ಬೆಂಗಳೂರು: ನಿಯಮ ಉಲ್ಲಂಘಿಸಿದ ಅಪಾರ್ಟ್‌ಮೆಂಟ್‌ಗಳಿಗೆ ನೋಟಿಸ್

ಬೆಂಗಳೂರು ಜೂನ್ 5: ಉತ್ತರ ಬೆಂಗಳೂರಿನ ಜಕ್ಕೂರು ಏರೋಡ್ರೋಮ್ ಸುತ್ತಮುತ್ತಲಿನ 8 ಐಷಾರಾಮಿ ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಒಟ್ಟು 11 ಕಟ್ಟಡಗಳು ಎತ್ತರದ ನಿರ್ಬಂಧಗಳನ್ನು ಉಲ್ಲಂಘಿಸಿವೆ. ಈ ಪೈಕಿ ಕನಿಷ್ಠ 5 ಅಪಾರ್ಟ್‌ಮೆಂಟ್‌ಗಳಿಗೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಟಿಸ್ ನೀಡಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿರ್ದಿಷ್ಟಪಡಿಸಿರುವ 45 ಮೀಟರ್‌ಗಳಿಗೂ ಮೀರಿ ಎತ್ತರಕ್ಕೆ ಹೇಗೆ ಕಟ್ಟಡ ನಿರ್ಮಿಸಿಸಲಾಗಿದೆ ಎಂಬುದನ್ನು ವಿವರಿಸಿ ಉತ್ತರ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಏರೋಡ್ರೋಮ್‌ನ 5 ಕಿ.ಮೀ ವ್ಯಾಪ್ತಿಯೊಳಗೆ ಇರುವ ಕಟ್ಟಡಗಳಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ದ ಮಾನದಂಡಗಳು ಅನ್ವಯಿಸುತ್ತವೆ.

"ನಾವು 5 ಕಿ.ಮೀ ವ್ಯಾಪ್ತಿಯಲ್ಲಿರುವ ಕಟ್ಟಡಗಳನ್ನು ಪರಿಶೀಲಿಸಿದ್ದೇವೆ. ನಿಗದಿತ ಮಿತಿಯ ಎತ್ತರದಲ್ಲಿ ಇದೇಯೇ ಎಂಬುದನ್ನು ತಿಳಿಯಲು ಕಟ್ಟಡಗಳ ಎತ್ತರವನ್ನು ಅಳೆಯಲಾಯಿತು. ಜತೆಗೆ ಅನುಮೋದಿತ ಕಟ್ಟಡ ಪ್ಲ್ಯಾನ್ ಪ್ರಕಾರ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗಿದೆಯೇ ಹಾಗೂ ನಿರಾಕ್ಷೇಪಣಾ ಪತ್ರವನ್ನು(ಎನ್ಒಸಿ) ಪಡೆಯಲಾಗಿದೆಯೇ ಎಂಬುದನ್ನು ಪರಿಶೀಲಿಸಿದ್ದೇವೆ,'' ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.

8 ಅಪಾರ್ಟ್‌ಮೆಂಟ್‌ಗಳಿಂದ ಉಲ್ಲಂಘನೆ

8 ಅಪಾರ್ಟ್‌ಮೆಂಟ್‌ಗಳಿಂದ ಉಲ್ಲಂಘನೆ

ನಿಯಮ ಉಲ್ಲಂಘಿಸಿರುವ 11 ಕಟ್ಟಡಗಳ ಪೈಕಿ, ಎಂಟು ಕಟ್ಟಡಗಳು ಐಷಾರಾಮಿ ಅಪಾರ್ಟ್‌ಮೆಂಟ್ ಗಳಾಗಿವೆ. ಉಳಿದ ಮೂರು ಕಟ್ಟಡಗಳ ಪೈಕಿ ಒಂದು ನೀರಿನ ಟ್ಯಾಂಕರ್ ಮತ್ತು ಎರಡು ಸೆಲ್ ಫೋನ್ ಟವರ್ ಗಳು ಸೇರಿವೆ ಎಂದು ಮಾಹಿತಿ ನೀಡಿದರು.

ಐದು ಕಿ.ಮೀ ವ್ಯಾಪ್ತಿಯ ಕಟ್ಟಡಗಳ ಪರಿಶೀಲನೆ

ಐದು ಕಿ.ಮೀ ವ್ಯಾಪ್ತಿಯ ಕಟ್ಟಡಗಳ ಪರಿಶೀಲನೆ

ಈ ರೀತಿಯ ಕಟ್ಟಡಗಳಿಗೆ ಎನ್ಒಸಿ ಮತ್ತು ಆಕ್ಯುಪೆನ್ಸಿ ಪ್ರಮಾಣಪತ್ರ ಹೇಗೆ ನೀಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯನ್ನು ಪ್ರಶ್ನಿಸಿದಾಗ ಅವರು, "ಅನುಮತಿ ಪಡೆದ ನಂತರ ಹೆಚ್ಚವರಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ತಾತ್ಕಾಲಿಕವಾಗಿ ನಿರ್ಮಿಸುವ ಕಟ್ಟಡಗಳನ್ನು ನಿಯಮಗಳ ಅನುಸಾರ ಅಷ್ಟು ಭಾಗವನ್ನು ತೆಗೆದುಹಾಕಲು ಆದೇಶಿಸಲಾಗುವುದು. ಉಳಿದಂತೆ ಪ್ರಮುಖವಾಗಿ ಉಲ್ಲಂಘಿಸಿರುವ ಕಟ್ಟಡಗಳನ್ನು ಸಂಪೂರ್ಣವಾಗಿ ಉರುಳಿಸಲು ಆದೇಶಿಸಲಾಗುವುದು,'' ಎಂದು ತಿಳಿಸಿದರು.

ಕಟ್ಟಡವು 45 ಮೀಟರ್ ಗಿಂತ ಎತ್ತರವಿರಬಾರದು

ಕಟ್ಟಡವು 45 ಮೀಟರ್ ಗಿಂತ ಎತ್ತರವಿರಬಾರದು

ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ದ ಮಾನದಂಡಗಳ ಪ್ರಕಾರ, ಐದು ಕಿ.ಮೀ ವ್ಯಾಪ್ತಿಯಲ್ಲಿರುವ ಯಾವುದೇ ಕಟ್ಟಡವು 45 ಮೀಟರ್ ಗಿಂತ ಎತ್ತರವಿರಬಾರದು. ಜತೆಗೆ ಯಾವುದೇ ಕಟ್ಟಡವು 14 ಮಹಡಿಗಳಿಗಿಂತ ಹೆಚ್ಚು ಮಹಡಿಗಳನ್ನು ಹೊಂದಿರಬಾರದು. ದೊಡ್ಡ ಅಪಾರ್ಟ್ ಮೆಂಟ್ ಗಳಲ್ಲಿ ಮಹಡಿಗಳ ನಡುವಿನ ಎತ್ತರ ಹೆಚ್ಚು ಇರುತ್ತದೆ. ಹಾಗಾಗಿ ಮಹಡಿಗಳ ಸಂಖ್ಯೆ ಕಡಿಮೆ ಇರಬೇಕಾಗುತ್ತದೆ. ಆದಾಗ್ಯೂ, ಬಿಬಿಎಂಪಿ ಗುರುತಿಸಿರುವ ಬಹುತೇಕ ಎಲ್ಲಾ ಅಪಾರ್ಟ್ ಮೆಂಟ್ ಗಳು 15 ಕ್ಕೂ ಹೆಚ್ಚು ಮಹಡಿಗಳನ್ನು ಹೊಂದಿವೆ. ಅಲ್ಲದೇ ಕೆಲವು ಅಪಾರ್ಟ್ ಮೆಂಟ್ ಗಳು 20ಕ್ಕೂ ಹೆಚ್ಚು ಮಹಡಿಗಳನ್ನು ಹೊಂದಿವೆ. ಈ ಅಪಾರ್ಟ್ ಮೆಂಟ್ ಗಳಲ್ಲಿ ಸಾವಿರಾರು ಮಂದಿ ಮನೆ ಖರೀದಿಸಿದ್ದಾರೆ.

ಸಮೀಕ್ಷೆ ನಡೆಸುವಂತೆ ಸಚಿವರ ನಿರ್ದೇಶನ

ಸಮೀಕ್ಷೆ ನಡೆಸುವಂತೆ ಸಚಿವರ ನಿರ್ದೇಶನ

"ನಾವು ಎನ್ಒಸಿ ಉಲ್ಲಂಘನೆ ಮತ್ತು ಡಿಜಿಸಿಎ ನಿಬಂಧನೆಗಳ ಉಲ್ಲಂಘನೆ ಕುರಿತು ವಿವರಣೆ ಕೋರಿ ಅಪಾರ್ಟ್ ಮೆಂಟ್ ಮತ್ತು ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ. ಎತ್ತರವನ್ನು ಕಡಿಮೆ ಮಾಡಲು ಸಾಧ್ಯವಿರುವ ಕಡೆಗಳಲ್ಲಿ ಹಾಗೇ ಮಾಡುವಂತೆ ಸೂಚಿಸಲಾಗುವುದು,'' ಎಂದು ಹಿರಿಯ ಬಿಬಿಎಂಪಿ ಅಧಿಕಾರಿ ತಿಳಿದಿದ್ದಾರೆ.

ಜಕ್ಕೂರು ಏರೋಡ್ರೋಮ್ ವ್ಯಾಪ್ತಿಯ ಕಟ್ಟಡಗಳನ್ನು ಸಮೀಕ್ಷೆ ನಡೆಸುವಂತೆ 2021ರ ಜೂನ್ ನಲ್ಲಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ. ಸಿ. ನಾರಾಯಣ ಗೌಡ ನಿರ್ದೇಶಿಸಿದ್ದರು. ಅಲ್ಲದೇ ನಿಯಮ ಉಲ್ಲಂಘಿಸಿರುವ ಕಟ್ಟಡಗಳನ್ನು ಉರುಳಿಸುವಂತೆ ಸೂಚನೆ ನೀಡಿದ್ದರು. ಸಚಿವರ ನಿರ್ದೇಶನದ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ಕಟ್ಟಡಗಳ ಸಮೀಕ್ಷೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+