ಚಾಮರಾಜಪೇಟೆಯಲ್ಲಿ RTO ಇ-ಕೇಂದ್ರ ಸ್ಥಾಪನೆ

ಚಾಮರಾಜಪೇಟೆ, ಬನಶಂಕರಿ, ಮಾರತ್ ಹಳ್ಳಿ ಮತ್ತು ಆರ್ ನಗರದಲ್ಲಿ ಈ ಹೊಸ RTO ಕೇಂದ್ರಗಳು ಸ್ಥಾಪನೆಗೊಳ್ಳಲಿವೆ. ಇನ್ನು, 15 ಕೋಟಿ ರೂ. ವೆಚ್ಚದಲ್ಲಿ ಇಲಾಖೆಯಲ್ಲಿ ಅಂತರ್ಜಾಲ ಸೇವೆ ಅಳವಡಿಸಿಕೊಳ್ಳಲು ನಿರ್ಧರಿಸಿದೆ.
ಡಿಡಿಗೆ ಡಿಚ್ಚಿ: ವಾಹನ ನೋಂದಣಿ ಸ್ವೀಕಾರ, ಇ-ಪೇಮೆಂಟ್ ಮೂಲಕ ಶುಲ್ಕ ಪಾವತಿ, ವಾಹನ ತೆರಿಗೆ ಪಾವತಿ ಇವೇ ಮುಂತಾದ ಸೇವೆಗಳು ಅಂತರ್ಜಾಲ ಸೇವಾ ವ್ಯಾಪ್ತಿಗೆ ಒಳಪಟ್ಟಿದೆ. ಇದರಿಂದ ಡಿ.ಡಿ. ತೆಗೆದುಕೊಳ್ಳಲು ಬ್ಯಾಂಕುಗಳಿಗೆ ಅಲೆಯುವುದು ತಪ್ಪುತ್ತದೆ. ಈಗಾಗಲೇ ಸ್ಟೇಟ್ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ಆಯುಕ್ತ ಕೆಆರ್ ಶ್ರೀನಿವಾಸ್ ತಿಳಿಸಿದ್ದಾರೆ.
ಡೀಲರ್ ಸಂಸ್ಥೆಗಳ ಜತೆಯೂ ಒಪ್ಪಂದ ಮಾಡಿಕೊಂಡಿರುವ RTO, ವಾಹನಗಳ ನೋಂದಣಿ ಮಾಹಿತಿಯನ್ನು ಡೀಲರ್ ಹಂತದಲ್ಲಿಯೇ ಸಂಗ್ರಹಿಸಲಿದೆ. ಸದ್ಯಕ್ಕೆ ಇದು ಬೆಂಗಳೂರಿನಲ್ಲಿ ಲಭ್ಯವಿದ್ದು, ಮುಂದೆ ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.












Click it and Unblock the Notifications