ಪಿಡ್ಜಾ, ಬರ್ಗರ್ ಬದಲು ದೇಸೀ ಆಹಾರ ತಿನ್ನಿ: ವೆಂಕಯ್ಯ ನಾಯ್ಡು
ಬೆಂಗಳೂರು, ಜೂನ್ 28: ವಿದೇಶಿ ಆಹಾರಗಳಾದ ಪಿಡ್ಜಾ, ಬರ್ಗರ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲಿಗೆ ದೇಸೀ ಆಹಾರ ತಿನ್ನಿ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ಘಟಕ ಉದ್ಘಾಟನೆಗೆ ಆಗಮಿಸಿದ್ದ ಅವರು ಕಾರ್ಯಕ್ರಮದಲ್ಲಿ ಮಾತಾನಡಿದರು.
ಕನ್ನಡ, ಇಂಗ್ಲಿಷ್, ತೆಲುಗು, ಹಿಂದಿ ಭಾಷೆಗಳಲ್ಲಿ ಮಾತನಾಡಿದ ಅವರು, ಆರೋಗ್ಯದ ಮಹತ್ವ ಹಾಗೂ ಅದನ್ನು ಕಾಪಾಡಿಕೊಳ್ಳುವುದು ಏಕೆ ಅವಶ್ಯ ಎಂಬುದರ ಬಗ್ಗೆ ತಿಳಿಹೇಳಿದರು.

ಆಹಾರಕ್ಕೂ ಸಂಸ್ಕೃತಿಗೂ ನಂಟಿದೆ ಎಂದ ಅವರು, ಕರ್ನಾಟಕದಲ್ಲಿ ರಾಗಿ ಮುದ್ದೆ, ಕೋಳಿ ಸಾರು, ಇಡ್ಲಿ, ಬಿಸಿಬೇಳೆಬಾತ್, ರವಾ ಇಡ್ಲಿ ಹೀಗೆ ಹಲವು ರುಚಿಕರ ದೇಸೀ ಆಹಾರಗಳು ಲಭ್ಯವಿವೆ, ಇವು ನಾಲಗೆಗೆ ರುಚಿ ಆರೋಗ್ಯಕ್ಕೆ ಹಿತ ಎಂದರು.
ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಇನ್ನಷ್ಟು ಉಲ್ಬಣಿಸುವ ಸಾಧ್ಯತೆ ಇದೆ ಎಂದ ಅವರು, 2016ರಲ್ಲಿ 5 ಲಕ್ಷ ಜನ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. 2020ರಲ್ಲಿ ಈ ಸಂಖ್ಯೆ 17.30 ಲಕ್ಷ ಜನ ಸಾವುಯ ಭಯವಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲ, ಮುಖ್ಯಮಂತ್ರಿ ಕುಮಾರಸ್ವಾಮಿ, ಉನ್ನತ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು.












Click it and Unblock the Notifications