ಪತ್ನಿಗೆ ಸತ್ಯ ಮರೆಮಾಚಿ ಮದುವೆಯಾದ ವೈದ್ಯ ಮನನೊಂದು ಆತ್ಮಹತ್ಯೆ

ಬೆಂಗಳೂರು, ಜೂನ್ 15: ಮನುಷ್ಯನ ಹೃದಯ ಆತನ ಹಿಡಿಯಷ್ಟು ಅನ್ನೋದು ಗೊತ್ತಿರವಂತಹ ವಿಚಾರವೇ. ಮನುಷ್ಯನ ಹೃದಯ ಹಿಡಿಯಷ್ಟಿದ್ದರು ಹಿಡಿತಕ್ಕೆ ಸಿಗದಷ್ಟು ನೋವು ಹೃದಯವನ್ನೇ ಹಿಂಡಿ ಬಿಡುತ್ತದೆ. ಹೃದಯ ಸಂಬಂಧಿ ಖಾಯಿಲೆಯ ಬಗ್ಗೆ ಮದುವೆಗೆ ಮುನ್ನವೇ ಕೈಹಿಡಿಯುವವಳಿಗೆ ತಿಳಿಸಿಲ್ಲ ಅನ್ನೋ ಮನೋವೇದನೆ ವೈದ್ಯನೊಬ್ಬನನ್ನು ಆತ್ಮಹತ್ಯೆ ಮಾಡಿಕೊಳ್ಳವಂತೆ ಮಾಡಿದೆ.

ಮದುವೆಯಾಗಿ ಮೂರು ಕೇವಲ ಮೂರೇ ತಿಂಗಳಾಗಿತ್ತು. ವೈದ್ಯನ ಜೀವನ ಸುಖವಾಗಿ ಸಾಗುತ್ತಿತ್ತು. ವೈದ್ಯ ತನ್ನ ಪತ್ನಿಯ ಬಳಿಯಲ್ಲಿ ಮದುವೆಗೊ ಮುನ್ನವೇ ತಿಳಿಸಬೇಕಿದ್ದ ವಿಚಾರವನ್ನು ಮುಚ್ಚಿಟ್ಟಿದ್ದ ಪಾಪಪ್ರಜ್ಞೆ ಕಾಡತೊಡಗಿತ್ತು. ಕೆಲಸಕ್ಕೆ ಹೋಗಿ ಬಂದು ಮನೆಯಲ್ಲಿ ಪತ್ನಿಯ ಮುಖವನ್ನು ನೋಡುತ್ತಿದ್ದಾಗ ಆ ನೋವು ದ್ವಿಗುಣವಾಗುತ್ತಿತ್ತು. ತನ್ನ ಖಾಯಿಲೆ ಬಗ್ಗೆ ಪತ್ನಿಯ ಬಳಿ ಬಾಯ್ಬಿಡದವ ಮಾಡಿದ್ದು ಮಾತ್ರ ಮತ್ತೊಂದು ದ್ರೋಹದ ಕೆಲಸ. ಕೈಹಿಡಿದವಳು ಮಗ್ಗುಲಲ್ಲೇ ಮಲಗಿರುವಾಗ ತಾನು ಎದ್ದು ಅಪಾರ್ಟ್‌ಮೆಂಟ್‌ನಿಂದ ಹಾರಿ ಜೀವವನ್ನೇ ಬಿಟ್ಟಿದ್ದಾನೆ.

ಆಂಧ್ರಪದೇಶದ ಕಡಪ ಮೂಲದ ವೈದ್ಯ ಪೃಥ್ವಿಕಾಂತ್ ರೆಡ್ಡಿ ಅಮೃತಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನ 11 ಮಹಡಿಯಿಂದ ಜಿಗಿದಿದ್ದಾನೆ. ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಬಿದ್ದಿದ್ದಾನೆ. ಬಾಲ್ಕನಿಯಲ್ಲಿ ಬಿದ್ದ ರಭಸಕ್ಕೆ ತೀವ್ರ ರಕ್ತಸ್ರಾವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Doctor Jumps to Death From 11TH Floor of the Apartment in Bengaluru

ಮೂರು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ವೈದ್ಯ...!

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯನಾಗಿರುವ ಪೃಥ್ವಿಕಾಂತ್ ಅಮೃತಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಜೊತೆ ವಾಸವಾಗಿದ್ದ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮದುವೆ ಮಾಡಿಕೊಂಡಿದ್ದವನು. ಪತಿ, ಪತ್ನಿ ಇಬ್ಬರು ಅನ್ಯೋನ್ಯವಾಗಿಯೇ ಇದ್ದರು. ಆದರೆ ಕಳೆದ ಒಂದು ವಾರದಿಂದ ಪೃಥ್ವಿಕಾಂತ್ ರೆಡ್ಡಿ ಡಲ್ ಆಗಿದ್ದ. ಪತ್ನಿ ಕಾರಣ ಕೇಳಿದ್ದರು ಏನೂ ಹೇಳಿಕೊಳ್ಳುತ್ತಿರಲಿಲ್ಲ. ಏನೋ ಕೆಲಸದ ಟೆನ್ಷನ್ ಇರಬಹುದೆಂದು ಆಕೆ ಕೂಡ ಸುಮ್ಮನಿದ್ದಳು. ಆದರೆ ಇಂದು ಬೆಳಗಿನ ಜಾವ 4.30 ರ ಸಂದರ್ಭದಲ್ಲಿ ಪತ್ನಿ ಮಲಗಿದ್ದ ಸಂದರ್ಭವನ್ನು ನೋಡಿಕೊಂಡು ತಾನಿದ್ದ ಅಪಾರ್ಟ್‌ಮೆಂಟ್‌ನ 11 ನೇ ಮಹಡಿಗೆ ಹೋದವನೆ ಅಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ.

ತನ್ನದೇ ಮತ್ತೊಂದು ಮೊಬೈಲ್‌ಗೆೆ ಕಳುಹಿಸಿದ್ದ ಸಂದೇಶ
ಇನ್ನು ಪೊಲೀಸರು ತನಿಖಾ ಭಾಗವಾಗಿ ಆತನ ಮೊಬೈಲ್‌ ಅನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಬರೆದುಕೊಂಡಿದ್ದ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ತನಗೆ ಮದುವೆಗೆ ಮುಂಚೆಯೇ ಹೃದಯ ಸಂಬಂಧಿ ಕಾಯಿಲೆ ಇದೆ ‌. ಆದರೆ ಈ ವಿಚಾರವನ್ನು ಮದುವೆಗೆ ಮುಂಚೆ ತನ್ನ ಪತ್ನಿಗೆ ತಿಳಿಸಿರಲಿಲ್ಲ. ನಂತರ ಆಕೆಗೆ ಮೋಸ ಮಾಡಿದ್ದೇನೆ ಎಂಬ ಪಶ್ಚಾತಾಪ ಕಾಡುತ್ತಿದೆ. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆನೆಂದು ಉಲ್ಲೇಖಿಸಿ ನಂತರ ಪತ್ನಿಗೆ ನೀನು ಬೇರೆಯವನ ಜೊತೆ ಮದ್ವೆಯಾಗಿ ಸುಖವಾಗಿರು ಎಂದು ಬರೆದುಕೊಂಡು ಅದೇ ಮೊಬೈಲ್ ನಲ್ಲಿಂದ ತನ್ನ ಮತ್ತೊಂದು ನಂಬರ್‌ಗೆ ಸೆಲ್ಫ್ ಸೆಂಡ್ ಮಾಡಿರುವುದು ತಿಳಿದುಬಂದಿದೆ.

Doctor Jumps to Death From 11TH Floor of the Apartment in Bengaluru

ಪತ್ನಿಗೆ ಸಣ್ಣವಯಸ್ಸು ಮತ್ತೊಂದು ಮದುವೆಯಾಗು ತಾಕೀತು
ಹೃದಯ ಸಂಬಂಧಿ ಖಾಯಿಲೆಯದ್ದು ಆ ಖಾಯಿಲೆ ಗುಣವಾಗುವಂಥದ್ದಲ್ಲ. ಜೀವನ ಪೂರ್ತಿ ಇರುವಂತದ್ದು. ನೀನು ಮತ್ತೊಂದು ಮದುವೆಯಾಗು ಸಣ್ಣವಯಸ್ಸು ಎಂದೆಲ್ಲಾ ಮೊಬೈಲ್ ನೋಟ್‌ನಲ್ಲಿ ಬರೆದಿದ್ದು ಕೊನೆಯದಾಗಿ ತನ್ನ ಪತ್ನಿಗೆ ಸಾರಿ ಎಂದು ವೈದ್ಯ ಪೃಥ್ವಿಕಾಂತ್ ರೆಡ್ಡಿ ತನ್ನ ನೋವನ್ನು ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ತನಿಖೆಯ ನಂತರ ಸತ್ಯಾಂಶ ಬಯಲಿಗೆ
ಪೃಥ್ವಿ ಕಾಂತ್ ರೆಡ್ಡಿ ವೈದ್ಯರಾಗಿದ್ದರು. ಕೆಲವು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಯಾವ ಕಾರಣಕ್ಕಾಗಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಎಂಬುದನ್ನು ನಾನಾ ಆಯಾಮದಲ್ಲಿ ತನಿಖೆಯನ್ನು ನಡೆಸುತ್ತಿದ್ದೇವೆ. ವೈದ್ಯರು ಖಿನ್ನತೆಗೆ ಒಳಗಾಗಿದ್ದರೇ ಅಥವಾ ಯಾವ ಕಾರಣಕ್ಕಾಗಿ ಕಟ್ಟಡದಿಂದ ಬಿದ್ದಿದ್ದಾರೆ ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+