Get Updates
Get notified of breaking news, exclusive insights, and must-see stories!

ನಿಮ್ಮ ಸಂಗಾತಿ ಅಕ್ರಮ ಸಂಬಂಧದಲ್ಲಿರುವ ಅನುಮಾನವಿದೆಯೇ? ಪತ್ತೆ ಹಚ್ಚುತ್ತವೆ ಡಿಟೆಕ್ಟಿವ್ ಏಜೆನ್ಸಿಗಳು!

ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ವೈವಾಹಿಕ ದ್ರೋಹ ಮತ್ತು ವಿವಾಹೇತರ ಸಂಬಂಧಗಳು (ಅಕ್ರಮ ಸಂಬಂಧ) ಬೆಳಕಿಗೆ ಬರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ತಮ್ಮ ಸಂಗಾತಿ ಬೇರೊಬ್ಬರ ಜೊತೆ ಸಂಬಂಧ ಹೊಂದಿದ್ದಾರೆ ಎನ್ನುವ ಅನುಮಾನಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಂಡುಬರುತ್ತಿದೆ. ತಮ್ಮ ಸಂಗಾತಿಯ ನಿಷ್ಠೆಯನ್ನು ಪರಿಶೀಲಿಸಲು ತನಿಖೆಯಲ್ಲಿ ಪರಿಣಿತಿ ಹೊಂದಿರುವ ಸಂಸ್ಥೆಗಳ ಮೊರೆ ಹೋಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇಂತಹ ಏಜೆನ್ಸಿಗಳಿಗೆ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಾಗಿ ವರದಿಯಾಗಿದೆ. ಬಹುತೇಕರು ಡಿವೋರ್ಸ್‌ ಪ್ರಕರಣಗಳಿಗೆ ಸಾಕ್ಷ್ಯ ಒದಗಿಸಲು ಅಥವಾ ವೈಯಕ್ತಿಕ ಅನುಮಾನಗಳಿಗೆ ಉತ್ತರ ಪಡೆಯಲು ಈ ಸೇವೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ನಗರದ ಅತ್ಯಂತ ವಿಶ್ವಾಸಾರ್ಹ ತನಿಖಾ ಸಂಸ್ಥೆಗಳಲ್ಲಿ ಒಂದಾದ ಸಿಟಿ ಇಂಟೆಲಿಜೆನ್ಸ್ ಪ್ರೈವೇಟ್ ಲಿಮಿಟೆಡ್ ವೈವಾಹಿಕ ದ್ರೋಹ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಕೇಳಿಬರುವ ವಿನಂತಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದೆ. ನಾವು ಗುಪ್ತವಾಗಿ ನಿಗಾ ಇಡುತ್ತೇವೆ. ದೃಶ್ಯ ಸಾಕ್ಷ್ಯ ಸಂಗ್ರಹ ಮತ್ತು ಅವರ ವರ್ತನೆ ಪರಿಶೀಲನೆ ಇವೆಲ್ಲವನ್ನು ಸಂಪೂರ್ಣ ಗೌಪ್ಯತೆಯೊಂದಿಗೆ ನಡೆಸುತ್ತೇವೆ ಎಂದು ಸಿಟಿ ಇಂಟೆಲಿಜೆನ್ಸ್‌ನ ಸಿಇಒ ರಾಜೀವ್ ಕುಮಾರ್ ಹೇಳಿದ್ದಾರೆ. ಎರಡು ದಶಕಕ್ಕೂ ಹೆಚ್ಚು ಅನುಭವ ಹೊಂದಿರುವ ಈ ಸಂಸ್ಥೆಯು ಫೋಟೋ ಮತ್ತು ವೀಡಿಯೋ ಸಾಕ್ಷ್ಯ, ಗುಪ್ತ ಕಾರ್ಯಾಚರಣೆಗಳು ಮತ್ತು ಡಿಜಿಟಲ್ ಫಾರೆನ್ಸಿಕ್ಸ್‌ ಮೂಲಕ ನ್ಯಾಯಾಲಯದಲ್ಲಿ ಬಳಕೆಯಾಗುವಂತೆ ಸಾಕ್ಷ್ಯಗಳನ್ನು ಒದಗಿಸುತ್ತದೆ. ಇತ್ತೀಚೆಗೆ ವೈಟ್‌ಫೀಲ್ಡ್‌ನ ಮಹಿಳೆಯೊಬ್ಬರ ವಿಚ್ಛೇದನ ಪ್ರಕರಣದಲ್ಲಿ ತಮ್ಮ ಪತಿಯ ಅಕ್ರಮ ಸಂಬಂಧ ಜೀವನದ ಸಾಕ್ಷ್ಯವನ್ನು ಈ ಸಂಸ್ಥೆಯೇ ಒದಗಿಸಿತ್ತು.

Do You Suspect Your Partner Having Extramarital Affair Bengaluru Detective Agencies Will Find Out

ಎಂಗೇಜ್‌ಮೆಂಟ್‌, ಮದುವೆ ವೇಳೆಯೇ ಅನುಮಾನ!

ಮತ್ತೊಂದು ಪ್ರಮುಖ ಸಂಸ್ಥೆ ವೆನಸ್ ಡಿಟೆಕ್ಟಿವ್ ಏಜೆನ್ಸಿ ಮತ್ತು ಸ್ಲೂಥ್ಸ್ ಇಂಡಿಯಾ ಕನ್ಸಲ್ಟೆನ್ಸಿಯೂ ಕೂಡ ಇದೇ ರೀತಿಯ ಸೇವೆ ಒದಗಿಸುತ್ತಿವೆ. ಎಂ.ಜಿ.ರಸ್ತೆಯಲ್ಲಿರುವ ವೆನಸ್ ಡಿಟೆಕ್ಟಿವ್ ಏಜೆನ್ಸಿಗೆ ಈಗ ಪ್ರತಿದಿನವೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಲವರು ತಮ್ಮ ನಿಶ್ಚಿತಾರ್ಥ ಅಥವಾ ಮದುವೆ ಮಾತುಕತೆ ನಡೆಯುತ್ತಿರುವ ಸಮಯದಲ್ಲೇ ತಮ್ಮ ಸಂಗಾತಿ ಬಗ್ಗೆ ಇತರೆ ಸಂಬಂಧಗಳನ್ನು ಪತ್ತೆ ಹಚ್ಚಿ ಖಚಿತಪಡಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ.

ನಗರದ ವಾತಾವರಣ ಮತ್ತು ಕುಟುಂಬದಿಂದ ದೂರವಿರುವ ಯುವ ಉದ್ಯೋಗಿಗಳ ಸಂಖ್ಯೆಯ ಹೆಚ್ಚಳವೂ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಬೆಂಗಳೂರು ದೊಡ್ಡ ವಲಸೆ ಜನಸಂಖ್ಯೆಯನ್ನು ಹೊಂದಿದೆ. ಯುವಕರು ಸ್ವತಂತ್ರವಾಗಿ ವಾಸಿಸುತ್ತಿರುವುದು ಕುಟುಂಬಗಳು ಮತ್ತು ಸಂಗಾತಿಗಳಲ್ಲಿ ಅನುಮಾನಕ್ಕೆ ಕಾರಣವಾಗುತ್ತದೆ ಎಂದು ಸ್ಲೂಥ್ಸ್ ಇಂಡಿಯಾ ಕನ್ಸಲ್ಟೆನ್ಸಿಯ ವ್ಯವಸ್ಥಾಪಕ ನಿರ್ದೇಶಕ ನಮನ ಜೈನ್ ಹೇಳಿದ್ದಾರೆ. ಈ ಸಂಸ್ಥೆ ಬೆಂಗಳೂರಿನಲ್ಲಿ ಮಾತ್ರ ತಿಂಗಳಿಗೆ ಸರಾಸರಿ 30 ವಿವಾಹ ಪೂರ್ವ ಸಂಬಂಧ ಮತ್ತು ವೈವಾಹಿಕ ದ್ರೋಹ ಕುರಿತು ತನಿಖೆಗಳನ್ನು ನಡೆಸುತ್ತಿದೆ.

Do You Suspect Your Partner Having Extramarital Affair Bengaluru Detective Agencies Will Find Out

ಪ್ರಮುಖ ಡಿಟೆಕ್ಟಿವ್ ಏಜೆನ್ಸಿಗಳ ಪಟ್ಟಿ ನೋಡಿದರೆ ಈಗ ಬೆಂಗಳೂರಿನಲ್ಲಿ ಹಲವು ಆಯ್ಕೆಗಳೇ ಮುಂದಿವೆ. ಬ್ಲೂ ಈಗಲ್ ಡಿಟೆಕ್ಟಿವ್ ನೆಟ್ವರ್ಕ್, ಶೈನ್ ಇಂಡಿಯಾ ಡಿಟೆಕ್ಟಿವ್ಸ್ ಅಂಡ್ ಇನ್ವೆಸ್ಟಿಗೇಟರ್ಸ್, ಗರುಡ ಡಿಟೆಕ್ಟಿವ್ ಸರ್ವೀಸಸ್, ಮಿಸ್ಟರ್ ಮೇಕ್ ಮತ್ತು 24x7 ಡಿಟೆಕ್ಟಿವ್ಸ್‌ ನಗರದಲ್ಲಿ ಅಕ್ರಮ ಸಂಬಂಧ ಪ್ರಕರಣಗಳಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ ಸಂಸ್ಥೆಗಳೆಂದು ಗುರುತಿಸಿಕೊಂಡಿವೆ.

ಈ ಡಿಟೆಕ್ಟಿವ್ ಸಂಸ್ಥೆಗಳು ತಮ್ಮ ಕೆಲಸವು ಕೇವಲ ವಂಚಕರನ್ನು ಹಿಡಿಯುವಷ್ಟೇ ಅಲ್ಲದೆ, ಸ್ಪಷ್ಟತೆ ಮತ್ತು ಸಾಕ್ಷಿಯನ್ನು ಒದಗಿಸುತ್ತವೆ. ನ್ಯಾಯಾಲಯದಲ್ಲಿ ನಿಜವಾದ ಸಾಕ್ಷ್ಯವೇ ಗೆಲ್ಲುತ್ತದೆ. ದೃಢವಾದ ಸಾಕ್ಷ್ಯವಿಲ್ಲದೆ, ನಿಜವೂ ಆರೋಪಗಳಲ್ಲಿ ಸೇರಿಕೊಳ್ಳುತ್ತವೆ. ಹಾಗಾಗಿ ಕೋರ್ಟ್‌ ಪರಿಗಣಿಸುವ ಸಾಕ್ಷಿಗಳನ್ನೇ ಈ ಏಜೆನ್ಸಿಗಳು ಒದಗಿಸುವ ಕೆಲಸ ಮಾಡುತ್ತಿವೆ. ಬೆಂಗಳೂರು ನಗರದ ಸಾಮಾಜಿಕ ಪರಿಸರ ಬದಲಾಗುತ್ತಿರುವಂತೆ ಖಾಸಗಿ ಡಿಟೆಕ್ಟಿವ್ ಸಂಸ್ಥೆಗಳ ಪಾತ್ರವು ವೈಯಕ್ತಿಕ ವಿವಾದಗಳನ್ನು ಬಗೆಹರಿಸುವಲ್ಲಿ ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಹೆಚ್ಚು ಮಹತ್ವ ಪಡೆದಿದೆ. ಹೀಗಾಗಿ ತಮ್ಮ ಸಂಗಾತಿ ಮೇಲಿನ ಅನುಮಾನಗಳನ್ನು ಈ ಡಿಟೆಕ್ಟಿವ್ ಸಂಸ್ಥೆಗಳು ದೂರ ಮಾಡುತ್ತಿವೆ. ದಿನೇ ದಿನೇ ಇದಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+