ಇಂಡಿಗೋ ವಿಮಾನ ಪೈಲಟ್ ಬಂಧನ ಕಾರಣವೇನು?
ಬೆಂಗಳೂರು, ಜನವರಿ 17: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಕ್ಕೆ ಇಂಡಿಗೋ ಏರ್‌ಲೈನ್ಸ್‌ನ ಪೈಲಟ್ ಯುಧಿಷ್ಠಿರ್ ಪೂನಿಯಾ(32) ಎಂಬುವವರನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.
ಯುಧಿಷ್ಠಿರ್ ವಿರುದ್ಧ ಪತ್ನಿ ಪೀನು ಸಿಂಗ್ ಅವರು 2018ರ ಸೆ.5 ರಂದು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಚಾರಣೆಗೆ ಹಾಜರಾಗದೆ ಓಡಾಡುತ್ತಿದ್ದ ಯುಧಿಷ್ಠಿರ್ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೈಪುರದ ಹನುಮಾನ್ ನಗರ ನಿವಾಸಿಯಾದ ಯುಧಿಷ್ಠಿರ ಜತೆ ಪೀನು ವಿವಾಹ 2014ರ ಮೇ 2ರಂದು ನಡೆದಿತ್ತು. ದಂಪತಿ ಬೆಂಗಳೂರಿಗೆ ಬಂದು ಮಾರತ್ತಹಳ್ಳಿಯಲ್ಲಿ ನೆಲೆಸಿದ್ದರು. ಮದುವೆ ಸಮಯದಲ್ಲಿ ಹಣ, ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ಪಡೆದಿದ್ದರು. ಮೊದಲುಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಯುಧಿಷ್ಠಿರ, ಹೆಣ್ಣುಮಗು ಜನಿಸಿದ ಬಳಿಕ ಕಿರುಕುಳ ನೀಡಲು ಆರಂಬಿಸಿದ್ದ.ತವರಿನಿಂದ ಮತ್ತಷ್ಟು ಹಣ, ಆಭರಣ ತರುವಂತೆ ಪೀಡಿಸುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಿದ್ದ, ಹೀಗಾಗಿ ಪತಿ ಮತ್ತು ಮತ್ತೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೀನು ದೂರು ನೀಡಿದ್ದರು.
ಯುಧಿಷ್ಠಿರ ಫೋಟೊ ಹಿಡಿದು ಮಂಗಳವಾರ ಬೆಳಗ್ಗೆಯಿಂದ ಜೈಪುರ ವಿಮಾನ ನಿಲ್ದಾಣದ ಹೊರಗೆ ಪೊಲೀಸರು ಕಾಯುತ್ತಿದ್ದರು. ಸಂಜೆ 5 ಗಂಟೆಗೆ ಕಾರಿನಲ್ಲಿ ಬಂದ ಅವರನ್ನು ವಶಕ್ಕೆ ಪಡೆಯಲಾಗಿದೆ. ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications