Get Updates
Get notified of breaking news, exclusive insights, and must-see stories!

ಅಕ್ಟೋಬರ್ 7ರಿಂದ Onlineನಲ್ಲೇ DL ಅರ್ಜಿ ಸಲ್ಲಿಸಬಹುದು

ಬೆಂಗಳೂರು, ಸೆಪ್ಟೆಂಬರ್ 28: ವಾಹನ ಕಲಿಕಾ ಚಾಲನಾ ಪತ್ರ (LL‌), ಚಾಲನಾ ಪರವಾನಗಿ (DL‌) ಸೇರಿದಂತೆ ಎಲ್ಲ ರೀತಿಯ ವಾಹನ ಸೇವೆಗಳಿಗೆ ಇನ್ನು ಆನ್‌ ಲೈನ್‌ ಮೂಲಕವೇ ಅರ್ಜಿ ಸಲ್ಲಿಕೆ ವ್ಯವಹಾರ ಪೂರ್ಣಗೊಳಿಸಲು ರಾಜ್ಯ ಸಾರಿಗೆ ಇಲಾಖೆ ನಿರ್ಧರಿಸಿದೆ.

ಸಾರಥಿ ಸೇವೆ ಅಕ್ಟೋಬರ್ 7ರಿಂದ ಈ ನೂತನ ನಿಯಮವು ಪ್ರಾಯೋಗಿಕವಾಗಿ ರಾಜಧಾನಿಯ 10 ಆರ್‌ ಟಿಓ ಕಚೇರಿಗಳಲ್ಲಿ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ವಾಹನ ಚಾಲನಾ ಪರವಾನಗಿ ನೀಡುವ ಈ ಅಂತರ್ಜಾಲ ವ್ಯವಸ್ಥೆಗೆ ''ಸಾರಥಿ'' ಎಂದು ಹೆಸರಿಡಲಾಗಿದೆ.

driving-licence-service-to-be-made-available-on-internet-bangalore-rto

ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿರುವ (RTO) ವ್ಯಾಪಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ತ್ವರಿತಗತಿಯಲ್ಲಿ ಅರ್ಜಿ ವಿಲೇವಾರಿಗೆ ಅನುವು ಮಾಡಿಕೊಡುವುದು ಇದರ ಸದುದ್ದೇಶವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಇ-ಆಡಳಿತ ಯೋಜನೆಯಡಿ ದೇಶಾದ್ಯಂತ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು ಗಣಕೀಕರಣಗೊಳಿಸಲಾಗಿದ್ದು, NIC ಅಭಿವೃದ್ಧಿಪಡಿಸಿರುವ ಎರಡು ಸಾಫ್ಟ್ ವೇರ್‌ ಬಳಸಿ ಸಾರಿಗೆ ಕಚೇರಿಗಳನ್ನು ಕಾಗದರಹಿತಗೊಳಿಸಲಾಗುತ್ತದೆ. ಕೇಂದ್ರದ ತಂತ್ರಾಂಶ ಹಾಗೂ ಅದಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಸೇರ್ಪಡೆ ಮಾಡುವ ಮೂಲಕ ಅಂತರ್ಜಾಲದಲ್ಲಿ ಅರ್ಜಿ ಸ್ವೀಕರಿಸಲಾಗುವುದು.

ಒಟ್ಟು 8 ಸೇವೆಗಳು ಅಂತರ್ಜಾಲದಲ್ಲಿ: 1. ಕಲಿಕಾ ಚಾಲನಾ ಪರವಾನಗಿ, 2. ಚಾಲನಾ ಪರವಾನಗಿ, 3. ವಾಹನಗಳ ನೋಂದಣಿ ವ್ಯಾಪ್ತಿ, 4. ನೋಂದಣಿ ಹೇಗೆ ಮಾಡುವುದು ಎಂಬ ವಿವರ ಪಡೆಯುವುದು, 5. ನೋಂದಣಿ ಸಮಯದಲ್ಲಿ ವಾಹನ ಹಾಜರುಪಡಿಸುವ ಪ್ರಕ್ರಿಯೆ, 6. ನೋಂದಣಿ ಪತ್ರ ನವೀಕರಣ, 7. ಕಂತು ಖರೀದಿ ಒಪ್ಪಂದ ಮತ್ತು 8. ಸಾರಿಗೆ ವಾಹನಗಳ ಅರ್ಹತಾ ಪತ್ರವನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿನ ಯಾವುದೇ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪಡೆಯಬಹುದು.

ಇತರೆ ಇಲಾಖೆಗಳಿಗೆ ಮಾಹಿತಿ: ವಾಹನಗಳ ನೋಂದಣಿ ಮಾಹಿತಿಯನ್ನು ಪೊಲೀಸ್‌ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ ಮತ್ತು ಅಬಕಾರಿ ಇಲಾಖೆ ಸೇರಿದಂತೆ ಇತರೆ ಸರ್ಕಾರಿ ಸಂಸ್ಥೆಗಳಿಗೆ ಆನ್‌ ಲೈನ್‌ ಮೂಲಕ ಒದಗಿಸಲಾಗುವುದು. ಹೊಸ ಸೇವೆಯಿಂದ ಬೆಂಗಳೂರು ಒನ್‌ ಮತ್ತು ಕರ್ನಾಟಕ ಒನ್‌ ಕೇಂದ್ರಗಳ ಮೂಲಕ ವಾಹನಗಳ ಆರ್‌ಸಿ ದಾಖಲೆಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸದ್ಯಕ್ಕೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಜನತೆ ನಗರದ ಯಾವುದೇ ಆರ್‌ ಟಿಒ ಕಚೇರಿಗಳಿಂದ ಅಗತ್ಯ ಸೇವೆ ಪಡೆದು ಕೊಳ್ಳಬಹುದಾಗಿದೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+