ರಾಜಧಾನಿ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!

ಬೆಂಗಳೂರು: ಈಗ ತಾನೆ ರಿಸಲ್ಟ್ ಬಂತು, ಮುಂದೆ ಏನ್ ಓದೋದು ಅಂತಾ ಟೆನ್ಷನ್ ತಗೋಂಡಿದ್ದೀರಾ? ಹಾಗಾದ್ರೆ ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಇಲ್ಲಿದೆ. ಬೆಂಗಳೂರಿನ ನಿವಾಸಿಗಳಿಗೆ ಇದು ಬೆಸ್ಟ್ ಆಫರ್. ಉಜ್ವಲ ಭವಿಷ್ಯಕ್ಕೆ ಮುಂದೆ ಏನ್ ಓದಬೇಕು? ಯಾವ ಕೋರ್ಸ್ ಸೇರಿದ್ರೆ ಒಳ್ಳೆಯದು ಅಂತಾ ಕನ್ಫ್ಯೂಸ್ ಆಗಿದ್ದೀರಾ? ಹಾಗಾದ್ರೆ ಇಲ್ಲಿ ತಿಳಿಯಿರಿ.

ಅಂದಹಾಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ & ಪದವಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಮುಂದೆ ಯಾವ ಕೋರ್ಸ್ ಸೇರಬೇಕು ಅನ್ನೋ ಗೊಂದಲ ಇದ್ದೇ ಇರುತ್ತದೆ. ಈ ಎಲ್ಲಾ ಗೊಂದಲ ಬಗೆಹರಿಸುವ ಉದ್ದೇಶದಿಂದ ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರೋ ವಿದ್ಯಾಪೀಠ 6ನೇ ಆವೃತ್ತಿ ಕಾರ್ಯಕ್ರಮ ನಾಳೆಯಿಂದ ಶುರುವಾಗಲಿದೆ. ಈ ಎಜುಕೇಷನ್ ಎಕ್ಸ್‌ಪೋ ಮೂಲಕ ಎಲ್ಲಾ ರೀತಿಯ ಗೊಂದಲಕ್ಕೆ ತೆರೆ ಎಳೆಯಲು ವಿದ್ಯಾರ್ಥಿಗಳಿಗೆ ಸುಲಭವಾಗಲಿದೆ. ಹಾಗಾದ್ರೆ ಈ ಎಜುಕೇಷನ್ ಎಕ್ಸ್‌ಪೋ ನಡೆಯೋದು ಎಲ್ಲಿ? ತಿಳಿಯೋಣ ಬನ್ನಿ.

Education expo opportunity

ಬೆಂಗಳೂರಿನ ಅರಮನೆ ಮೈದಾನ ಸಜ್ಜು!

ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರೋ ವಿದ್ಯಾಪೀಠ 6ನೇ ಆವೃತ್ತಿಯ ಎಜುಕೇಷನ್ ಎಕ್ಸ್‌ಪೋ ಜೂನ್‌ 3 ಮತ್ತು 4ರಂದು ಅಂದರೆ ಇದೇ ಶನಿವಾರ ಮತ್ತು ಭಾನುವಾರ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ. ಇದಕ್ಕಾಗಿ ಬೃಹತ್ ವೇದಿಕೆ ಕೂಡ ಸಿದ್ಧವಾಗಿದೆ. ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ ಸಜ್ಜಾಗಿದ್ದು, ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸದ ಬಗ್ಗೆ ಇರುವ ಗೊಂದಲಗಳಗೆ ಈ ವೇದಿಕೆ ಉತ್ತರ ನೀಡಲಿದೆ.

100ಕ್ಕೂ ಹೆಚ್ಚು ವಿದ್ಯಾಸಂಸ್ಥೆ ಒಂದೇ ಕಡೆ!

ಅಂದಹಾಗೆ ವಿದ್ಯಾಪೀಠ 6ನೇ ಆವೃತ್ತಿಯ ಮತ್ತೊಂದು ವಿಶೇಷತೆ ಏನು ಅಂದ್ರೆ, ಒಂದೇ ಸೂರಿನಡಿ 100 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿಯಾಗಲಿದ್ದು, ಕಾರ್ಯಕ್ರಮದ ಸಿದ್ಧತೆ ಹೇಗಿದೆ? ಎರಡು ದಿನದ ವಿದ್ಯಾಪೀಠದ ವಿಶೇಷತೆಗಳು ಏನು? (Vidyapeeta Education Expo) ಯಾವ ರೀತಿಯಲ್ಲಿ ವಿದ್ಯಾಪೀಠ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅನುಕೂಲಕರವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಹಾಗೇ ಉಡುಗೊರೆ ಕೂಡ ಈ ಎಕ್ಸ್‌ಪೋದಲ್ಲಿ ಸಿಗಲಿದೆ.

ಭೇಟಿ ನೀಡಬೇಕಾದ ಸಮಯ ಏನು?

ಜೂನ್‌ 3 ಮತ್ತು 4ರಂದು ಬೆಂಗಳೂರು ಅರಮನೆ ಮೈದಾನದ ಗೇಟ್‌ ನಂಬರ್‌ 4ರ ಗಾಯತ್ರಿ ವಿಹಾರದಲ್ಲಿ ಬೆಳಗ್ಗೆ 10ರಿಂದ ಸಂಜೆ 7ರವರೆಗೂ ವಿದ್ಯಾಪೀಠ ಶೈಕ್ಷಣಿಕ ಮೇಳ ನಡೆಯಲಿದೆ. ಇದು ವಿದ್ಯಾಪೀಠದ 6ನೇ ಆವೃತ್ತಿ ಅನ್ನೋದು ಮತ್ತೊಂದು ವಿಶೇಷ. ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೆ ಶೈಕ್ಷಣಿಕ ಮೇಳ ನಡೆಯಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ. ಶೈಕ್ಷಣಿಕ ಮೇಳದಲ್ಲಿ ರಾಜ್ಯದ ನಾನಾ ಭಾಗಗಳ 100ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ.

ಪಿಯುಸಿ ವಿದ್ಯಾರ್ಥಿಗಳಿಗೆ ಸ್ಪೆಷಲ್ ಗಿಫ್ಟ್!

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ & ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ & ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಅವಕಾಶವೂ ಇದೆ. ಹಾಗೇ ಮತ್ತೊಂದು ವಿಶೇಷತೆ ಏನು ಅಂದ್ರೆ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದವರಿಗೆ ಸ್ಪೆಷಲ್ ಗಿಫ್ಟ್ ಕೂಡ ಇದ್ದು ಆ ಬಗ್ಗೆ ತಿಳಿಯಲು ಮುಂದೆ ಓದಿ.

Education expo opportunity

ಸ್ಥಳದಲ್ಲೇ ಸಿಗಲಿದೆ ಉಡುಗೊರೆ!

2023ರಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದರೆ ನಿಮ್ಮ ಅಂಕಪಟ್ಟಿ ಅಥವಾ ನಕಲು ಪ್ರತಿ (Xerox) ತೋರಿಸಿ ನೀವು ಗಿಫ್ಟ್‌ ಪಡೆದುಕೊಳ್ಳಬಹುದು. ಆದರೆ, ನೀವು ಪಡೆದ ಅಂಕ ಶೇ.60 ಅಥವಾ ಅದಕ್ಕಿಂತ ಮೇಲಿರಬೇಕು. ಸೆಕೆಂಡ್‌ ಪಿಯುಸಿಯಲ್ಲಿ 60-80% ಪಡೆದವರು, 80-95%, 95-100% ಪಡೆದವರು ಎಂದು ಗುರುತಿಸಿ ನಿಮ್ಮ ಅಂಕಗಳ ಆಧಾರದಲ್ಲಿ On Spot ಗಿಫ್ಟ್‌ ನೀಡಲಾಗುವುದು.

ಒಟ್ನಲ್ಲಿ ಶೈಕ್ಷಣಿಕ ಮೇಳಕ್ಕೆ ಬರುವ ಪ್ರತಿಯೊಬ್ಬರೂ ನಗರದ ಅರಮನೆ ಮೈದಾನದ ಗೇಟ್‌ ಬಳಿ ನೋಂದಣಿ ಕೇಂದ್ರ ದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಗಂಟೆಗೊಮ್ಮೆ ನಡೆಯುವ ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಗುವುದು. ಶೈಕ್ಷಣಿಕ ಮೇಳ ನಡೆಯುವ ಅರಮನೆ ಮೈದಾನ ಗಾಯತ್ರಿ ವಿಹಾರದ ಆವರಣದಲ್ಲಿಯೇ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಈ ಎಜುಕೇಷನ್ ಎಕ್ಸ್‌ಪೋದ ಲಾಭ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+