ರಸ್ತೆಯಲ್ಲಿ ಬಿದ್ದ ದಂಪತಿಗೆ ಕಾರು ಕೊಟ್ಟು ನಡೆದು ಹೋದ ಸದಾನಂದಗೌಡರು
ಇತ್ತೀಚೆಗಷ್ಟೇ ಚಕ್ರವರ್ತಿ ಸೂಲಿಬೆಲೆ ಅವರೊಂದಿಗಿನ ಟ್ವೀಟ್ ಯುದ್ಧದಿಂದ ಸುದ್ದಿಯಾಗಿದ್ದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡರು, ಇದೀಗ ತಮ್ಮ ಮಾನವೀಯ ನಡೆಯಿಂದ ಮತ್ತೆ ಸುದ್ದಿಯಾಗಿದ್ದಾರೆ.
ನಡೆದಿದ್ದಿಷ್ಟು: ಅಕ್ಟೋಬರ್ 12 ರಂದು ಸಂಜೆ, ಇಸ್ರೋ ಕಚೇರಿ ಬಳಿ ಮುಖ್ಯರಸ್ತೆಯಲ್ಲಿಸದಾನಂದ ಗೌಡ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ದ್ವಿಚಕ್ರವಾಹದಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಆಯತಪ್ಪಿ ರಸ್ತೆಗೆ ಬಿದ್ದಿದ್ದರು.
ಇದನ್ನು ಕಣ್ಣಾರೇ ಕಂಡ ಡಿವಿ ಎಸ್ ತಮ್ಮ ಪಾಡಿಗೆ ತಾವು ಸುಮ್ಮನೆ ಹೋಗದೆ, ಕಾರನ್ನು ನಿಲ್ಲಿಸಿ ದಂಪತಿಗಳ ಬಳಿ ಬಂದು ಉಪಚರಿಸಿದರು.

ನಂತರ ತಮ್ಮ ಮನೆ ಅಲ್ಲೇ ಸಮೀಪವಿದ್ದಿದ್ದರಿಂದ ಆ ದಂಪತಿಗಳನ್ನು ಆಸ್ಪತ್ರೆಗೆ ಸೇರಿಸಲು ತಮ್ಮ ಕಾರನ್ನೇ ಬಳಸುವಂತೆ ಹೇಳಿ, ತಾವು ನಡೆದುಕೊಂಡೇ ಮನೆಗೆ ತೆರಳಿದರು. ದಂಪತಿಯನ್ನು ಸಮೀಪದ ರಾಮಯ್ಯ ಕಾಲೇಜಿಗೆ ಸೇರಿಸಲಾಯ್ತು.
ದಂಪತಿಗಳಲು ಬಿದ್ದ ಜಾಗದಿಂದ ಡಿವಿಎಸ್ ಅವರ ಮನೆ ಸುಮಾರು ಅರ್ಧ ಕಿಲೋಮೀಟರ್ ದೂರವಿತ್ತು. ಆದರೂ ಅವರು ತಮ್ಮ ಕಾರನ್ನು ನೀಡಿ, ತಾವು ನಡೆದುಕೊಂಡೇ ಮನೆ ಸೇರಿದರು. ದಂಪತಿಗಳು ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂಬುದು ತಿಳಿದುಬಂದಿದೆ.












Click it and Unblock the Notifications