• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ಸ್ ಜಾಲದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್ !

|

ಬೆಂಗಳೂರು, ನವೆಂಬರ್ 20: ಡ್ರಗ್ ಜಾಲದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಸದಾಶಿವನಗರ ಪೊಲೀಸ್‌ ಠಾಣೆಯ ಮುಖ್ಯ ಪೇದೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರಭಾಕರ್ ಬಂಧಿತ ಆರೋಪಿ. ಸದಾಶಿವನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಕೆ.ಜಿ.ನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ ಜಾಲ ಪ್ರಕರಣದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದರು. ಡಾರ್ಕ್ ವೆಬ್ ತಾಣಗಳ ಮೂಲಕ ಹೈಡ್ರೋ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಕೊರಿಯರ್ ಮೂಲಕ ತರಿಸಿಕೊಂಡುಪಾರ್ಟಿ ಆಯುಜಿಸುತ್ತಿದ್ದ ಸುನೀಶ್ ಹೆಗ್ಡೆ, ಹೇಮಂತ್, ದರ್ಶನ್ ಲಮಾಣಿ ಮತ್ತಿತರ ಆರೋಪಿಗಳು ಬಂಧನಕ್ಕೆ ಒಳಗಾಗಿದ್ದರು.

ಲಮಾಣಿ ಪುತ್ರನ ಡ್ರಗ್ಸ್ ಕೇಸ್: ಹ್ಯಾಕರ್ ಕೃಷ್ಣ ಬಂಧನ

ಆರೋಪಿತರಿಗೆ ಪೊಲೀಸರ ದಾಳಿ, ಬಂಧನಕ್ಕೆ ಬರುವ ಮಾಹಿತಿಯನ್ನು ಪ್ರಭಾಕರ್ ಒದಗಿಸಿದ್ದ. ಅಲ್ಲದೇ ಸಿಸಿಬಿ ಪೊಲೀಸರ ತನಿಖೆ, ದಾಳಿಯ ವಿವರಗಳನ್ನು ಆರೋಪಿಗಳಿಗೆ ಖಚಿತ ಮಾಹಿತಿ ನೀಡಿ, ಅವರಿಂದ ಅಕ್ರಮವಾಗಿ ಲಾಭ ಪಡೆಯುತ್ತಿದ್ದ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಪ್ರಭಾಕರ್‌ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದೇ ಡ್ರಗ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಹ್ಯಾಕರ್ ಶ್ರೀಕೃಷ್ಣ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧನದ ವೇಳೆ ಆತ ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದು, ಪ್ರಭಾಕರ್ ಕರ್ತವ್ಯಕ್ಕೆ ದ್ರೋಹ ಎಸಗಿ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ಸಂಗತಿ ಹೊರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಪ್ರಭಾಕರ್ ನನ್ನು ಬಂಧಿಸಲಾಗಿದೆ ಎಂದುಪೊಲೀಸರು ತಿಳಿಸಿದ್ದಾರೆ.

English summary
CCB police have arrested the Head Constable of the Sadashivanagar police station for informing the Drug case accused persons
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X