ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಇ-ತ್ಯಾಜ್ಯ ಸಂಗ್ರಹ ಅಭಿಯಾನ

|
Google Oneindia Kannada News

ಬೆಂಗಳೂರು, ಡಿ. 29: ವಿದ್ಯಾರ್ಥಿಗಳಲ್ಲಿ ಮರುಬಳಕೆ ಹಾಗೂ ಮಿತಬಳಕೆಯ ಅರಿವನ್ನು ಮೂಡಿಸಲು ಬೆಂಗಳೂರಿನ ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆಯು ಇ-ತ್ಯಾಜ್ಯ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿತ್ತು.

ಈ ಅಭಿಯಾನದಲ್ಲಿ ದುರಸ್ತಿಯಾಗದ ಎಲೆಕ್ಟ್ರಾನಿಕ್‌ ಹಾಗೂ ಎಲೆಕ್ಟ್ರಿಕಲ್‌ ವಸ್ತುಗಳನ್ನು ಸಂಗ್ರಹಿಸಿದ ವಿದ್ಯಾರ್ಥಿಗಗಳು ಮರುಬಳಕೆ ಸಂಸ್ಥೆಯಾದ ಇ- ಪರಿಸರಕ್ಕೆ (E-Environment) ಹಸ್ತಾಂತರಿಸಿದ್ದಾರೆ. ಇ-ತ್ಯಾಜ್ಯ ಉತ್ಪನ್ನಗಳ ವಿಂಗಡಣೆ ಹಾಗೂ ಮರುಬಳಕೆಯ ಮಹತ್ವದ ಬಗ್ಗೆ ಇ- ಪರಿಸರ ಸಂಸ್ಥೆಯ ಪ್ರತಿನಿಧಿ ಪೂರ್ಣಿಮಾ ಅವರು ಜಾಲಹಳ್ಳಿ ಶಾಖೆಯ ಮಕ್ಕಳಿಗೆ ಅರಿವಿನ ಉಪನ್ಯಾಸ ನೀಡಿದ್ದಾರೆ.

New Year 2023: ಹೊಸ ವರ್ಷದಂದು ಕುಡಿದು ಟೈಟ್ ಆದವರಿಗೆ ಪೊಲೀಸರಿಂದಲೇ ಆ್ಯಂಬುಲೆನ್ಸ್ ಸೇವೆ!New Year 2023: ಹೊಸ ವರ್ಷದಂದು ಕುಡಿದು ಟೈಟ್ ಆದವರಿಗೆ ಪೊಲೀಸರಿಂದಲೇ ಆ್ಯಂಬುಲೆನ್ಸ್ ಸೇವೆ!

ಈ ಅಭಿಯಾನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಇ-ತ್ಯಾಜ್ಯ ವಸ್ತುಗಳಾದ ಹಳೆಯ ಲ್ಯಾಪ್ ಟಾಪ್, ಕಂಪ್ಯೂಟರ್, ಟ್ಯಾಬ್ಗಳು, ಮೌಸ್, ಸ್ಪೀಕರ್ ಗಳು, ಬ್ಯಾಟರಿಗಳು, ಪವರ್ ಬ್ಯಾಂಕ್ ಗಳು, ಚಾರ್ಜರ್‌ಗಳು, ಟಾರ್ಚ್, ಟಿವಿ, ಹೆಡ್ ಫೋನ್ ಗಳು, ಸಿಡಿ‌, ಡಿವಿಟಿ ಸೆಟ್‌, ವಿಸಿಆರ್‌ಗಳು, ಗ್ಯಾಜೆಟ್‌ಗಳು ಹಾಗೂ ಹಳೆಯ ಮೊಬೈಲ್ ಫೋನ್‌ಗಳನ್ನು ಮರುಬಳಕೆ ಸಂಸ್ಥೆಗೆ ನೀಡಿದ್ದಾರೆ.

 E-waste collection campaign at Orchids International School

ಇ-ತ್ಯಾಜ್ಯ ಸಂಗ್ರಹ ಅಭಿಯಾನವು ಮುಂಬೈ, ಪುಣೆ, ಹೈದಾರಾಬಾದ್‌ ಹಾಗೂ ಬೆಂಗಳೂರು ನಗರಗಳಲ್ಲಿರುವ ಆರ್ಕಿಡ್ಸ್‌ ಶಾಲೆಗಳಲ್ಲಿ ಸುಮಾರು ಒಂದು ವಾರ ಕಾಲ ನಡೆಯಿತು. ಬೆಂಗಳೂರಿನಲ್ಲೇ ಸುಮಾರು 300 ಕೆಜಿಯಷ್ಟು ಇ-ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ಅಗತ್ಯವಿರುವಷ್ಟೇ ಗ್ಯಾಜೆಟ್‌ಗಳನ್ನು ಬಳಸಿ, ಅನಗತ್ಯ ಖರೀದಿಯನ್ನು ಮಾಡುವುದಿಲ್ಲವೆಂದು ವಿದ್ಯಾರ್ಥಿಗಳು ಪ್ರತಿಜ್ಞೆ ಕೈಗೊಂಡರು. ಗ್ಯಾಜೆಟ್‌ಗಳು ರಿಪೇರಿಯಾಗದ ಸ್ಥಿತಿ ತಲುಪಿದಾಗ ಮರುಬಳಕೆ ಕೇಂದ್ರಕ್ಕೆ ನೀಡಲು ನಾಗರಿಕರನ್ನು ಪ್ರೇರೇಪಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಇ-ತ್ಯಾಜ್ಯ ಉತ್ಪಾದನೆಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೂರನೇ ಸ್ಥಾನದಲ್ಲಿದ್ದರೆ, ಭಾರತವು ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ ಭಾರತದಲ್ಲಿ ವರ್ಷದಲ್ಲಿ 1.7 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ.

ಇ-ತ್ಯಾಜ್ಯದಿಂದ ಪರಿಸರದ ಮೇಲೆ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಚಿಕ್ಕವಯಸ್ಸಿನಲ್ಲಿಯೇ ಈ ಬಗ್ಗೆ ತಿಳಿಸಿದರೆ, ಮುಂದಕ್ಕೆ ಅವರು ಜವಾಬ್ದಾರಿಯುತ ಪ್ರಜೆಗಳಾಗಿ ಪರಿಸರವನ್ನು ಉಳಿಸುವಲ್ಲಿ ಕಾರ್ಯೋನ್ಮುಖರಾಗುತ್ತಾರೆ ಎಂದು ಉಪನ್ಯಾಸ ನೀಡಿದ ತಜ್ಞರು ತಿಳಿಸಿದ್ದಾರೆ.

English summary
Orchids International School launched an e-waste collection campaign to create awareness among students about recycling and moderation use. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X