• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ದರಾಮಯ್ಯ ಜೊತೆ ಶೀತಲ ಸಮರ: ಡಿಕೆಶಿ ಹೇಳಿದ್ದೇನು?

|
   ಸಿದ್ದರಾಮಯ್ಯ ಜೊತೆ ಶೀತಲ ಸಮರದ ಬಗ್ಗೆ ಮಾತನಾಡಿದ ಡಿಕೆಶಿ | Oneindia Kannada

   ಬೆಂಗಳೂರು, ಆಗಸ್ಟ್ 28: "ನನಗೆ ವಿರೋಧ ಪಕ್ಷದ ನಾಯಕನಾಗಲು ಅರ್ಜೆಂಟ್ ಇಲ್ಲ. ಯಾರ್ಯಾರಿಗೆ ಅರ್ಜೆಂಟ್ ಇದೆಯೋ ಅವರು ಆಗಲಿ" ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದರು.

   ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕಾಗಿ ಪೈಪೋಟಿ ಇದೆ, ಅವರಿಬ್ಬರ ನಡುವೆ ಶಿತಲ ಸಮರ ಏರ್ಪಟ್ಟಿದೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, "ಸಿದ್ದರಾಮಯ್ಯ ಅವರ ವಿರುದ್ಧ ನಾನ್ಯಾಕೆ ಹೋಗಲಿ? ಅವರು ಹಲವು ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದವರು. ಅವರೊಂದಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ಹುದ್ದೆ, ಅಧಿಕಾರಕ್ಕಾಗಿ ಅಂಥ ಕೆಲಸ ಮಾಡುವವನು ನಾನಲ್ಲ. ನನಗೆ ಯಾವ ಹುದ್ದೆಯನ್ನೂ ಪಡೆಯುವುದಕ್ಕೆ ಅವಸರವಿಲ್ಲ" ಎಂದರು.

   ಡಿಕೆಶಿಗೆ ಹೆಚ್ಚಿನ ಶಕ್ತಿ, ಸಿದ್ದರಾಮಯ್ಯ ಯುಗಾಂತ್ಯ? ಹೈಕಮಾಂಡ್ ಪ್ಲಾನ್ ಏನು?

   "ಸಿದ್ದುಗೆ ಡಿಕೆಶಿ ಟಾಂಗ್ ಎಮದು ಕೆಲವು ಮಾಧ್ಯಮಗಳು ಹೇಳಿದರು. ಆದರೆ ನಾನ್ಯಾಕೆ ಅವರಿಗೆ ಟಾಂಗ್ ನೀಡಲಿ? ಅವರು ಮುಖ್ಯಮಂತ್ರಿಯಾಗಿದ್ದವರು. ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ನನಗೆ ಯಾವುದೇ ಹುದ್ದೆ, ಅಧಿಕಾರ,ಕಾರು, ಬಂಗಲೆಯ ಅಗತ್ಯವಿಲ್ಲ. ಯಾರ್ಯಾರಿಗೆ ಅವೆಲ್ಲ ಅರ್ಜೆಂಟ್ ಇದೆಯೋ ಮಾಡಿಕೊಳ್ಳಲಿ" ಎಂದು ವ್ಯಂಗ್ಯವಾಗಿ ಡಿಕೆಶಿ ಹೇಳಿದರು.

   ಸಮ್ಮಿಶ್ರ ಸರ್ಕಾರ ಬಿದ್ದ ಮೇಲೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಗುದ್ದಾಟ ನಡೆಯುತ್ತಿದೆ ಎನ್ನಲಾಗಿದ್ದು, ಆ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.

   English summary
   Congress leader, and former minister DK Shivakumar's reaction About His cold war with Former CM Siddaramaiah for opposition leaders post.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X