D.K. Shivakumar: ನನ್ನ ಖಾಸಗಿ ಸ್ಕೂಲ್‌ನಲ್ಲಿ ಇಷ್ಟು ಲಕ್ಷ ಫೀಸ್ ಎಂದ ಡಿ.ಕೆ ಶಿವಕುಮಾರ್!
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಅವರ ಖಾಸಗಿ ಸ್ಕೂಲ್ ಫೀಸ್‌ನ ಬಗ್ಗೆ ಮಾತನಾಡಿದ್ದು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶೆಟ್ಟಿಹಳ್ಳಿ ಸಮೀಪದಲ್ಲಿ ಇರುವ ಖಾಸಗಿ ಶಾಲೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. ಇಲ್ಲಿನ ಶಾಲೆ ಉದ್ಘಾಟನಾ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. ಈ ಸಮಾರಂಭದಲ್ಲಿ ಶಾಲಾ ಫೀಸ್‌ನ ಬಗ್ಗೆ ಅವರು ಮಾತನಾಡಿದ್ದು ಭಾರೀ ಕುತೂಹಲ ಮೂಡಿದೆ. ಡಿ.ಕೆ ಶಿವಕುಮಾರ್ ಅವರು ಸ್ಕೂಲ್‌ವೊಂದನ್ನು ನಡೆಸುತ್ತಿದ್ದು. ಆ ಖಾಸಗಿ ಶಾಲೆಯ ಫೀಸ್‌ನ ಬಗ್ಗೆ ಮಾತನಾಡಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಶೆಟ್ಟಿಹಳ್ಳಿಯಲ್ಲಿ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ನಾನು ಸಹ ಬೆಂಗಳೂರಿನಲ್ಲಿ ಸ್ಕೂಲ್ ನಡೆಸುತ್ತಿದ್ದೇನೆ. ಅಲ್ಲೂ ಸಹ ಸಿಬಿಎಸ್ ಸಿಲಬಸ್ ಇದೆ ಎಂದು ಅವರು ಹೇಳಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ನನಗೆ 25 ವರ್ಷಗಳ ಅನುಭವ ಇದೆ. ನನಗೆ ಈಗ ಸಮಯ ಇಲ್ಲ ಅಂತ ಆ ಜವಾಬ್ದಾರಿಗಳನ್ನು ಮಕ್ಕಳಿಗೆ ಬಿಟ್ಟುಕೊಟ್ಟಿದ್ದೇನೆ. ಮಕ್ಕಳು ಇದೀಗ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ನಡುವೆ ಅವರ ಶಾಲೆಯಲ್ಲಿ ಫೀಸ್ ಎಷ್ಟು ನಿಗದಿ ಮಾಡಲಾಗಿದೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.

ಎಲ್ಲರಿಗೂ ಕ್ವಾಲಿಟಿ ಎಜುಕೇಷನ್ ಕೊಡಬೇಕು. ಇಲ್ಲಿ ಮಳವಳ್ಳಿಯಲ್ಲಿ ಇರುವ / ಖಾಸಗಿ ಶಾಲೆಯಲ್ಲಿ ಯಾರೂ ಸಹ ಕಡಿಮೆ ಬೆಲೆಗೆ ಸೀಟ್ ಕೊಡಿ ,ಫೀಸ್ ಜಾಸ್ತಿ ಆಗೋಯ್ತು ಎನ್ನುವವರು ಇದ್ದರೆ ಯಾರು ಇಲ್ಲಿಗೆ ಬರುವುದಕ್ಕೇ ಹೋಗಬೇಡಿ ಇದರಿಂದ ಕ್ವಾಲಿಟಿ ಹಾಳಾಗುತ್ತದೆ ಅಂತ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಗ್ರಾಮೀಣ ಭಾಗಕ್ಕೆ ಸ್ಕೀಂ ಯೋಚಿಸಿದ್ದೀನಿ
ಇನ್ನು ಗ್ರಾಮೀಣ ಭಾಗಕ್ಕೆ ನಾನು ಸ್ಕೀಂವೊಂದನ್ನು ಯೋಚನೆ ಮಾಡಿದ್ದೀನಿ ಅಂತ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 2000 ಸಾವಿರ ಸ್ಕೂಲ್‌ಗಳನ್ನು ಅಂದರೆ 2ರಿಂದ 3 ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ಮಾದರಿಯ ಸ್ಕೂಲ್‌ಗಳನ್ನು ನಿರ್ಮಾಣ ಮಾಡುವುದಾಗಿ ಅವರು ಹೇಳಿದ್ದಾರೆ. ಇಡೀ ರಾಜ್ಯದಲ್ಲಿ ನಾವು ಈ ರೀತಿ ಶಾಲೆಗಳನ್ನು ಅಭಿವೃದ್ಧಿ ಮಾಡಲಿದ್ದೇವೆ. ಜನ ನಗರಗಳಿಗೆ ಬರುವುದನ್ನು ತಪ್ಪಿಸುವ ಅವಶ್ಯಕತೆ ಇದೆ.

ತಂದೆ - ತಾಯಂದಿರುವ ಉದ್ಯೋಗ ಹಾಗೂ ಮಕ್ಕಳ ವಿದ್ಯಾಭ್ಯಾಸ ಕಾರಣಕ್ಕಾಗಿ ನಗರ ಪ್ರದೇಶಗಳಿಗೆ ಬರುತ್ತಿದ್ದಾರೆ. ಇದನ್ನು ತಪ್ಪಿಸುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಡಿ.ಕೆ ಶಿವಕುಮಾರ್ ಸ್ಕೂಲ್ ಫೀಸ್ ಎಷ್ಟಿದೆ ?
ಇನ್ನು ಇದೇ ಸಮಾರಂಭದಲ್ಲಿ ಡಿ.ಕೆ ಶಿವಕುಮಾರ್ ಅವರು ಅವರ ಖಾಸಗಿ ಶಾಲೆಯಲ್ಲಿ ಎಷ್ಟು ಫೀಸ್ ನಿಗದಿ ಮಾಡಲಾಗಿದೆ ಎನ್ನುವ ಬಗ್ಗೆ ಹೇಳಿದ್ದಾರೆ. ನನ್ನ ಖಾಸಗಿ ಶಾಲೆಯಲ್ಲಿ ಸಿಬಿಎಸ್ ಸಿಲಬಸ್ ಇದ್ದು. 1.50 ಲಕ್ಷ ನಿಗದಿ ಮಾಡಿದ್ದೇನೆ. ಅದೇ ಮಂಡ್ಯದಲ್ಲಿ 40,000 ಸಾವಿರ ರೂಪಾಯಿ ಇದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications