ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತಮ ನಾಯಕನ ಆಯ್ಕೆ ಮತದಾರನ ಹೊಣೆ: ತೇಜಸ್ವಿ ಸೂರ್ಯ

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಏಪ್ರಿಲ್ 13: ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆ ಕರ್ತವ್ಯ ಅತ್ಯಮೂಲ್ಯವಾದುದು, ದೇಶದ ಭವಿಷ್ಯಕ್ಕಾಗಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ಪ್ರತಿ ನಾಗರಿಕನ ಮೇಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದರು.

ವಿಜಯ ಸಂಕಲ್ಪ ಸಮಾವೇಶಕ್ಕಾಗಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನಲೆಯಲ್ಲಿ ಬೆಳಗ್ಗೆಯಿಂದಲೇ ಸತತವಾಗಿ ಭಾಗವಹಿಸಿದ್ದ ಕಾರ್ಯಕ್ರಮಗಳ ನಡುವೆಯೇ ತೇಜಸ್ವಿ ಸೂರ್ಯ ಭಾರತ ವಿದ್ಯಾ ಸಂಸ್ಥೆಯ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೈಕೋರ್ಟ್ ನಲ್ಲಿ ತೇಜಸ್ವಿಗೆ ಮುಖಭಂಗ, ಬರೋಬ್ಬರಿ ಆಯ್ತು ಎಂದ ಸಿದ್ದು!ಹೈಕೋರ್ಟ್ ನಲ್ಲಿ ತೇಜಸ್ವಿಗೆ ಮುಖಭಂಗ, ಬರೋಬ್ಬರಿ ಆಯ್ತು ಎಂದ ಸಿದ್ದು!

ಈ ವೇಳೆ ವಿದ್ಯಾರ್ಥಿಗಳಿಗೆ ನೀವು ವೋಟ್ ಮಾಡಿ ಬೇರೆಯವರಿಂದಲೂ ವೋಟ್ ಮಾಡಿಸಿ ಎಂದು ಕರೆ ನೀಡಿ ಚುನಾವಣೆಯ ಮಹತ್ವವನ್ನು ತಿಳಿ ಹೇಳಿದರು. ದೇಶದ ಪ್ರಗತಿಯನ್ನು ಮೋದಿಯವರು ಮಾಡಿದ್ದಾರೆ ಅದನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಹೇಳಿದರು. ನಮ್ಮ ನಗರದ ಅಭಿವೃದ್ಧಿ ಯುವಕರ ಮೇಲಿದ್ದು, ಯುವಕರು ರಾಜಕೀಯ ವ್ಯವಸ್ಥೆಯಿಂದ ದೂರ ಉಳಿಯಬೇಡಿ ಎಂದು ಸಲಹೆ ನೀಡಿದರು.

 Electing a able person is the responsibility of the voters: Tejasvi Surya

ದೇಶವನ್ನು ಹೇಗೆ ಮುನ್ನಡಿಸಬೇಕು ಎಂಬುದು ಮೋದಿಯವರು ಕಳೆದ ಐದು ವರ್ಷಗಳಲ್ಲಿ ತೋರಿಸಿದ್ದಾರೆ, ಇಂದಿನ ದಿನಕ್ಕಿಂತ ನಾಳೆ ಹೇಗೆ ಉತ್ತಮವಾಗಿ ಬದುಕಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬೆಂಗಳೂರು ನಗರದ ಬಗೆಗೆ ಮಾತನಾಡುತ್ತ, ಕೆಂಪೇಗೌಡರು ನಾನೂರು ವರ್ಷಗಳ ಹಿಂದೆಯೇ ನಗರಕ್ಕೆ ಬುನಾದಿ ಹಾಕಿದ್ದರು, ಅವರಿಗೆ ಈ ನಗರದ ಬಗೆಗೆ ದೂರದೃಷ್ಟಿ ಇತ್ತು, ಇನ್ನು ಮುಂದಿನ ನೂರು ವರ್ಷಗಳಿಗಾಗಿ ಇಂದು ಯೋಜನೆಯನ್ನು ರೂಪಿಸಿಕೊಳ್ಳಬೇಕಿದೆ ಎಂದರು.

ಚುನಾವಣಾ ಅಕ್ರಮ, ತೇಜಸ್ವಿ ಸೂರ್ಯ ವಿರುದ್ಧ ವಕೀಲರಿಂದ ದೂರುಚುನಾವಣಾ ಅಕ್ರಮ, ತೇಜಸ್ವಿ ಸೂರ್ಯ ವಿರುದ್ಧ ವಕೀಲರಿಂದ ದೂರು

ರಾಷ್ಟ್ರಮಟ್ಟದಲ್ಲಿ ನಿತಿ ಆಯೋಗ್ ಇರುವಂತೆ ಬೆಂಗಳೂರು ನಗರಕ್ಕಾಗಿ ಕೆಂಪೇಗೌಡ ಇನ್ ಸ್ಟಿಟೂಟ್ ಅಫ್ ಅರ್ಬನ್ ಪ್ಲಾನಿಂಗ್ ಸಂಸ್ಥೆಯನ್ನು ರೂಪಿಸಬೇಕಿದೆ. ಇದರ ವೇದಿಕೆಯಾಗಿ ನಗರದ ಮೂಲಭೂತ ಸಮಸ್ಯೆಗಳಾದ ನೀರು, ಒಳಚರಂಡಿ, ಟ್ರಾಫಿಕ್ ಸಮಸ್ಯೆಗಳ ಬಗೆಗೆ ಶಾಸ್ವತ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ವಿಧಾನಸಭಾ ಸದಸ್ಯ ಅ. ದೇವೆಗೌಡ, ಬಿಜೆಪಿ ಬೆಂಗಳೂರು ಘಟಕದ ಅಧ್ಯಕ್ಷ್ಯ ಸದಾಶಿವ, ಬಿ.ಎನ್ ಪ್ರಹ್ಲಾದ ಬಾಬು, ಬಿಜೆಪಿ ಮುಖಂಡ ರಾಮಮೂರ್ತಿ, ಕೆಂಪೇಗೌಡ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಂತರ ಎನ್.ಆರ್.ಕಾಲೋನಿಯ ರಾಮಮಂದಿರದಲ್ಲಿ ಶ್ರೀ ರಾಮೋತ್ಸವದಲ್ಲಿ ಪಾಲ್ಗೊಂಡಿದ್ದರು.

English summary
Lok Sabha elections 2019: Electing a able person is the responsibility of the voters says, Bangalore(Bengaluru) South Lok Sabha constituency BJP candidate Tejasvi Surya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X