ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

4 ದಿನಗಳ ಕಾಲ ನಡೆಯಲಿದೆ 'ಈ ಕೆಳಗಿನವರು' ನಾಟಕ ಪ್ರದರ್ಶನ

|
Google Oneindia Kannada News

ಹಲವಾರು ವರ್ಷಗಳಿಂದ ರಂಗ ತರಬೇತಿ ನೀಡುತ್ತ ನಾಟಕಗಳನ್ನು ಮಾಡುತ್ತಲಿರುವ 'ಅಭಿನಯ ತರಂಗ' ರಂಗಶಾಲೆಯು ಈ ಬಾರಿ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ. ಬಿ ಟಿ ದೇಸಾಯಿ ರವರು ಕನ್ನಡಕ್ಕೆ ರೂಪಾಂತರ ಗೊಳಿಸಿರುವ ಮಾಕ್ಸಿಮ್ ಗಾರ್ಕ್ಸಿ ರವರ 'The Lower Depth' ನಾಟಕವನ್ನು ರಂಗದ‌ ಮೇಲೆ‌ ತರುತ್ತಿದೆ.

'ಈ ಕೆಳಗಿನವರು' ಎಂಬ ಈ ನಾಟಕ ಹೆಸರಿನ ಮೂಲಕವೇ ಗಮನ ಸೆಳೆಯುತ್ತಿದೆ. ಇದೇ ನವೆಂಬರ್ ತಿಂಗಳ 15, 16 ,17 ಮತ್ತು 18 ರಂದು ಬನಶಂಕರಿಯ ಸುಚಿತ್ರ ಚಲನಚಿತ್ರ ಅಕಾಡೆಮಿಯ ನಾಣಿ ಭಾನು ಅಂಗಳದಲ್ಲಿ ಪ್ರದರ್ಶನ ನಡೆಯಲಿದೆ.

'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್' ನಾಟಕ ನಾಳೆ ಪ್ರದರ್ಶನ 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್' ನಾಟಕ ನಾಳೆ ಪ್ರದರ್ಶನ

ಗೋಪಾಲ ಕೃಷ್ಣ ದೇಶಪಾಂಡೆ ಮತ್ತು ಕಾಳಿಪ್ರಸಾದ್ ರವರು ನಿರ್ದೇಶನ ಮಾಡಿರುವ ಈ ನಾಟಕಕ್ಕೆ ಭಾಸ್ಕರ್ ನಾಗಮಂಗಲ, ಕಿರಣ್ ನಾಯಕ್, ರವರು ವಿನ್ಯಾಸ ಮಾಡಿದ್ದು, ಹೇಮಂತ್ ಕುಮಾರ್ ರವರು ರಂಗ ಸಜ್ಜಿಕೆ, ಪ್ರಶಾಂತ್ ಕೆ ಎಸ್ ರವರು ಸಂಗೀತ ನಿರ್ವಾಹಣೆ ಮಾಡಲಿದ್ದಾರೆ.

e kelaginavaru kannada play will be held on november 15th

ಅಂದಹಾಗೆ, ಈ ನಾಟಕದ ಪಾತ್ರ ಮತ್ತು ಪಾತ್ರದಾರಿಗಳ ಹೆಸರು ಇಂತಿವೆ. ಜಹಗೀರದಾರ ಪಾತ್ರದಲ್ಲಿ ಶಿವರಾಜ್ ಡಿ ಎನ್ ಎಸ್, ಸುಂದ್ರಿಯಾಗಿ ಪವಿತ್ರ ಬಿ, ಕಾಶ್ಯವ್ವ ರೂಪದಲ್ಲಿ ಭೂಮಿಕ ಪ್ರಸನ್ನ, ಹನುಮಂತನ ವೇಷದಲ್ಲಿ ನಿಂಗರಾಜು, ಗೌರವ್ವಳಾಗಿ ಮೀನಾಕ್ಷಿ, ಬೊಬ್ಬಣ್ಣನಾಗಿ ಗುರು ಪ್ರಸಾದ್, ಸಂಕಪ್ಪ ಪಾತ್ರದಲ್ಲಿ ಸಿದ್ದಾರುಡ್, ನಟ ಪಾತ್ರದಲ್ಲಿ ಅರುಣ್ ಜಾನಕಿ ರಾಮ್ , ವಾಸ್ಯರಾಗಿ ನಿರಂಜನ್ ಎಸ್ ವಿ, ಕ್ರಿಷ್ಟಪ್ಪ ರೂಪದಲ್ಲಿ ಚೇತನ್ ರಾಜ್, ರತ್ನಳಾಗಿ ದಿವ್ಯ ಎಸ್, ಲಕ್ಕಜ್ಜನಾಗಿ ವಿಕ್ರಮ್ ಎಸ್ ವಿ, ವಾಸಕ್ಕ ಪಾತ್ರದಲ್ಲಿ ಗೌತಮಿ ಹಾಗೂ ಸಿದ್ದರಾಜ ಪಾತ್ರದಲ್ಲಿ ಪ್ರೀತಂ ಗೌಡ ನಟಿಸುತ್ತಿದ್ದಾರೆ.

English summary
'E Kelaginavaru' kannada play will be held day after tomorrow (November 15th).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X