• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು: ಈ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟ ನಿಷೇಧ

|
   ಮದ್ಯ ಪ್ರಿಯರಿಗೆ ಶಾಕ್ ನೀಡಿದ ಬೆಂಗಳೂರು ಪೊಲೀಸ್..! | Oneindia Kannada

   ಬೆಂಗಳೂರು, ಸೆ 7: ನಗರದ ಪೂರ್ವ ಕಮಿಷನರೇಟ್ ವ್ಯಾಪ್ತಿಯ, ಕೆಲವೊಂದು ಪೊಲೀಸ್ ಠಾಣಾ ಸರಹದ್ದಿನಲ್ಲಿ, ಭಾನುವಾರ (ಸೆ 8) ಮದ್ಯ ಮಾರಾಟವನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

   ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ, ಶಿವಾಜಿನಗರದ ಸೆಂಟ್ ಮೇರಿ ಚರ್ಚ್‍ನಲ್ಲಿ, ಸೆಂಟ್ ಮೇರಿ ಆರೋಗ್ಯಮಾತೆಯ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಭಾನುವಾರ ನಡೆಯಲಿದೆ.

   ಕುಡುಕರಿಗೂ ಬಂತು ಅಚ್ಛೇ ದಿನ್: ನಿಂತಲ್ಲೇ ಅಮಲೇರಿಸುವ ಸುದ್ದಿ!

   ಈ ಕಾರ್ಯಕ್ರಮವು ಬೆಳಿಗ್ಗೆ 06.30 ಗಂಟೆಗೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, 11.30 ಗಂಟೆಯವರೆಗೆ ಚರ್ಚ್‍ನಲ್ಲಿ, ಸಾಮೂಹಿಕ ಪ್ರಾರ್ಥನೆ ಹಾಗೂ ಸೇವೆಗಳು ನಡೆಯುತ್ತವೆ.

   ಮಧ್ಯಾಹ್ನದ ನಂತರ ಸೆಂಟ್ ಮೇರಿ ಮಾತೆಯ ಬೃಹತ್ ತೇರಿನ ಮೆರವಣಿಗೆಯು, ಚರ್ಚ್‍ನಿಂದ ಹೊರಟು, ಎಂ.ಕೆ.ಸ್ಟ್ರೀಟ್, ಶಿವಾಜಿ ರಸ್ತೆ, ಬ್ರಾಡ್‍ವೇ ರಸ್ತೆ, ರಸೆಲ್ ಮಾರ್ಕೆಟ್ ಮತ್ತು ನರೋನ ರಸ್ತೆ ಮಾರ್ಗವಾಗಿ ಸಂಚರಿಸಿ ಚರ್ಚ್‍ಗೆ ವಾಪಸ್ ಬಂದು ಸೇರುವ ಕಾರ್ಯಕ್ರಮವಿರುತ್ತದೆ.

   ಈ ಉತ್ಸವದಲ್ಲಿ, ನೆರೆಹೊರೆಯ ಪ್ರದೇಶಗಳಿಂದ ಸುಮಾರು 75000-100000 ಭಕ್ತಾದಿಗಳು ಸೇರುವ ಸಾಧ್ಯತೆಯಿದೆ. ಈ ಸಂಬಂಧ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿಯನ್ನು ಕಾಪಾಡುವ ದೃಷ್ಠಿಯಿಂದ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಭಾರತೀನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸೆ8ರ ಬೆಳಿಗ್ಗೆ 06 ಗಂಟೆಯಿಂದ ರಾತ್ರಿ 11ಗಂಟೆಯವರೆಗೆ, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

   ಬೆಂಗಳೂರಿನ 107 ಬಾರ್ & ರೆಸ್ಟೋರೆಂಟ್, ಪಬ್ ಲೈಸೆನ್ಸ್ ರದ್ದು

   ಈ ಸಮಯದಲ್ಲಿ ಕಿಡಿಗೇಡಿಗಳು, ಮದ್ಯಪಾನದ ಅಮಲಿನಲ್ಲಿ, ದುಷ್ಕೃತ್ಯವನ್ನು ನಡೆಸಿ, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಭವವಿರುವುದಾಗಿ ಗುಪ್ತವಾರ್ತಾ ವಿಭಾಗದ ಮಾಹಿತಿಯಿಂದ ತಿಳಿದುಬಂದಿರುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ಹೇಳಲಾಗಿದೆ.

   English summary
   Due To Saint Mary Festival, Liquor Banned In Three Police Station Limits In Bengaluru On Sep 8. Three Police Stations are Shivaji Nagar, Bharathi Nagar and Commercial Street.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X