ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ ಟ್ವೀಟ್ ಮೂಲಕ ಭಾಸ್ಕರಾವ್ ಮನವಿ

|
Google Oneindia Kannada News

ಬೆಂಗಳೂರು, ಜೂನ್ 24 : ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರಾವ್ ಬೆಂಗಳೂರಿಗರಿಗೆ ಟ್ವೀಟ್ ಮೂಲಕ ಮನವಿಯೊಂದನ್ನು ಮಾಡಿದ್ದಾರೆ.

ಬುಧವಾರ ಒಂದೇ ದಿನ ನಗರದಲ್ಲಿ 173 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1678ಕ್ಕೆ ಏರಿಕೆಯಾಗಿದೆ.

ಬೆಂಗಳೂರು; ಪೊಲೀಸರಿಗಾಗಿ 2 ಕೋವಿಡ್ ಆಸ್ಪತ್ರೆ ಮೀಸಲು ಬೆಂಗಳೂರು; ಪೊಲೀಸರಿಗಾಗಿ 2 ಕೋವಿಡ್ ಆಸ್ಪತ್ರೆ ಮೀಸಲು

ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಬುಧವಾರ ರಾತ್ರಿ ಟ್ವೀಟ್ ಮಾಡಿದ್ದು, "ಪ್ರತಿಯೊಬ್ಬ ಬೆಂಗಳೂರಿಗರು ಕೊರೊನಾ ವಾರಿಯರ್ಸ್‌ ಆಗಬೇಕಿದೆ" ಎಂದು ಕರೆ ನೀಡಿದ್ದಾರೆ. ಭಾಸ್ಕರರಾವ್ ತಮ್ಮ ಟ್ವೀಟ್‌ನಲ್ಲಿ ಮೂರು ಅಂಶಗಳನ್ನು ಉಲ್ಲೇಖಿಸಿದ್ದಾರೆ.

ಬೆಂಗಳೂರು; ಕೊರೊನಾ ಸೋಂಕಿತರಿಗಾಗಿಯೇ 50 ಅಂಬ್ಯುಲೆನ್ಸ್ ಮೀಸಲು ಬೆಂಗಳೂರು; ಕೊರೊನಾ ಸೋಂಕಿತರಿಗಾಗಿಯೇ 50 ಅಂಬ್ಯುಲೆನ್ಸ್ ಮೀಸಲು

Each Bangalurean To Become Corona Warrior

* ಶೇ 100ರಷ್ಟು ಮಾಸ್ಕ್ ಧರಿಸುವುದು
* ಸ್ಯಾನಿಟೈಸರ್ ಬಳಕೆ ಮಾಡುವುದು
* ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡುವುದು

ರಾಜ್ಯದಲ್ಲಿಂದು 322 ಕೊರೊನಾ ಕೇಸ್ ಪತ್ತೆ, ಬೆಂಗಳೂರು ಟಾಪ್ರಾಜ್ಯದಲ್ಲಿಂದು 322 ಕೊರೊನಾ ಕೇಸ್ ಪತ್ತೆ, ಬೆಂಗಳೂರು ಟಾಪ್

ಕಳೆದ ಎರಡು ವಾರಗಳಿಂದ ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿದೆ. ಹೆಚ್ಚು ಕಡಿಮೆ ಪ್ರತಿದಿನ ಹೊಸ ಪ್ರಕರಣಗಳ ಸಂಖ್ಯೆ 100ರ ಗಡಿಯನ್ನು ದಾಟುತ್ತಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ನಗರದಲ್ಲಿ ಹೆಚ್ಚು ಪ್ರಕರಣಗಳು ಇರುವ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ ಇದುವರೆಗೂ 475 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ನಗರದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1678. ಇವುಗಳಲ್ಲಿ ಸಕ್ರಿಯ ಪ್ರಕರಣಗಳು 1124.

English summary
After Coronavirus cases rising in the city Bhaskar Rao commissioner of Bengaluru city police tweeted that each Bangalurean to become Corona warrior.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X