ಬಿ - ಖಾತಾದಿಂದ ಎ- ಖಾತಾಗೆ ಈ ದಾಖಲೆ ಕಡ್ಡಾಯ, ಆಸ್ತಿದಾರರಿಗೆ ಹೊಸ ತಲೆನೋವು!

E Khata: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಕೆಲವು ಪ್ರಮುಖ ನಗರಗಳಲ್ಲಿ ಬಿ - ಖಾತಾದಿಂದ ಎ - ಖಾತಾ ಪರಿವರ್ತನೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಅವಕಾಶ ನೀಡಿದೆ. ಆದರೆ, ಬಿ ಖಾತಾ ಪರಿವರ್ತನೆಗೆ ಇ - ಖಾತಾ ಕಡ್ಡಾಯ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಎಲ್ಲಾ ಆಸ್ತಿಗಳ ಖರೀದಿ ಹಾಗೂ ಮಾರಾಟಕ್ಕೆ ಇ ಖಾತಾವನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಲಕ್ಷಾಂತರ ಜನ ಆಸ್ತಿದಾರರಿಗೆ ಇನ್ನೂ ಇ ಖಾತಾ ಸೌಲಭ್ಯ ಸಿಕ್ಕಿಲ್ಲ. ಇದೀಗ ಬಿ ಖಾತಾ ಪಡೆದುಕೊಳ್ಳುವುದುಕ್ಕೆ ಆಸ್ತಿಗಳಿಗೆ ಇ ಖಾತಾ ಆಗಿರುವುದು ಕಡ್ಡಾಯ ಎನ್ನಲಾಗಿದೆ.

ಬೆಂಗಳೂರು ಸೇರಿ ಕರ್ನಾಟಕದಲ್ಲಿ ಅಂದಾಜು 30ರಿಂದ 40 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಗುಡ್‌ನ್ಯೂಸ್ ನೀಡಿದೆ. ಈಗಾಗಲೇ ಸಾವಿರಾರು ಜನ ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಂಡಿದ್ದು, ಆಸ್ತಿ ಬೆಲೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಬಿ ಖಾತಾದಿಂದ ಎ ಖಾತಾ ಅವಕಾಶ ನೀಡಿರುವುದು ಲಕ್ಷಾಂತರ ಜನ ಆಸ್ತಿದಾರರಿಗೆ ವರದಾನವಾಗಿ ಬದಲಾಗಿದೆ. ಅಲ್ಲದೇ ಬಿ- ಖಾತಾ ಎ ಖಾತಾ ಪರಿವರ್ತನೆಯು ರಿಯಲ್ ಎಸ್ಟೇಟ್‌ಗೂ ಬೂಸ್ಟ್ ನೀಡಿದೆ. ಬಿ ಖಾತಾ ಪರಿವರ್ತನೆಯು ರಿಯಲ್ ಎಸ್ಟೇಟ್‌ನಲ್ಲಿ ಆಸ್ತಿಗಳ ಬೆಲೆ ದುಪ್ಪಟ್ಟಾಗಿದೆ.

E-Khata Mandatory for B-Khata to A-Khata Conversion New Headache for Property Owners

ಬಿ ಖಾತಾ ದಿಂದ ಎ ಖಾತಾ ಪರಿವರ್ತನೆ ಅಭಿಯಾನವನ್ನು ರಾಜ್ಯ ಸರ್ಕಾರವು ಹಮ್ಮಿಕೊಂಡಿದೆ. ಖಾತಾ ಪರಿವರ್ತನೆಗೆ 100 ದಿನಗಳ ಅಭಿಯಾನವನ್ನು ರಾಜ್ಯ ಸರ್ಕಾರವು ಆಯೋಜನೆ ಮಾಡಿದೆ. ಅಲ್ಲದೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬಿ ಖಾತಾದಿಂದ ಎಖಾತಾ ಪರಿವರ್ತನೆಗೆ ಇ ಖಾತಾವನ್ನು ಕಡ್ಡಾಯ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಈ ನಿಯಮವು ಹಲವರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಅಲ್ಲದೇ ಇಲ್ಲಿಯ ವರೆಗೆ ಇ ಖಾತಾ ಮಾಡಿಕೊಳ್ಳದ ಆಸ್ತಿದಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ.

ರಾಜ್ಯ ಸರ್ಕಾರವು ಬಿ ಖಾತಾಗೆ ಸಂಬಂಧಿಸಿದಂತೆ ಹೊರಡಿಸಿರುವ ಮಾರ್ಗಸೂಚಿಯ ಅನುಸಾರ, 21,527 ಚದರ ಅಡಿವರೆಗಿನ ಬಿ-ಖಾತಾ ಪ್ಲಾಟ್‌ಗಳು ಮತ್ತು ಪಕ್ಕದ ಸಾರ್ವಜನಿಕ ರಸ್ತೆಗಳು ಮಾತ್ರ ಪರಿವರ್ತನೆಗೆ ಅರ್ಹವಾಗಿವೆ. ಆಸ್ತಿ ಮಾಲೀಕರು ಭೂರೂಪಾಂತರ ಮತ್ತು ನಕ್ಷೆ ಅನುಮೋದನೆಗೆ ಶುಲ್ಕಗಳ ಜೊತೆಗೆ ಆಸ್ತಿಯ ಮಾರ್ಗದರ್ಶನ ಮೌಲ್ಯದ ಆಧಾರದ ಮೇಲೆ ಶೇಕಡಾ 5 ರಷ್ಟು ಪರಿವರ್ತನೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಮೂಲಕ ಬಿ ಖಾತಾ ಎ ಖಾತಾ ಗುಡ್‌ನ್ಯೂಸ್ ಕೊಡಲಾಗಿದೆ.

24 ಲಕ್ಷಕ್ಕೂ ಹೆಚ್ಚು ಆಸ್ತಿಗಳು: ಇನ್ನು ಬೆಂಗಳೂರಿನಲ್ಲಿ ಅಂದಾಜು 24 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಇನ್ನು ಬೆಂಗಳೂರಿನಲ್ಲಿ ಸುಮಾರು 7.5 ಲಕ್ಷ ಬಿ-ಖಾತಾ ಆಸ್ತಿಗಳಿವೆ ಎಂದು ವರದಿಯಾಗಿದೆ. ಆದರೆ ಇಲ್ಲಿಯವರೆಗೆ ಕೇವಲ 2.6 ಲಕ್ಷ ಮಾತ್ರ ಇ-ಖಾತಾಗೆ ಒಳಪಟ್ಟಿವೆ. ಅಲ್ಲದೇ ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಅಂದಾಜು 30 ರಿಂದ 40 ಲಕ್ಷಕ್ಕೂ ಹೆಚ್ಚು ಬಿ - ಖಾತಾ ಆಸ್ತಿಗಳಿವೆ. ಆದರೆ ಎಲ್ಲಾ ಆಸ್ತಿಗಳಿಗೂ ಇನ್ನೂ ಇ ಖಾತಾ ಸೌಲಭ್ಯ ಸಿಕ್ಕಿಲ್ಲ.

ಬಿ ಖಾತಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಗುಡ್‌ನ್ಯೂಸ್ ನೀಡಿದೆಯಾದರೂ. ಇ ಖಾತಾ ಇಲ್ಲದೆ ಬಿ ಖಾತಾ ಪಡೆದುಕೊಳ್ಳುವುದು ತೀರ ಕಷ್ಟವಾಗಲಿದೆ. ಅಲ್ಲದೇ ನೂರು ದಿನಗಳ ಒಳಗಾಗಿ ಲಕ್ಷಾಂತರ ರೂಪಾಯಿ ಹೊಂದಾಣಿಕೆ ಮಾಡುವುದು ಬಿ ಖಾತಾ ಆಸ್ತಿದಾರರಿಗೆ ಸವಾಲಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+