• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ವೃದ್ಧ ದಂಪತಿ ಹತ್ಯೆ, ಮಗ ನಾಪತ್ತೆ

|

ಬೆಂಗಳೂರು, ಜೂನ್ 10: ನಗರದಲ್ಲಿ ವೃದ್ಧ ದಂಪತಿಯ ಕೊಲೆ ನಡೆದಿದ್ದು, ಪುತ್ರ ನಾಪತ್ತೆಯಾಗಿರುವ ಘಟನೆ ನಡೆದಿದೆ.

   ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಮಾರಾಟವಾದ ಬಿಸ್ಕತ್| Parle G biscuit register Highest sale in Lockdown

   ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿನಗರದ ಮಹದೇಶ್ವರ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ. ದುಷ್ಕರ್ಮಿಗಳು ವೃದ್ಧ ದಂಪತಿ ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ನರಸಿಂಹರಾಜು(70), ಸರಸ್ವತಿ(60) ಹತ್ಯೆಯಾದವರು.

   ಟೆಕ್ಕಿ ಕೊಲೆ ಪ್ರಕರಣ ಭೇದಿಸುವಾಗ ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ

   ಮಂಗಳವಾರ ರಾತ್ರಿ ಘಟನೆ ಸಂಭವಿಸಿದ್ದು, ವೃದ್ಧ ದಂಪತಿ ಪುತ್ರ ಸಂತೋಷ್ ಕಾಣೆಯಾಗಿದ್ದಾನೆ. ತಂದೆ-ತಾಯಿ ಜೊತೆಗೆ ಕಾಮಾಕ್ಷಿಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಸಂತೋಷ್ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದ, ಅಲ್ಲಿಯೇ ಸ್ವಂತ ಕಚೇರಿಯನ್ನು ಕೂಡ ಹೊಂದಿದ್ದ, ಪತ್ನಿ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಪತ್ನಿಯನ್ನು ಊರಿಗೆ ಕಳುಹಿಸಿದ್ದ.

   ವೃದ್ಧ ದಂಪತಿ ಮೂಲತಃ ಮೈಸೂರಿನವರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಕಾವೇರಿಪುರದ ನಿವಾಸದಲ್ಲಿ ವಾಸವಿದ್ದಾರೆ. ಮೃತ ನರಸಿಂಹರಾಜು ಮದುವೆ ಬ್ರೋಕರ್ ಆಗಿದ್ದರು, ಕಳೆದ ಹತ್ತು ವರ್ಷಗಳಿಂದ ಮನೆಯಲ್ಲಿಯೇ ಇದ್ದರು, ತಾಯಿ ಟೀಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಅವರು ಕೂಡ 5 ವರ್ಷಗಳಿಂದ ಮನೆಯಲ್ಲಿಯೇ ಇದ್ದರು.

   ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ಮನೆಕೆಲಸದಾಕೆ ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಒಳಗೆ ಬಂದು ನೋಡಿದಾಗ ಹಾಲ್‌ನಲ್ಲಿ ನರಸಿಂಹರಾಜು ಅವರ ದೇಹ ಬಿದ್ದಿತ್ತು. ಬಳಿಕ ರೂಂನಲ್ಲಿ ಸರಸ್ವತಿ ಅವರ ಮೃತದೇಹವಿತ್ತು. ತಕ್ಷಣ ಪೊಲೀಸರಿಗೆ ಆಕೆ ವಿಷಯ ತಿಳಿಸಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

   English summary
   An Elderly couple was found murdered inside their House near Kamakshipalya Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X