ಹಿಟ್ಲರ್ ಜೊತೆ ಮೋದಿ ಹೋಲಿಕೆ ಚಿತ್ರ, ರಮ್ಯಾ ಕಿವಿಹಿಂಡಿದ ಟ್ವಿಟ್ಟಿಗರು
Recommended Video
ಬೆಂಗಳೂರು, ಏಪ್ರಿಲ್ 29 : ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ಸರ್ಕಾರದ ಸಾಧನೆ, ಹುಳುಕುಗಳನ್ನು ತೋರಿಸುವ ಚಿತ್ರಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಹಂಚಿಕೊಂಡು ಟ್ವಿಟ್ಟರ್ ನಲ್ಲಿ ಕಿತ್ತಾಡುವುದನ್ನು ನೋಡಿರಬಹುದು. ಅದರಲ್ಲೂ ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅವರಿಗೆ ಪ್ರಧಾನಿ ಮೋದಿಯೆ ಟಾರ್ಗೆಟ್.
ರಮ್ಯಾ ಅವರು ಇಂದು ಟ್ವೀಟ್, ಇನ್ಸ್ಟಾಗ್ರಾಂ ಪೋಸ್ಟ್ ಗಳಲ್ಲಿ ಇಬ್ಬರು ನಾಯಕರು ಮಗುವೊಂದರ ಕಿವಿ ಹಿಂಡುತ್ತಿರುವ ಚಿತ್ರದ ಕೊಲಾಜ್ ಹಂಚಿಕೊಂಡಿದ್ದಾರೆ. ಚಿತ್ರದ ಎಡಬದಿಯಲ್ಲಿ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರು ಮಗುವಿನ ಕಿವಿ ಹಿಂಡುತ್ತಿದ್ದರೆ, ಬಲಬದಿಯಲ್ಲಿ ಮೋದಿ ಅವರು ಕಿವಿ ಹಿಂಡುತ್ತಿದ್ದಾರೆ. ಇದಕ್ಕೆ ಅಡಿಬರಹ ನೀಡಿ, Speaking of Similarities ಎಂದು ರಮ್ಯಾ ಹೇಳಿದ್ದಾರೆ.
ಟ್ವೀಟ್ ಗೆ ಸದ್ಯಕ್ಕೆ 410 ರೀಟ್ವೀಟ್ಸ್ 1322 ಲೈಕ್ಸ್ ಬಂದಿದೆ. ಇದಕ್ಕೆ ಭಾರಿ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ. insta ದಲ್ಲಿ ಸಿಕ್ಕ ಪ್ರತಿಕ್ರಿಯೆಗಳು ಬಂದಿವೆ.
* 'ಮೊದಲು ವೋಟ್ ಮಾಡು, ಆಮೇಲೆ ಬೇರೆಯವರ ಬಗ್ಗೆ ಮಾತಾಡು', -ಮನುವಿಷ್ಣುವರ್ಧನ್.
* ನೆಗಟಿವ್ ಪಬ್ಲಿಸಿಟಿ ಮಾಡುವ ಬದಲು ನಿಮ್ಮ ಕೆಲಸ ಸರಿಯಾಗಿ ನಿರ್ವಹಿಸಿದರೆ ಏನಾದರೂ ಸಾಧಿಸಬಹುದು'-apoorvasridhara
* ಈ ಸಲ ಅಧಿಕಾರಕ್ಕೆ ಬಂದರೆ ಹಿಟ್ಲರ್ ಆಡಳಿತ ಪಕ್ಕಾನೆ, ಅದು ಗೆಲ್ಲೋದು ಇವಿಎಂ ನ ಹ್ಯಾಕ್ ಮಾಡಿ, ಇಲ್ಲಾ ಅಂದ್ರೆ 150 ಸೀಟು ಸಿಗಲ್ಲ ಈ ಸರ್ತಿ-crazy_hunter6969
* ಮೋದಿ ಅವರ ಚಿತ್ರದಲ್ಲಿ ಅವರಿಗೆ 6 ಬೆರಳುಗಳಿವೆ ಎಂದು ತೋರಿಸಲಾಗಿದೆ.
ಟ್ವಿಟ್ಟರ್ ನಲ್ಲಿ ಬಂದ ಪ್ರತಿಕ್ರಿಯೆಗಳು ಮುಂದೆ ಇವೆ ಓದಿ.. ಆಯಾ ಟ್ವೀಟ್ ಗಳಿಗೆ ಆಯಾ ಖಾತೆದಾರರೆ ಜವಾಬ್ದಾರರು.
|
ರಮ್ಯಾ ಟ್ವೀಟ್ ನಲ್ಲಿ ಏನಿದೆ?
ರಮ್ಯಾ ಅವರು ಇಂದು ಟ್ವೀಟ್, ಇನ್ಸ್ಟಾಗ್ರಾಂ ಪೋಸ್ಟ್ ಗಳಲ್ಲಿ ಇಬ್ಬರು ನಾಯಕರು ಮಗುವೊಂದರ ಕಿವಿ ಹಿಂಡುತ್ತಿರುವ ಚಿತ್ರದ ಕೊಲಾಜ್ ಹಂಚಿಕೊಂಡಿದ್ದಾರೆ. ಚಿತ್ರದ ಎಡಬದಿಯಲ್ಲಿ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರು ಮಗುವಿನ ಕಿವಿ ಹಿಂಡುತ್ತಿದ್ದರೆ, ಬಲಬದಿಯಲ್ಲಿ ಮೋದಿ ಅವರು ಕಿವಿ ಹಿಂಡುತ್ತಿದ್ದಾರೆ. ಇದಕ್ಕೆ ಅಡಿಬರಹ ನೀಡಿ, Speaking of Similarities ಎಂದು ರಮ್ಯಾ ಹೇಳಿದ್ದಾರೆ.
|
ಇದು ಫೋಟೋಶಾಪ್
ಇದು ಫೋಟೊಶಾಪ್ ಹೈ ಆಂಟಿ, ಡಿಲೀಟ್ ಮಾಡಿ ಎಂದು ರಮ್ಯಾ ಅವರಿಗೆ ಅಸಲಿ ಫೋಟೋ ಇಲ್ಲಿದೆ ಎಂದು ಚಿತ್ರ ಸಮೇತ ಟ್ವೀಟ್
|
ಹಿಟ್ಲರ್ ಕುಟುಂಬ ರಾಜೀವ್ ಗಾಂಧಿ ಕುಟುಂಬ
ಹಿಟ್ಲರ್ ಕುಟುಂಬ ಹಾಗೂ ರಾಜೀವ್ ಗಾಂಧಿ ಕುಟುಂಬದ ಚಿತ್ರದ ಕೊಲಾಜ್ ಹಾಕಿ ಇದು ಹೋಲಿಕೆ ಮಾಡಲು ಯೋಗ್ಯ ಎಂದಿದ್ದಾರೆ.
|
ತಂದೆ-ತಾಯಿ ನಿನಗೆ ಕಿವಿ ಹಿಂಡಿ ಬುದ್ದಿ ಹೇಳಿದ್ದರೆ
ಮೋದಿ ಮತ್ತು ಹಿಟ್ಲರ್ ಅವರು ಮಕ್ಕಳಿಗೆ ಕಿವಿ ಹಿಡಿದು ತಪ್ಪು ಮಾಡಬಾರದು, ಸುಳ್ಳು ಹೇಳಬಾರದು, ದೇಶವೇ ನಮ್ಮ ತಂದೆ ತಾಯಿ, ದೇಶಕ್ಕೆ ದ್ರೋಹ ಬಗೆಯಬಾರದು ಅಂತ ಬುದ್ದಿ ಹೇಳುತ್ತಿದ್ದಾರೆ ಅಂತ ನನಗೆ ಅನ್ನಿಸ್ತಾ ಇದೆ. ಅದೇ ರೀತಿ ನಿಮ್ಮ ತಂದೆ-ತಾಯಿ ನಿನಗೆ ಕಿವಿ ಹಿಂಡಿ ಬುದ್ದಿ ಹೇಳಿದ್ದರೆ ಒಳ್ಳೆಯ ಬುದ್ದಿ ಬರುತ್ತಿತ್ತು.












Click it and Unblock the Notifications