ಅನಾರೋಗ್ಯ ನಾಟಕವಾಡಿದ ಮಾಜಿ ಮೇಯರ್ ಸಂಪತ್‌ ರಾಜ್‌ ಎಲ್ಲಿ?

ಬೆಂಗಳೂರು, ನ. 12: ಒಬ್ಬ ಸಭ್ಯ ನಾಗರಿಕನಾಗಿ ಸಂಪತ್‌ರಾಜ್‌ ಪೊಲೀಸರ ಮುಂದೆ ಶರಣಾಗಬೇಕು ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಸುಟ್ಟುಹೋಗಿದ್ದ ದ್ವಿಚಕ್ರ ವಾಹನಗಳಿಗೆ ಪ್ರತಿಯಾಗಿ ಟಿವಿಎಸ್ ಕಂಪನಿ ನೀಡಿದ ವಾಹನಗಳನ್ನು ಪೊಲೀಸರಿಗೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೃಹ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಅಖಂಡ ಶ್ರೀನಿವಾಸ್‌ ಅವರು ಅಸಹಾಯಕರಾಗಿ ಮಾತನಾಡಿದ್ದನ್ನು ಗಮನಿಸಿದ್ದೇನೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ನ್ಯಾಯಾಲಯದ ಎಲ್ಲಾ ಅವಕಾಶಗಳು ಮುಗಿದಿವೆ. ಅವರೇ ಸಭ್ಯ ನಾಗರಿಕರಾಗಿ ಪೊಲೀಸರ ಮುಂದೆ ಶರಣಾಗಬೇಕು. ತಪ್ಪಿದಲ್ಲಿ ಪೊಲೀಸರೇ ಅವರನ್ನು ಬಂಧಿಸುತ್ತಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಸಂಪತ್ ರಾಜ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು, ಹೊರ ರಾಜ್ಯಕ್ಕೆ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಸಂಪತ್ ರಾಜ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಅವರ ಕುಟುಂಬದವರನ್ನು ಪತ್ತೆ ಹಚ್ಚುವ ಪ್ರಯತ್ನ ಕೂಡ ವಿಫಲವಾಗಿದೆ. ಅವರ ಕುಟುಂಬದವರೂ ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಸಂಪತ್ ರಾಜ್ ಇರುವಿಕೆಯ ಬಗ್ಗೆ ಸಿಸಿಬಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಅವರನ್ನು ಶೀಘ್ರವೇ ಬಂಧಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ.

ಜವಾಬ್ದಾರಿಯುತ ವ್ಯಕ್ತಿಯಾಗಿ ವಿಚಾರಣೆ ಎದುರಿಸಬೇಕು

ಜವಾಬ್ದಾರಿಯುತ ವ್ಯಕ್ತಿಯಾಗಿ ವಿಚಾರಣೆ ಎದುರಿಸಬೇಕು

ಸಂಪತ್‌ರಾಜ್‌ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ವಿಚಾರಣೆ ಎದುರಿಸಬೇಕು. ಅವರಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದೆ. ಸಾರ್ವಜನಿಕ ಆಸ್ತಿಗೆ ನಷ್ಟವುಂಟಾಗಿದೆ. ವಿದೇಶಕ್ಕೆ ಹೋಗದಂತೆ ಲುಕ್‌ಔಟ್‌ ನೋಟಿಸ್ ಹೊರಡಿಸಲಾಗಿದೆ. ನಮ್ಮ ಪೊಲೀಸರು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಹೆಚ್ಚು ಮಾತನಾಡುವುದಿಲ್ಲ ಎಂದರು.

ಸಂಪತ್‌ರಾಜ್ ಎಲ್ಲಿ?

ಸಂಪತ್‌ರಾಜ್ ಎಲ್ಲಿ?

ಸಂಪತ್‌ರಾಜ್ ಎಲ್ಲಿ? : ಶಾಸಕ ಅಖಂಡ ಶ್ರೀನಿವಾಸ್‌ ಮನೆ ಮೇಲೆ ದಾಳಿ, ಡಿ.ಜೆ ಹಳ್ಳಿ ಗಲಭೆ ದಾಳಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿರುವ ಮಾಜಿ ಮೇಯರ್ ಸಂಪತ್‌ರಾಜ್‌ಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ. ಅನಾರೋಗ್ಯ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಪರಾರಿಯಾಗಿರುವ ಸಂಪತ್‌ರಾಜ್‌ ದೇಶ ಬಿಟ್ಟು ಹೋಗದಂತೆ ಲುಕ್ಔಟ್‌ ನೋಟಿಸ್ ಹೊರಡಿಸಲಾಗಿದೆ.

ಸಿಸಿಬಿ ಪೊಲೀಸರ ಶೋಧ ಕಾರ್ಯ

ಸಿಸಿಬಿ ಪೊಲೀಸರ ಶೋಧ ಕಾರ್ಯ

ಸಂಪತ್‌ರಾಜ್‌ಗಾಗಿ ಸಿಸಿಬಿ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ. ಡಿ.ಜೆ.ಹಳ್ಳಿ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಸಂಪತ್‌ ರಾಜ್‌ ಅವರ ಮೇಲಿತ್ತು. ಈ ವಿಷಯ ತನಿಖೆ ವೇಳೆ ಬೆಳಕಿಗೆ ಬರುತ್ತಿದ್ದಂತೆ, ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು.
ಅನಾರೋಗ್ಯ ನೆಪ ನೀಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್‌ರಾಜ್‌ ಅಲ್ಲಿಂದಲೇ ರಾತ್ರೋ ರಾತ್ರಿ ಪರಾರಿಯಾಗಿದ್ದರು.

ಆನಾರೋಗ್ಯ ನಾಟಕ ಎಂದು ಗೊತ್ತಾಗಿದೆ

ಆನಾರೋಗ್ಯ ನಾಟಕ ಎಂದು ಗೊತ್ತಾಗಿದೆ

ಆನಾರೋಗ್ಯ ನಾಟಕ ಎಂದು ಗೊತ್ತಾದ ಕೂಡಲೇ ಸಿಸಿಬಿ ಪೊಲೀಸರು ಖಾಸಗಿ ಆಸ್ಪತ್ರೆಯ ವೈದ್ಯರಿಗೆ ನೋಟಿಸ್ ನೀಡಿ ಸಂಪತ್‌ರಾಜ್‌ ಅವರ ಅನಾರೋಗ್ಯ ಕುರಿತ ದಾಖಲೆಗಳನ್ನು ನೀಡುವಂತೆ ಕೇಳಿದ್ದರು. ಹಲವು ದಿನಗಳಿಂದ ತಲೆ ಮರೆಸಿಕೊಂಡಿರುವ ಸಂಪತ್‌ ರಾಜ್‌ಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+