು? ಒಕ್ಕಲಿಗರು ಎಷ್ಟು? ಬೇರೆ ಬೇರೆ ಸಮುದಾಯದ ಎಷ್ಟು ಶಾಸಕರು ಆಯ್ಕೆಯಾಗಿದ್ದಾರೆ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

Election Results 2023: Congress party caste wise MLAs analysis result

39 ಲಿಂಗಾಯತ ಶಾಸಕರು ಆಯ್ಕೆ

ಅಂದಹಾಗೆ ಕಾಂಗ್ರೆಸ್‌ನ 135 ಶಾಸಕರ ಪೈಕಿ, 39 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದು, 21 ಒಕ್ಕಲಿಗ ಶಾಸಕರು ಗೆದ್ದು ಬಂದಿದ್ದಾರೆ. ಹಾಗೇ ಬ್ರಾಹ್ಮಣ ಸಮುದಾಯದ 3, ರೆಡ್ಡಿ ಸಮುದಾಯದಿಂದ ನಾಲ್ವರು, ಹಾಗೇ ಬಂಟರು 1, ಕೊಡವ 1, ಮುಸ್ಲಿಂ 9, ಕ್ರೈಸ್ತರು 1, ಜೈನ ಸಮುದಾಯದಿಂದ ಒಬ್ಬರು ಶಾಸಕರಾಗಿದ್ದಾರೆ. ಇದಿಷ್ಟೂ ಒಂದು ಲೆಕ್ಕಾಚಾರ, ಹಾಗಾದರೆ ಪರಿಶಿಷ್ಟ ಜಾತಿ & ಪಂಗಡದ ಸಮುದಾಯದಿಂದ ಎಷ್ಟು ಶಾಸಕರು ಆಯ್ಕೆಯಾಗಿದ್ದಾರೆ. ಬನ್ನಿ ಮುಂದೆ ತಿಳಿಯೋಣ.

ಪ.ಜಾತಿ ಸಮುದಾಯದಿಂದ 17 ಶಾಸಕರು

ಅಷ್ಟಕ್ಕೂ ಪರಿಶಿಷ್ಟ ಜಾತಿ ಎಡಗೈ 6, ಪರಿಶಿಷ್ಟ ಜಾತಿ ಬಲಗೈ 11, ಪರಿಶಿಷ್ಟ ಜಾತಿ ಭೋವಿ 3, ಪರಿಶಿಷ್ಟ ಜಾತಿ ಲಂಬಾಣಿ 1, ಪರಿಶಿಷ್ಟ ಜಾತಿ ಕೊರಚ 1, ಪರಿಶಿಷ್ಟ ಪಂಗಡ 15, ಕುರುಬರು 8, ಬಲಿಜ 1, ಬೆಸ್ತ 1, ಬಿಲ್ಲವ 2, ಈಡಿಗ 3, ಮರಾಠ 2, ರಜಪೂತ 1 ಉಪ್ಪಾರ ಸಮುದಾಯದಿಂದ ಒಬ್ಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಒಟ್ಟು 135 ಸ್ಥಾನ ಗೆದ್ದಿದೆ ಕಾಂಗ್ರೆಸ್. ಅದ್ರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಕೈಹಿಡಿದು ಮತ ಹಾಕಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ.

Election Results 2023: Congress party caste wise MLAs analysis result

ಒಟ್ನಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ ಸರ್ಕಾರ ರಚನೆಗೂ ಕಸರತ್ತು ಆರಂಭವಾಗಿದೆ. ಆದ್ರೆ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ? ಅನ್ನೋ ಬಿಲಿಯನ್ ಡಾಲರ್ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಾಗಿಯೇ ಕಾಂಗ್ರೆಸ್ ಹೈಕಮಾಂಡ್ ಸಿಎಂ ಅಭ್ಯರ್ಥಿ ಆಯ್ಕೆಗಾಗಿ ಕಸರತ್ತು ಆರಂಭಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಪಟ್ಟಕ್ಕಾಗಿ ರೇಸ್ ಶುರುವಾಗಿದೆ ಎನ್ನಲಾಗುತ್ತಿದ್ದು, ಯಾರಿಗೆ ಮುಖ್ಯಮಂತ್ರಿ ಪಟ್ಟ ಒಲಿಯಲಿದೆ ಎಂಬುದನ್ನ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+